Pakistan Selling Donkeys: ಪಾಕಿಸ್ತಾನಿಗಳಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಯ್ತು ಕತ್ತೆ ! ಮಾರಾಟದ ಬೆಲೆ ಕೇಳಿದ್ರೆ ದಂಗಾಗ್ತೀರಿ

Published : Jun 14, 2025, 11:41 AM IST
demand for donkey skin

ಸಾರಾಂಶ

ಕತ್ತೆ ಏನಕ್ಕೂ ಪ್ರಯೋಜ ಇಲ್ಲ ಅಂದ್ಕೊಳ್ಬೇಡಿ. ಕತ್ತೆಯಿಂದ ಸಿಕ್ಕಾಪಟ್ಟೆ ಪ್ರಯೋಜನ ಇದೆ. ನಿಮ್ಮನ್ನು ಕೋಟ್ಯಾಧಿಪತಿ ಮಾಡುವ ಶಕ್ತಿ ಕತ್ತೆಗಿದೆ. ಈ ಗುಟ್ಟು ಪಾಕಿಸ್ತಾನಿಗಳಿಗೆ ಗೊತ್ತಾಗಿದೆ. 

ಕತ್ತೆ (donkey)ಯನ್ನು ತಾತ್ಸಾರದಿಂದ ನೋಡೋರೇ ಹೆಚ್ಚು. ಬೈಗುಳದಲ್ಲಿ ಮೊದಲು ಬರುವ ಶಬ್ಧ ಕತ್ತೆ. ಭಾರವಾದ ವಸ್ತುಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗೋ ಕತ್ತೆಯಿಂದ ಮತ್ತೇನೂ ಪ್ರಯೋಜನ ಇಲ್ಲ ಅಂತಾನೇ ಬಹುತೇಕರು ತಿಳಿದಿದ್ದಾರೆ. ಆದ್ರೆ ಈ ಕತ್ತೆ ಮಹತ್ವ ನಮಗಿಂತ ಪಾಕಿಸ್ತಾನಿಗಳಿಗೆ ಹೆಚ್ಚು ಗೊತ್ತು. ಪಾಕ್ ನಲ್ಲಿ ಕತ್ತೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದೆ. ಕತ್ತೆಯಿಂದ ಅಲ್ಲಿನ ಜನರು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದಾನೆ. ಪಾಕಿಸ್ತಾನದ ಬಹುತೇಕರು ಈಗ ಕತ್ತೆ ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ. ಕತ್ತೆಯಿಂದ ಬರೀ ಪಾಕಿಸ್ತಾನಿಗಳಿಗೆ ಮಾತ್ರವಲ್ಲ ಪಾಕ್ ಸರ್ಕಾರಕ್ಕೂ ಪ್ರಯೋಜನವಾಗಿದೆ. ಕತ್ತೆಯನ್ನು ಬೇರೆ ದೇಶಗಳಿಗೆ ಮಾರಾಟ ಮಾಡಿ ಹಣ ಗಳಿಸ್ತಿದೆ.

ಕತ್ತೆಯಿಂದ ಇಷ್ಟು ಹಣ ಗಳಿಸುತ್ತೆ ಪಾಕ್ : ಹಿಂದೆ ಪಾಕ್ (Pak) ನಲ್ಲಿ ಒಂದು ಕತ್ತೆಯನ್ನು ಸುಮಾರು 30 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗ್ತಿತ್ತು. ಸರಾಸರಿ ಕತ್ತೆ ಬೆಲೆ 30 ರಿಂದ 50 ಸಾವಿರ ರೂಪಾಯಿ ಇತ್ತು. ಆದ್ರೆ ಈಗ ಅದ್ರ ಬೆಲೆ ಎರಡು ಲಕ್ಷದವರೆಗೆ ತಲುಪಿದೆ. ಪಾಕಿಸ್ತಾನದಲ್ಲಿ ಸುಮಾರು 60 ಲಕ್ಷ ಜನರು ಕತ್ತೆ ವ್ಯಾಪಾರ ತಮ್ಮ ದೈನಂದಿನ ಜೀವನ ನಡೆಸ್ತಿದ್ದಾರೆ. ಪಾಕಿಸ್ತಾನ ಪ್ರತಿ ವರ್ಷ ಸಾವಿರಾರು ಕತ್ತೆಗಳನ್ನು ರಫ್ತು ಮಾಡಲಾಗ್ತಿದೆ. ಇದ್ರಿಂದ ಸರ್ಕಾರ ಕೋಟ್ಯಂತರ ಪಾಕಿಸ್ತಾನಿ ರೂಪಾಯಿ ಗಳಿಸ್ತಿದೆ. ಕತ್ತೆ ಮಾರಾಟದಿಂದ ಎಷ್ಟು ಹಣವನ್ನು ವಾರ್ಷಿಕವಾಗಿ ಸಂಪಾದನೆ ಮಾಡ್ತಿದ್ದೇವೆ ಎಂಬುದನ್ನು ಪಾಕಿಸ್ತಾನ ಬಿಟ್ಟುಕೊಟ್ಟಿಲ್ಲ. ವಾರ್ಷಿಕ ಆದಾಯ ಸುಮಾರು 100 ಕೋಟಿ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಪಾಕಿಸ್ತಾನದ ಕತ್ತೆಗೆ ಇಷ್ಟೊಂದು ಬೇಡಿಕೆ ಬರೋಕೆ ಚೀನಾ ಕಾರಣ.

ಕತ್ತೆಗಳನ್ನು ಏನು ಮಾಡುತ್ತೆ ಚೀನಾ (China)? : ಪಾಕಿಸ್ತಾನದ ಕತ್ತೆಗಳಿಗೆ ಚೀನಾದಲ್ಲಿ ಬಹುಬೇಡಿಕೆ ಇದೆ. ಬಹುತೇಕ ಕತ್ತೆಗಳನ್ನು ಚೀನಾ ಖರೀದಿ ಮಾಡ್ತಿದೆ. ಕತ್ತೆಗಳನ್ನು ಔಷಧಿಗೆ ಬಳಸಿಕೊಳ್ತಿದೆ . ಪಾಕ್ ನಿಂದ ಕತ್ತೆ ಖರೀದಿ ಮಾಡಿ, ಅದ್ರ ಚರ್ಮದಿಂದ ಔಷಧಿ ತಯಾರಿಸುತ್ತದೆ. ಚರ್ಮದಿಂದ ಎಜಿಯಾವೊ ಎಂಬ ವಿಶೇಷ ರೀತಿಯ ಔಷಧವನ್ನು ತಯಾರಿಸುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ಇದನ್ನು ರೋಗನಿರೋಧಕ ಶಕ್ತಿ ಹೆಚ್ಚಿಸಲು, ರಕ್ತಹೀನತೆ ಸಮಸ್ಯೆಗೆ ಪರಿಹಾರವಾಗಿ ಬಳಸಲಾಗುತ್ತದೆ. ಇದೇ ಕಾರಣಕ್ಕೆ ಚೀನಾ ಅವುಗಳನ್ನು ಪಾಕಿಸ್ತಾನದಿಂದ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿದೆ.

ಕತ್ತೆ ಸಾಕಾಣಿಕೆ (Donkey Farming )ಯಿಂದ ಆಗುವ ಲಾಭ ? : ನೀವು ಕತ್ತೆ ಸಾಕಾಣಿಕೆಯಿಂದ ಹಣ ಸಂಪಾದನೆ ಮಾಡ್ಬಹುದು. ತಮಿಳುನಾಡಿನ ನಿವಾಸಿ ರಾಜು ಜೋಸೆಫ್ ಎನ್ನುವವರು ಕತ್ತೆ ಸಾಕಾಣೆ ಮಾಡಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದಾರೆ. ಕತ್ತೆ ಹಾಲಿನ ಜೊತೆ ಅನೇಕ ಉತ್ಪನ್ನಗಳನ್ನು ತಯಾರಿಸ್ಬಹುದು. ರಾಜು, ಹಲವು ರೀತಿಯ ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸಲು ಕತ್ತೆ ಹಾಲನ್ನು ಬಳಸ್ತಾರೆ. ಕತ್ತೆ ಕೂದಲಿನಿಂದ ತಯಾರಿಸಿದ ಔಷಧೀಯ ಎಣ್ಣೆ ಥೈಲಂ ಮತ್ತು ಕತ್ತೆ ಸಗಣಿಯಿಂದ ಪರಿಮಳಯುಕ್ತ ಧೂಪದ್ರವ್ಯವನ್ನು ತಯಾರಿಸುತ್ತಾರೆ. ಕತ್ತೆ ಹಾಲಿನ ಬೆಲೆ ದುಬಾರಿ. ಲೀಟರ್ ಕತ್ತೆ ಹಾಲಿನ ಬೆಲೆ 5 ರಿಂದ 7 ಸಾವಿರ ರೂಪಾಯಿಗಳವರೆಗಿದೆ. 50 ಕತ್ತೆಗಳಿಂದ ಪ್ರತಿ ತಿಂಗಳು 3.5 ಲಕ್ಷ ಅಂದರೆ ವಾರ್ಷಿಕವಾಗಿ 42 ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ ರಾಜು. ಕತ್ತೆ ಸಂಖ್ಯೆ ಕ್ಷೀಣಿಸುತ್ತಿದ್ದು, ಸಾಕಣೆಗೆ ಪ್ರೋತ್ಸಾಹ ನೀಡಲು ರಾಜು ತರಬೇತಿ ಕೂಡ ನೀಡ್ತಿದ್ದಾರೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ
Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?