ಶತಮಾನೋತ್ಸವ ಹೊಸ್ತಿಲಲ್ಲಿ ಕರ್ಣಾಟಕ ಬ್ಯಾಂಕ್‌

By Kannadaprabha News  |  First Published Jan 10, 2023, 11:39 AM IST

ಸತತವಾಗಿ ಉತ್ತಮ ಫಲಿತಾಂಶಗಳನ್ನು ಸಾಧಿಸುತ್ತಿರುವ ಕರ್ಣಾಟಕ ಬ್ಯಾಂಕ್‌ ಶತಮಾನೋತ್ಸವದ ಸಂಭ್ರಮಕ್ಕೆ ಸಜ್ಜಾಗಿ ನಿಂತಿದೆ. ಸಾಮಾಜಿಕ ಕಳಕಳಿಗೆ ಬದ್ಧವಾಗಿ ಸುದೃಢ ಆರ್ಥಿಕ ವ್ಯವಹಾರ ಸಂಸ್ಥೆಯಾಗಿ ಬ್ಯಾಂಕ್‌ ಹೆಸರು ಗಳಿಸಬೇಕೆಂಬ ಪೂರ್ವಜರ ದೂರದೃಷ್ಟಿಗೆ ಅನುಗುಣವಾಗಿ ಇಂದು ಬ್ಯಾಂಕ್‌ ಬೆಳೆದು ನಿಂತಿದೆ. ಇದು ನಾವು ಬ್ಯಾಂಕಿನ ಸಂಸ್ಥಾಪಕರಿಗೆ ಸಲ್ಲಿಸುವ ದೊಡ್ಡ ಗೌರವ: ಮಹಾಬಲೇಶ್ವರ ಎಂ.ಎಸ್‌ 


ಮಂಗಳೂರು(ಜ.10):  ಪ್ರತಿಷ್ಠಿತ ಕರ್ಣಾಟಕ ಬ್ಯಾಂಕಿನ ಪ್ರಧಾನ ಕಚೇರಿ ಮಂಗಳೂರಿನಲ್ಲಿ ಸೋಮವಾರ ಬ್ಯಾಂಕಿನ ಎಲ್ಲ ಪ್ರಾದೇಶಿಕ ಮುಖ್ಯಸ್ಥರು, ವಿವಿಧ ಇಲಾಖೆಯ ಮುಖ್ಯಸ್ಥರು, ಉನ್ನತ ಅಧಿಕಾರಿಗಳನ್ನು ಒಳಗೊಂಡು ಬ್ಯಾಂಕಿನ ಪ್ರಾದೇಶಿಕ ಕಚೇರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಈ ಸಂದರ್ಭ ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡಿದ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್‌., ಸತತವಾಗಿ ಉತ್ತಮ ಫಲಿತಾಂಶಗಳನ್ನು ಸಾಧಿಸುತ್ತಿರುವ ಕರ್ಣಾಟಕ ಬ್ಯಾಂಕ್‌ ಶತಮಾನೋತ್ಸವದ ಸಂಭ್ರಮಕ್ಕೆ ಸಜ್ಜಾಗಿ ನಿಂತಿದೆ. ಸಾಮಾಜಿಕ ಕಳಕಳಿಗೆ ಬದ್ಧವಾಗಿ ಸುದೃಢ ಆರ್ಥಿಕ ವ್ಯವಹಾರ ಸಂಸ್ಥೆಯಾಗಿ ಬ್ಯಾಂಕ್‌ ಹೆಸರು ಗಳಿಸಬೇಕೆಂಬ ಪೂರ್ವಜರ ದೂರದೃಷ್ಟಿಗೆ ಅನುಗುಣವಾಗಿ ಇಂದು ಬ್ಯಾಂಕ್‌ ಬೆಳೆದು ನಿಂತಿದೆ. ಇದು ನಾವು ಬ್ಯಾಂಕಿನ ಸಂಸ್ಥಾಪಕರಿಗೆ ಸಲ್ಲಿಸುವ ದೊಡ್ಡ ಗೌರವ ಎಂದರು.

Tap to resize

Latest Videos

ಆರ್ಥಿಕ ನೆರವು: ಕರ್ಣಾಟಕ ಬ್ಯಾಂಕ್‌-ಹ್ಯುಂಡೈ ಸಂಸ್ಥೆ ಜತೆ ಒಡಂಬಡಿಕೆ

ತಾತ್ಕಾಲಿಕ ಅಂಕಿಅಂಶಗಳ ಪ್ರಕಾರ ತೃತೀಯ ತ್ರೈಮಾಸಿಕದಲ್ಲಿ (31.12.2022) ಬ್ಯಾಂಕಿನ ಸ್ಥೂಲ ಮುಂಗಡಗಳು ಶೇ. 12.37ರಷ್ಟುತೃಪ್ತಿಕರ ದರದಲ್ಲಿ ವೃದ್ಧಿಗೊಂಡಿವೆ. ಅಂತೆಯೇ ಉಳಿತಾಯ ಖಾತೆ ಹಾಗೂ ಚಾಲ್ತಿ ಖಾತೆಯ ಠೇವಣಿಗಳು ಒಟ್ಟು ಠೇವಣಿಗಳ ಶೇ. 31.91ರಷ್ಟುದಾಖಲಿಸಿದೆ. ಬ್ಯಾಂಕಿನ ಠೇವಣಿಗಳು 84,592.60 ಕೋಟಿ ರು.ಗೆ ತಲುಪಿವೆ. ಗುಣಮಟ್ಟದ ಮುಂಗಡಗಳಲ್ಲಿ ವೃದ್ಧಿ, ಅನುತ್ಪಾದಕ ಸ್ವತ್ತುಗಳ ಮೇಲೆ ನಿಯಂತ್ರಣ, ಕಾಸಾ ಠೇವಣಿಯ ಮೇಲೆ ಹಾಗೂ ಇತರ ಆದಾಯ ಮೂಲಗಳ ಮೇಲೆ ಹೆಚ್ಚಿನ ಗಮನವನ್ನು ನೀಡುವುದರೊಂದಿಗೆ ಗ್ರಾಹಕ ಸ್ನೇಹಿ ಹಾಗೂ ಗ್ರಾಹಕ ಕೇಂದ್ರೀಕೃತ ಡಿಜಿಟಲ್‌ ಉಪಕ್ರಮಗಳ ಮೂಲಕ ಎಲ್ಲ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಕರ್ಣಾಟಕ ಬ್ಯಾಂಕ್‌ ಡಿಜಿಟಲ್‌ ಬ್ಯಾಂಕ್‌ ಆಗಿ ಹೊರಹೊಮ್ಮಲಿದೆ ಎಂದು ಹೇಳಿದರು.

ಬ್ಯಾಂಕಿನ ಚೀಫ್‌ ಬ್ಯುಸಿನೆಸ್‌ ಆಫೀಸರ್‌ ಗೋಕುಲದಾಸ್‌ ಪೈ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬ್ಯಾಂಕಿನ ಚೀಫ್‌ ಆಪರೇಟಿಂಗ್‌ ಆಫೀಸರ್‌ ಬಾಲಚಂದ್ರ ವೈ.ವಿ. ಅವರು ಭಾಗವಹಿಸಿದ್ದ ಎಲ್ಲ ಪ್ರಾದೇಶಿಕ ಮುಖ್ಯಸ್ಥರಿಂದ ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರಿಂದ ಬ್ಯಾಂಕಿನ ವ್ಯವಹಾರಗಳ ಬಗ್ಗೆ ಮಾಹಿತಿ ಪಡೆದರು. ಜನರಲ್‌ ಮ್ಯಾನೆಜರ್‌ ವಿನಯ ಭಟ್‌ ಪಿ.ಜೆ. ಅವರು ವಿವಿಧ ಪ್ರಾದೇಶಿಕ ಕಚೇರಿಗಳ ಕಾರ್ಯ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಡೆಪ್ಯುಟಿ ಜನರಲ್‌ ಮ್ಯಾನೇಜರ್‌ ವಿನಯ ಕುಲಕರ್ಣಿ ವಂದಿಸಿದರು.

click me!