ಪಾಕ್ ಮಹಿಳೆ ಭಾರತದಲ್ಲಿ ಫೇಮಸ್, ಯೂಟ್ಯೂಬ್ ನಲ್ಲಿ ಸೀಮಾ ಹೈದರ್ ಲಕ್ಷ ಸಂಪಾದನೆ

Published : Apr 16, 2025, 03:48 PM ISTUpdated : Apr 16, 2025, 04:17 PM IST
ಪಾಕ್ ಮಹಿಳೆ ಭಾರತದಲ್ಲಿ ಫೇಮಸ್, ಯೂಟ್ಯೂಬ್ ನಲ್ಲಿ ಸೀಮಾ ಹೈದರ್  ಲಕ್ಷ ಸಂಪಾದನೆ

ಸಾರಾಂಶ

ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್ ಈಗ ಯೂಟ್ಯೂಬ್ ತಾರೆ. ಆರು ಯೂಟ್ಯೂಬ್ ಚಾನೆಲ್‌ಗಳಿಂದ ತಿಂಗಳಿಗೆ 80 ಸಾವಿರದಿಂದ ಒಂದು ಲಕ್ಷ ರೂ. ಗಳಿಸುತ್ತಿದ್ದಾರೆ. ವೀಡಿಯೊ ವೀಕ್ಷಣೆ, ದೇಣಿಗೆ, ಜಾಹೀರಾತುಗಳಿಂದ ಆದಾಯ ಗಳಿಸುತ್ತಿದ್ದಾರೆ. ಸಚಿನ್‌ಗೂ ಯೂಟ್ಯೂಬ್‌ನಲ್ಲಿ ಕೆಲಸ ಮಾಡುವಂತೆ ಸಲಹೆ ನೀಡಿದ್ದಾರೆ.

ಪಾಕಿಸ್ತಾನ (Pakistan)ದಿಂದ ಭಾರತಕ್ಕೆ ಓಡಿ ಬಂದು ಸುದ್ದಿ ಮಾಡಿದ್ದ ಸೀಮಾ ಹೈದರ್ (Seema Haider) ಈಗ ಯೂಟ್ಯೂಬ್ ಸೆಲೆಬ್ರಿಟಿಯಾಗಿದ್ದಾರೆ. ನಾಲ್ಕು ಮಕ್ಕಳ ತಾಯಿಯಾಗಿದ್ದ ಸೀಮಾ ಹೈದರ್, ಸಚಿನ್ (Sachin) ಗಾಗಿ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬರ್ತಿದ್ದಂತೆ  ಚರ್ಚೆಯಲ್ಲಿದ್ದರು. ತಿಂಗಳವರೆಗೆ ಸೀಮಾ ಹಾಗೂ ಸಚಿನ್ ವಿಷ್ಯ ಎಲ್ಲ ಕಡೆ ಚರ್ಚೆಯಾಯ್ತು. ಇದನ್ನೇ ಸೀಮಾ ಬಂಡವಾಳ ಮಾಡಿಕೊಂಡ್ರು. ಸೋಶಿಯಲ್ ಮೀಡಿಯಾಕ್ಕೆ ಧುಮುಕಿದ್ರು. ನಿಧಾನವಾಗಿ ಯೂಟ್ಯೂಬ್ ನಲ್ಲಿ ತಮ್ಮ ಸ್ಥಾನ ಗಿಟ್ಟಿಸಿಕೊಂಡು ಸೀಮಾ ಹೈದರ್ ಈಗ ಅದ್ರಲ್ಲಿಯೇ ಉತ್ತಮ ಹಣ ಸಂಪಾದನೆ ಮಾಡ್ತಿದ್ದಾರೆ. ಸೀಮಾ ಆದಾಯ ಸಂಪೂರ್ಣವಾಗಿ ಯುಟ್ಯೂಬ್ ಮೇಲೆ ನಿಂತಿದೆ. ಆರಂಭದಲ್ಲಿ ಸೀಮಾ 45 ಸಾವಿರ ರೂಪಾಯಿಯನ್ನು ಯೂಟ್ಯೂಬ್ ನಿಂದ ಗಳಿಸಿದ್ದರು. ಈಗ ಅದು 80 ಸಾವಿರದಿಂದ 1 ಲಕ್ಷಕ್ಕೆ ತಲುಪಿದೆ. ಒಂದಲ್ಲ ಎರಡಲ್ಲ ಆರು ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ ಸೀಮಾ ಹೈದರ್.

ಕೆಲ ದಿನಗಳ ಹಿಂದಷ್ಟೆ ಸೀಮಾ ಹೈದರ್ ಐದನೇ ಬಾರಿ ಅಮ್ಮನಾಗಿದ್ದಾರೆ. ಹೆಣ್ಣು ಮಗುವಿಗೆ ಜನ್ಮ ನೀಡಿದ ಸೀಮಾ ಈ ವಿಷ್ಯವನ್ನೂ ಬಳಕೆದಾರರಿಗೆ ತಿಳಿಸಿದ್ದರು. ಈಗ ತಮ್ಮ ಗಳಿಕೆ ಬಗ್ಗೆ ಸೀಮಾ ಮಾತನಾಡಿದ್ದಾರೆ. ಸೀಮಾ ಹೈದರ್ ಆರು ಯೂಟ್ಯೂಬ್ ನಲ್ಲಿ ಕೆಲ ಯೂಟ್ಯೂಬ್ ಮಾನಿಟೈಸ್ ಆಗಿದೆ.  ಸೀಮಾ, ತಮ್ಮ ಮನೆ, ದಿನಚರಿ, ತಮ್ಮ ಕೆಲಸದ ಬಗ್ಗೆ ವ್ಲಾಗ್ ತಯಾರಿಸಿ ಪೋಸ್ಟ್ ಮಾಡ್ತಾರೆ. ಬರೀ ವಿಡಿಯೋ ವೀವ್ಸ್ ನಿಂದ ಮಾತ್ರ ಸೀಮಾ ಗಳಿಕೆ ಆಗ್ತಿಲ್ಲ, ಅವರು ಲೈವ್ ಸ್ಟ್ರೀಮ್ ದೇಣಿಗೆ, ಪ್ರಾಯೋಜಿತ ವಿಷಯಗಳು ಮತ್ತು ಬ್ರ್ಯಾಂಡ್ ಪ್ರಚಾರಗಳ ಮೂಲಕವೂ ಹಣ ಗಳಿಸುತ್ತಿದ್ದಾರೆ.  

ಇಡ್ಲಿ ಮಾರಿ ತಿಂಗಳಿಗೆ 7 ಲಕ್ಷ ಸಂಪಾದನೆ, ಬ್ಯುಸಿನೆಸ್ ಐಡಿಯಾ ಹೇಗಿದೆ?

ಗಳಿಕೆ ಬಗ್ಗೆ ಸೀಮಾ ಲೆಕ್ಕಾಚಾರ : ಸೀಮಾ ಪ್ರಕಾರ, ಒಂದು ವೀಡಿಯೊ 1,000  ವೀವ್ಸ್ ಪಡೆದ್ರೆ ಅದು ಸುಮಾರು 25 ರೂಪಾಯಿ  ಗಳಿಸುತ್ತದೆ.  ಯೂಟ್ಯೂಬ್ ಶಾರ್ಟ್ಸ್ನಲ್ಲಿ 1 ಲಕ್ಷ ವೀವ್ಸ್ ಗೆ ಸರಿಸುಮಾರು 1 ಡಾಲರ್ ಅಂದರೆ 80-82 ರೂಪಾಯಿ ಸಿಗುತ್ತದೆ.  ಡಿಜಿಟಲ್ ಸೃಷ್ಟಿಕರ್ತೆಯಾಗಿ ಬದಲಾಗಿರುವ ಸೀಮಾ, ಪ್ರತಿ ದಿನ ಚಾನೆಲ್ ಗಳಿಗೆ ವಿಡಿಯೋ ಹಾಕ್ತಿದ್ದಾರೆ.  

ಸೀಮಾ ಸಲಹೆ ಏನು? : ಸಂದರ್ಶನವೊಂದರಲ್ಲಿ ಸೀಮಾ, ನನ್ನ ಗಳಿಕೆಯನ್ನು ಈಗ ಸಂಪೂರ್ಣವಾಗಿ ಯೂಟ್ಯೂಬ್ ಮೇಲೆ ಕೇಂದ್ರೀಕರಿಸಿದ್ದೇನೆ ಎಂದಿದ್ದಾರೆ. ಕಂಟೆಂಟ್ ಕ್ರಿಯೇಟರ್ ಸಚಿನ್ ಗೆ ಕೆಲಸದ ಜೊತೆ ಈ ಕೆಲಸ ಕೂಡ ಹೊಣೆಯಾಗುತ್ತೆ. ಹಾಗಾಗಿ ಸಚಿನ್ ಗೆ ಕೆಲಸ ಬಿಟ್ಟು ಯೂಟ್ಯೂಬ್ ಚಾನೆಲ್ ಮೇಲೆ ಗಮನ ಹರಿಸುವಂತೆ ಸೀಮಾ ಸಲಹೆ ನೀಡಿದ್ದಾಗಿ ತಿಳಿಸಿದ್ದಾರೆ. ಹೀಗೆ ಮಾಡಿದ್ರೆ ಕುಟುಂಬದ ಜೊತೆ ಸಚಿನ್ ಹೆಚ್ಚು ಸಮಯ ಕಳೆಯಬಹುದು ಎಂಬ ನಿರೀಕ್ಷೆ ಸೀಮಾರದ್ದು. 2023ರಲ್ಲಿ ಸೀಮಾ ಸುದ್ದಿಗೆ ಬಂದಿದ್ದರು.  ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ಬಂದ ಸೀಮಾ  ಪ್ರೇಮಕಥೆ  ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಬಹು ಚರ್ಚೆ ವಿಷ್ಯವಾಗಿತ್ತು.  

OpenAI CEO ಸ್ಯಾಮ್ ಆಲ್ಟ್‌ಮನ್ ಮಗುವಿಗೆ ಬೆಂಗಳೂರು ಮೂಲದ ಸ್ಮಾರ್ಟ್ ತೊಟ್ಟಿಲು!

ಯೂಟ್ಯೂಬ್ ನಲ್ಲಿ ಹಣ ಗಳಿಗೆ ವಿಧಾನ : ಬಹುಬೇಗ ಹಣ ಗಳಿಸ್ಬೇಕು ಅಂದ್ರೆ ಸೋಶಿಯಲ್ ಮೀಡಿಯಾಕ್ಕೆ ಹೋಗ್ಬೇಕು ಎನ್ನುವ ಮಾತು ಇತ್ತೀಚಿನ ದಿನಗಳಲ್ಲಿ ಸತ್ಯವಾಗ್ತಿದೆ. ನೀವು ಆಕರ್ಷಕ ವಿಷ್ಯಗಳನ್ನು ಯೂಟ್ಯೂಬ್ ಗೆ ಪೋಸ್ಟ್ ಮಾಡಿದ್ರೆ ಬಹುಬೇಗ ಹಣ ಸಂಪಾದನೆ ಮಾಡ್ಬಹುದು.   ನಿಮ್ಮ ಚಾನಲ್ ಕನಿಷ್ಠ 500 ಚಂದಾದಾರರನ್ನು ಹೊಂದಿರಬೇಕು, ಕಳೆದ 365 ದಿನಗಳಲ್ಲಿ 3,000 ಗಂಟೆಗಳ ವೀಕ್ಷಣೆ ಸಮಯ ಮತ್ತು ಯೂಟ್ಯೂಬ್ ಶಾರ್ಟ್ ನಲ್ಲಿ (YouTube Shorts) 3 ಮಿಲಿಯನ್  ವೀವ್ಸ್ ಹೊಂದಿರಬೇಕು. ನಿಮ್ಮ ಚಾನಲ್ ಈ ಷರತ್ತುಗಳನ್ನು ಪೂರೈಸಿದ್ರೆ ಹಣ ಗಳಿಕೆ ಶುರುವಾಗುತ್ತದೆ. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ