ಸರ್ಕಾರ ಬಡವರಿಗೆ ಅಕ್ಕಿ, ಗೋಧಿಯನ್ನು ಉಚಿತವಾಗಿ ನೀಡ್ತಿದೆ. ಅದ್ರ ಲಾಭ ಪಡೆಯಬೇಕೆಂದ್ರೆ ರೇಷನ್ ಕಾರ್ಡ್ ಇರಬೇಕು. ನಿಮ್ಮ ಕುಟುಂಬದ ಎಲ್ಲ ಸದಸ್ಯರ ಹೆಸರು ಅದ್ರಲ್ಲಿದ್ರೆ ಹೆಚ್ಚಿನ ಪಡಿತರ ನಿಮಗೆ ಸಿಗುತ್ತದೆ. ಇದ್ರಿಂದ ಹೊಟ್ಟೆಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗೋದಿಲ್ಲ.
ಸರ್ಕಾರ ಬಡವರಿಗೆ ಕಡಿಮೆ ದರದಲ್ಲಿ ಪಡಿತರ ನೀಡುವ ಉದ್ದೇಶದಿಂದ ಪಡಿತರ ಯೋಜನೆ ಜಾರಿಗೆ ತಂದಿದೆ. ಹಳ್ಳಿಯಿಂದ ನಗರದವರೆಗೆ ಎಲ್ಲೆಡೆ ನಿಮಗೆ ಪಡಿತರ ಸಿಗುತ್ತದೆ. ಯಾವುದೇ ಪಡಿತರ ಅಂಗಡಿಯಲ್ಲಿ ರೇಷನ್ ಕಾರ್ಡ್ ತೋರಿಸಿ ನೀವು ಪಡಿತರ ಪಡೆಯಬಹುದು. ಪಡಿತರ ಚೀಟಿಯಲ್ಲಿ ಮನೆಯ ಎಲ್ಲ ಸದಸ್ಯರ ಹೆಸರು ಸೇರಿಸಬೇಕಾಗುತ್ತದೆ. ನಾವಿಂದು ಮನೆಯಲ್ಲಿರುವ ಮಕ್ಕಳ ಹೆಸರನ್ನು ರೇಷನ್ ಕಾರ್ಡಿನಲ್ಲಿ ಸೇರಿಸೋದು ಹೇಗೆ ಎಂದು ನಿಮಗೆ ಹೇಳ್ತೆವೆ.
ಪಡಿತರ (Ration) ಚೀಟಿ ಪ್ರಯೋಜನ : ಪಡಿತರ ಚೀಟಿ ಹೊಂದಿರುವ ಮೂರು ಸದಸ್ಯರಿರುವ ಕುಟುಂಬ (Family) ಕ್ಕೆ ಸರ್ಕಾರ 35 ಕೆಜಿ ಹಾಗೂ ಮೂರಕ್ಕಿಂತ ಹೆಚ್ಚು ಸದಸ್ಯರಿರುವ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆಜಿ ಪಡಿತರ ನೀಡುತ್ತದೆ. ಪಡಿತರ ಚೀಟಿ ಬರೀ ಪಡಿತರ ಪಡೆಯಲು ಮಾತ್ರ ಪ್ರಯೋಜನ (Benefit) ಕಾರಿಯಲ್ಲ. ಇದು ದಾಖಲೆ ರೂಪದಲ್ಲಿ ಕೆಲಸ ಮಾಡುತ್ತದೆ. ನೀವು ಅನೇಕ ಸರ್ಕಾರಿ ಸೇವೆಗಳನ್ನು ಪಡೆಯಲು ರೇಷನ್ ಕಾರ್ಡನ್ನು ದಾಖಲೆಯಾಗಿ ನೀಡಬಹುದು. ಮನೆಯಲ್ಲಿರುವ ಮಗುವಿನ ಹೆಸರನ್ನು ಕೂಡ ರೇಷನ್ ಕಾರ್ಡಿನಲ್ಲಿ ಸೇರಿಸುವುದು ಮುಖ್ಯ.
ಎಸ್ ಬಿಐಯಲ್ಲಿವೆ 6 ವಿಧದ ಉಳಿತಾಯ ಖಾತೆಗಳು; ಯಾರು, ಯಾವುದರಲ್ಲಿ ಹೂಡಿಕೆ ಮಾಡಬಹುದು?
ಪಡಿತರ ಚೀಟಿಯಲ್ಲಿ ಮಕ್ಕಳ (Children) ಹೆಸರು : ಪಡಿತರ ಚೀಟಿಯಲ್ಲಿ ಮಕ್ಕಳ ಹೆಸರನ್ನು ಸೇರಿಸುವುದು ತುಂಬಾ ಸುಲಭ. ನೀವು ಆನ್ಲೈನ್ (Online) ಮೂಲಕ ಹಾಗೂ ಆಫ್‌ಲೈನ್ (Offline) ಮೂಲಕ ಎರಡೂ ರೀತಿಯಲ್ಲಿ ಅರ್ಜಿ ಸಲ್ಲಿಸಬಹುದು.
ಪಡಿತರ ಚೀಟಿಯಲ್ಲಿ ಮಕ್ಕಳ ಹೆಸರು ಸೇರಿಸಲು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಹೇಗೆ? : ಮೊದಲು ನೀವು ನಿಮ್ಮ ಹತ್ತಿರದ ಆಹಾರ ಸರಬರಾಜು ಕೇಂದ್ರಕ್ಕೆ ಹೋಗ್ಬೇಕು. ಅಲ್ಲಿ ಪಡಿತರ ಚೀಟಿಯಲ್ಲಿ ಸದಸ್ಯರ ಹೆಸರನ್ನು ಸೇರಿಸಲು ಅರ್ಜಿ ತೆಗೆದುಕೊಂಡು ಫಾರ್ಮ್ ಭರ್ತಿ ಮಾಡ್ಬೇಕು. ನಂತ್ರ ಅರ್ಜಿಯಲ್ಲಿ ಕೇಳಿದ ಎಲ್ಲ ವಿವರವನ್ನು ಭರ್ತಿ ಮಾಡಬೇಕು. ಅದಕ್ಕೆ ಅಗತ್ಯವಿರುವ ದಾಖಲೆಯನ್ನು ಲಗತ್ತಿಸಬೇಕು. ಈ ಎಲ್ಲ ಕೆಲಸ ಪೂರ್ಣಗೊಂಡ ಮೇಲೆ ನೀವು ಫಾರ್ಮನ್ನು ಆಹಾರ ಸರಬರಾಜು ಕೇಂದ್ರಕ್ಕೆ ಸಲ್ಲಿಸಬೇಕು. ನಿಮ್ಮಿಂದ ಫಾರ್ಮ್ ಪಡೆದ ಸಿಬ್ಬಂದಿ ನೀಡುವ ರಸೀದಿಯನ್ನು ನೀಡುತ್ತಾರೆ. ಈ ರಸೀದಿಯನ್ನು ನೀವು ಸುರಕ್ಷಿತವಾಗಿಟ್ಟುಕೊಳ್ಳಿ. ಅದ್ರ ಸಹಾಯದಿಂದ ನೀವು ಪಡಿತರ ಚೀಟಿಯ ಸ್ಥಿತಿಯನ್ನು ಪರಿಶೀಲಿಸಬಹುದು. ಇಲ್ಲಿಗೆ ನಿಮ್ಮ ಕೆಲಸ ಮುಗಿಯುತ್ತದೆ. ನಿಮ್ಮ ದಾಖಲೆ ಪರಿಶೀಲಿಸಿದ ನಂತ್ರ ಸಿಬ್ಬಂದಿ ಮುಂದಿನ ಕೆಲಸ ಮಾಡ್ತಾರೆ.
ಆನ್ಲೈನ್ ಮೂಲಕ ರೇಷನ್ ಕಾರ್ಡ್ ಗೆ ಹೆಸರು ಸೇರಿಸೋದು ಹೇಗೆ? : ಆನ್‌ಲೈನ್‌ನಲ್ಲಿ ಮಗುವಿನ ಹೆಸರನ್ನು ಸೇರಿಸಲು ಬಯಸಿದರೆ ನಿಮ್ಮ ರಾಜ್ಯದ ಆಹಾರ ಇಲಾಖೆ ವೆಬ್ ಸೈಟ್ ಗೆ ಹೋಗುವ ಮೂಲಕ ನೀವು ಹೆಸರು ಸೇರಿಸಬೇಕಾಗುತ್ತದೆ. ನೀವು ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವವರಾಗಿದ್ದರೂ ಆನ್ಲೈನ್ ಮೂಲಕ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಫ್ರಿಂಟ್ ತೆಗೆದುಕೊಳ್ಳಬಹುದು.
ಫ್ಯಾಷನ್‌ಗೆ ತಕ್ಕಂತೆ ಅಪ್‌ಡೇಟ್ ಆದ್ರೆ ಅರ್ನ್ ಮಾಡಬಹುದು ನೋಡಿ!
ಮಕ್ಕಳ ಹೆಸರು ಸೇರಿಸಲು ಅಗತ್ಯವಿರುವ ದಾಖಲೆ : ಅರ್ಜಿ ಜೊತೆ ನೀವು ಅಗತ್ಯ ದಾಖಲೆಗಳನ್ನು ನೀಡಬೇಕಾಗುತ್ತದೆ. ರೇಷನ್ ಕಾರ್ಡ್ ನಲ್ಲಿ ಮಕ್ಕಳ ಹೆಸರು ಸೇರಿಸಲು ಪಾಲಕರ ಆಧಾರ್ ಕಾರ್ಡ್ ನಕಲನ್ನು ನೀಡಬೇಕು. ಮಗುವಿನ ಜನನ ಪ್ರಮಾಣಪತ್ರ, ಮಗುವಿನ ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿ, ಮೊಬೈಲ್ ನಂಬರನ್ನು ನೀವು ನೀಡಬೇಕಾಗುತ್ತದೆ. ಸರ್ಕಾರ ಅಕ್ಕಿ, ಸಕ್ಕರೆ, ಉಪ್ಪು ಮತ್ತು ಗೋಧಿಯನ್ನು ಪಡಿತರ ಚೀಟಿ ಮೂಲಕ ನೀಡುತ್ತದೆ. ಇದರಿಂದ ಬಡವರಿಗೆ ಆರ್ಥಿಕ ನೆರವು ದೊರೆಯುತ್ತದೆ. ಮಕ್ಕಳ ಹೆಸರನ್ನು ಪಡಿತರ ಚೀಟಿಗೆ ಸೇರಿಸುವುದ್ರಿಂದ ಕುಟುಂಬಕ್ಕೆ ಸಹಾಯವಾಗುತ್ತದೆ. ಪಡಿತರ ಕೊರತೆ ಎದುರಾಗುವುದಿಲ್ಲ.