Entrepreneurs In India:ಭಾರತದ ಉದ್ಯಮರಂಗದಲ್ಲಿ ಮೇಲ್ವರ್ಗದವರೇ ಜಾಸ್ತಿ; ಪರಿಶಿಷ್ಟ ಪಂಗಡದವರ ಪಾಲು ಕೇವಲ ಶೇ. 2.1!

*ಭಾರತೀಯ ಉದ್ಯಮಿಗಳಲ್ಲಿ ಶೇ.61.8ರಷ್ಟು ಜನರು ಸಾಮಾನ್ಯ ವರ್ಗಕ್ಕೆ ಸೇರಿದವರು
*ಪರಿಶಿಷ್ಟ ಜಾತಿಗೆ ಸೇರಿದ ಉದ್ಯಮಿಗಳ ಪ್ರಮಾಣ ಶೇ.6.8
* ಶೇ.30ರಷ್ಟು ಎಂಎಸ್ಎಂಇ ಘಟಕಗಳನ್ನು ಹೊಂದಿರೋ ಹಿಂದುಳಿದ ವರ್ಗಗಳ ಸದಸ್ಯರು  

Upper caste businesspersons own 61.8 percent of micro small and medium firms in India says Government data

ನವದೆಹಲಿ (ಏ.15): ಭಾರತದ ಉದ್ಯಮಿಗಳಲ್ಲಿ (Entrepreneurs) ಮೇಲ್ವರ್ಗಕ್ಕೆ ಸೇರಿದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಸರ್ಕಾರದ ಅಂಕಿಅಂಶಗಳು ಸ್ಪಷ್ಟಪಡಿಸಿವೆ. ಕಿರು (Micro), ಸಣ್ಣ (Small) ಹಾಗೂ ಮಧ್ಯಮ (medium) ಉದ್ಯಮಿಗಳಲ್ಲಿ ಶೇ.61.8ರಷ್ಟು ಜನರು ಸಾಮಾನ್ಯ ವರ್ಗಕ್ಕೆ (general category) ಸೇರಿದವರಾಗಿದ್ದಾರೆ. ಇನ್ನು ಪರಿಶಿಷ್ಟ ಜಾತಿಗೆ (Scheduled Caste) ಸೇರಿದ ಶೇ.6.8 ಹಾಗೂ ಪರಿಶಿಷ್ಟ ಪಂಗಡಕ್ಕೆ (Scheduled Tribe) ಸೇರಿದ ಶೇ. 2.1 ಮಂದಿಯಷ್ಟೇ ಉದ್ಯಮ ರಂಗದಲ್ಲಿದ್ದಾರೆ. 

ಇತರ ಹಿಂದುಳಿದ ವರ್ಗಗಳ (Other Backward class) ಮೀಸಲಾತಿಗೆ ಸಂಬಂಧಿಸಿ ರಚಿಸಲ್ಪಟ್ಟ ಮಂಡಲ್ ಆಯೋಗ (Mandal Commission) 'ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮುಂದುವರಿದ' ಸಮುದಾಯವನ್ನು ಸಾಮಾನ್ಯ ವರ್ಗವೆಂದು ಪರಿಗಣಿಸಿದೆ. ಎಂಎಸ್ ಎಂಇ ಅಭಿವೃದ್ಧಿ ಆಯುಕ್ತ ಕಚೇರಿಯಿಂದ ಲಭಿಸಿರೋ ಅಂಕಿಅಂಶಗಳ ಪ್ರಕಾರ ಮಾರ್ಚ್ 31ರ ತನಕ ಅನ್ವಯಿಸುವಂತೆ ಸಾಮಾನ್ಯ ವರ್ಗಕ್ಕೆ ಸೇರಿದ ಉದ್ಯಮಿಗಳು ದೇಶದಲ್ಲಿರೋ 80.16 ಲಕ್ಷ ಉದ್ಯಮಗಳಲ್ಲಿ 49.56 ಲಕ್ಷ ಉದ್ಯಮಗಳ ಮಾಲೀಕತ್ವ ಹೊಂದಿದ್ದಾರೆ. 

41 ಬಿಲಿಯನ್ ಡಾಲರ್ ಕ್ಯಾಶ್ ಕೊಡ್ತೇನೆ, ಟ್ವಿಟರ್ ಕಂಪನಿ ಕೊಡ್ತೀರಾ ಎಲಾನ್ ಮಸ್ಕ್ ನೇರ ಆಫರ್!

ಕಾರ್ಖಾನೆ ಹಾಗೂ ಯಂತ್ರಗಳು ಅಥವಾ ಉಪಕರಣಗಳ ಮೇಲಿನ ಹೂಡಿಕೆ (Investment) 1 ಕೋಟಿ ರೂ. ಮೀರದಿದ್ರೆ ಹಾಗೂ ವಹಿವಾಟು (Turnover) 5 ಕೋಟಿ ರೂ.ಗಿಂತ ಹೆಚ್ಚಿರದಿದ್ರೆ ಆಗ ಅಂಥ ಉದ್ಯಮಗಳನ್ನು (Business) ಕಿರು ಕೈಗಾರಿಕೆಗಳು ಎಂದು ವರ್ಗೀಕರಿಸಲಾಗುತ್ತದೆ. ಇನ್ನು 510 ಕೋಟಿ ರೂ. ತನಕ ಹೂಡಿಕೆ (Investment) ಹೊಂದಿರೋ ಹಾಗೂ 250 ಕೋಟಿ ರೂ. ತನಕ ವಹಿವಾಟು ನಡೆಸೋ ಕೈಗಾರಿಕೆಗಳನ್ನು ಮಧ್ಯಮ ಗಾತ್ರದ ಕೈಗಾರಿಕೆಗಳು ಎಂದು ಕರೆಯಲಾಗುತ್ತದೆ. 10 ಕೋಟಿ ರೂ.ತನಕ ಹೂಡಿಕೆ (Investment) ಹೊಂದಿರುವ ಹಾಗೂ  50ಕೋಟಿ ರೂ. ವಹಿವಾಟು ನಡೆಸೋ ಉದ್ಯಮಗಳನ್ನು ಸಣ್ಣ ಕೈಗಾರಿಕೆಗಳು ಎಂದು ವಿಂಗಡಿಸಲಾಗಿದೆ.

ಇತರ ಹಿಂದುಳಿದ ವರ್ಗಗಳ (Other Backward class) ಸದಸ್ಯರು ಭಾರತದಲ್ಲಿ ಶೇ.30ರಷ್ಟು ಅಥವಾ 23.31ಲಕ್ಷ ಎಂಎಸ್ಎಂಇ ಘಟಕಗಳನ್ನು ಹೊಂದಿದ್ದಾರೆ. ಇದ್ರಲ್ಲಿ ಶೇ.41ರಷ್ಟು ಉದ್ಯಮಗಳು ತಮಿಳುನಾಡು (ಶೇ.14.5 ಅಥವಾ 3.37 ಲಕ್ಷ ಘಟಕಗಳು), ಮಹಾರಾಷ್ಟ್ರ (ಶೇ.14.4 ಅಥವಾ 3.35 ಘಟಕಗಳು) ಹಾಗೂ ರಾಜಸ್ಥಾನದಲ್ಲಿವೆ (ಶೇ.12.4 ಅಥವಾ 2.89 ಲಕ್ಷ ಘಟಕಗಳು).

ಅಂದಾಜು ಶೇ.6.8 ಅಥವಾ  5.43ಲಕ್ಷ ಕೈಗಾರಿಕೆಗಳ ಮಾಲೀಕತ್ವವನ್ನು ಪರಿಶಿಷ್ಟ ಜಾತಿಗೆ ಸೇರಿದ ಜನರು ಹೊಂದಿದ್ದಾರೆ. ಇನ್ನು ಪರಿಶಿಷ್ಟ ಪಂಗಡಕ್ಕೆ ಸೇರಿದ ಉದ್ಯಮಿಗಳು 1.68 ಲಕ್ಷ ಘಟಕಗಳು ಅಥವಾ ಶೇ.2.1ರಷ್ಟು ಉದ್ಯಮಗಳ ಮಾಲೀಕತ್ವ ಹೊಂದಿದ್ದಾರೆ. 18,000ಕ್ಕೂ ಅಧಿಕ ಘಟಕಗಳನ್ನು ಇನ್ನೂ ಗುರುತಿಸಲಾಗದ ವರ್ಗಕ್ಕೆ ಸೇರಿಸಲಾಗಿದೆ. 

Privatization of Companies: ಈ ವರ್ಷಾಂತ್ಯದೊಳಗೆ 5 ಕಂಪೆನಿಗಳ ಖಾಸಗೀಕರಣಕ್ಕೆ ಸರ್ಕಾರದ ಸಿದ್ಧತೆ!

ಕಳೆದೆರಡು ವರ್ಷಗಳಲ್ಲಿ ಕೋವಿಡ್ -19 (Covid-19) , ಲಾಕ್ ಡೌನ್ (Lock down) ಮುಂತಾದ ಸಮಸ್ಯೆಗಳ ನಡುವೆಯೂ ಭಾರತದ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರ (information technology sector) 2022ನೇ ಆರ್ಥಿಕ ಸಾಲಿನಲ್ಲಿ ಬರೋಬ್ಬರಿ 227 ಬಿಲಿಯನ್ ಅಮೆರಿಕನ್ ಡಾಲರ್ ಉದ್ಯಮವಾಗಿ ಬೆಳೆಯಲಿದೆ ಎಂದು ನಾಸ್ಕಮ್ (Nasscom) ಹೇಳಿದೆ. 2022ರ ಆರ್ಥಿಕ ವರ್ಷದಲ್ಲಿ ಭಾರತದ ಐಟಿ ಆದಾಯ (IT revenues) ಶೇಕಡಾ 15.5 ರಷ್ಟು ಬೆಳವಣಿಗೆ (IT growth) ದಾಖಲಿಸಲಿದೆ ಅನ್ನೋದನ್ನು ಅಂಕಿ ಅಂಶಗಳು ಖಚಿತಪಡಿಸಿವೆ. ಶೇಕಡಾ 15 ರಷ್ಟು ಪ್ರಗತಿ ಕಳೆದ ದಶಕದಲ್ಲಿ ಕಂಡ ಅತ್ಯುತ್ತಮ ಬೆಳವಣಿಗೆಯಾಗಿದೆ. 2021ರ ಆರ್ಥಿಕ ವರ್ಷದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ಆದಾಯ 194 ಬಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು. 2020ಕ್ಕೆ ಹೋಲಿಸಿದರೆ ಶೇಕಡಾ 2.3ರಷ್ಟು ಪ್ರಗತಿ ಸಾಧಿಸಿತ್ತು.

Latest Videos
Follow Us:
Download App:
  • android
  • ios