Frozen Bank Account: ನಿಮ್ಮ ಬ್ಯಾಂಕ್ ಖಾತೆ ಬ್ಲಾಕ್ ಆಗಿದ್ರೆ ಚಿಂತೆ ಬೇಡ: ತಕ್ಷಣ ಹೀಗ್‌ ಮಾಡಿ

By Suvarna NewsFirst Published Nov 28, 2022, 12:29 PM IST
Highlights

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೆಲ ಹೊಸ ಗ್ರಾಹಕರಿಗೆ ಶಾಕ್ ನೀಡಿದೆ. ಅವರ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿದೆ. ಇದ್ರಿಂದ ಗ್ರಾಹಕರಿಗೆ ಬ್ಯಾಂಕ್ ವಹಿವಾಟು ಕಷ್ಟವಾಗ್ತಿದೆ. ನಿಮ್ಮ ಖಾತೆ ಕೂಡ ಫ್ರೀಜ್ ಆಗಿದೆ ಅಂದ್ರೆ ಟೆನ್ಷನ್ ಬೇಡ. ಈ ಸುಲಭ ವಿಧಾನ ಅನುಸರಿಸಿ. 
 

ವರ್ಷ ಪೂರ್ತಿ ಬೆವರು ಸುರಿಸಿ ದುಡಿದ ಹಣವನ್ನು ಬ್ಯಾಂಕ್ ಖಾತೆಯಲ್ಲಿ ಇಟ್ಟಿರ್ತೇವೆ. ಅವಶ್ಯಕತೆ ಬಿದ್ದಾಗ ಹಣವನ್ನು ವಿತ್ ಡ್ರಾ ಮಾಡ್ತೇವೆ. ಆದ್ರೆ ಕಷ್ಟಪಟ್ಟು ಹಣಗಳಿಸಿ ಅದನ್ನಿಟ್ಟ ಬ್ಯಾಂಕ್ ಖಾತೆ ಬ್ಲಾಕ್ ಆದ್ರೆ ಅಥವಾ ಫ್ರೀಜ್ ಆದ್ರೆ ಹೇಗಾಗಬೇಡ ಹೇಳಿ. ಕೈಕಾಲು ನಡುಗಲು ಶುರುವಾಗುತ್ತದೆ. ಮುಂದೇನು ಎಂಬ ಪ್ರಶ್ನೆ ಆತಂಕ ಮೂಡಿಸುತ್ತದೆ. ಆದ್ರೆ ಇದಕ್ಕೆ ಇಷ್ಟೊಂದು ಟೆನ್ಷನ್ ಆಗುವ ಅಗತ್ಯವಿಲ್ಲ. ಸುಲಭ ವಿಧಾನದ ಮೂಲಕ ನೀವು ಫ್ರೀಜ್ ಆದ ಬ್ಯಾಂಕ್ ಖಾತೆಯನ್ನು ಅನ್ ಫ್ರೀಜ್ ಮಾಡಬಹುದು. ನಾವಿಂದು ಅನ್ ಫ್ರೀಜ್ ಮಾಡುವ ವಿಧಾನಗಳ ಬಗ್ಗೆ ನಿಮಗೆ ಮಾಹಿತಿ ನೀಡ್ತೆವೆ.

SBIನಲ್ಲಿರುವ ಅನೇಕರ ಖಾತೆ (Account) ಬ್ಲಾಕ್: ಭಾರತದ ಅತಿದೊಡ್ಡ ಬ್ಯಾಂಕ್ ಎಸ್ ಬಿಐನಲ್ಲಿರುವ ಅನೇಕರ ಖಾತೆ ಫ್ರೀಜ್ ಆಗಿದೆ. ಅದ್ರಿಂದ ಗ್ರಾಹಕರಿಗೆ ಹಣದ ವಹಿವಾಟು ಮಾಡಲು ಸಾಧ್ಯವಾಗ್ತಿಲ್ಲ. ಅದ್ರಲ್ಲಿ ನೀವೂ ಒಬ್ಬರಾಗಿದ್ದರೆ ಚಿಂತೆ ಬೇಡ. ಎಸ್ ಬಿಐ ಎಲ್ಲ ಖಾತೆದಾರರ ಬ್ಯಾಂಕ್ ಖಾತೆಯನ್ನು ಫ್ರೀಜ್ ಅಥವಾ ಬ್ಲಾಕ್ ಮಾಡಿಲ್ಲ. ಹೊಸದಾಗಿ ಖಾತೆ ತೆರೆದ ಕೆಲ ಗ್ರಾಹಕರ ಖಾತೆಯ ಮೇಲೆ ಮಾತ್ರ ನಿರ್ಬಂದ ಹೇರಿದೆ. ಇದಕ್ಕೆ ಮುಖ್ಯವಾದ ಕಾರಣ ಕೆವೈಸಿ.  

ಜುಲೈನಲ್ಲಿ ಅನೇಕ ಬ್ಯಾಂಕ್ ಗಳ ನಿಯಮ ಬದಲಾಗಿದೆ. ಅದ್ರಂತೆ ಗ್ರಾಹಕರು ಇ- ಕೆವೈಸಿ (e KYC) ಮಾಡುವುದು ಅನಿವಾರ್ಯವಾಗಿದೆ. ಆದ್ರೆ ಅನೇಕ ಗ್ರಾಹಕರು ಇ ಕೆವೈಸಿ ಮಾಡಿಲ್ಲ. ಹಾಗಾಗಿ ಬ್ಯಾಂಕ್ ಆ ಖಾತೆಗಳನ್ನು ಬ್ಲಾಕ್ ಮಾಡಿದೆ. ಹಾಗೆ ಇ- ಕೆವೈಸಿ ಮಾಡುವಂತೆ ಗ್ರಾಹಕರಿಗೆ ಬ್ಯಾಂಕ್ ಸೂಚಿಸಿದೆ. ಇ – ಕೆವೈಸಿ ಕಡ್ಡಾಯ ಮಾಡಿರುವ ಬ್ಯಾಂಕ್ ಗಳಲ್ಲಿ ಎಸ್ ಬಿಐ ಕೂಡ ಸೇರಿದೆ.  ಗ್ರಾಹಕರ ಖಾತೆಯ ಭದ್ರತೆಗಾಗಿ ಬ್ಯಾಂಕ್ ಇ –ಕೆವೈಸಿಗೆ ಆದ್ಯತೆ ನೀಡ್ತಿದೆ. ಬ್ಯಾಂಕ್ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿಲ್ಲ. ಬ್ಯಾಂಕ್ ನಲ್ಲಿ ಆಗ್ತಿರುವ ವಂಚನೆಯನ್ನು ತಪ್ಪಿಸಲಿ ಇ- ಕೆವೈಸಿ ನೆರವಾಗಲಿದೆ. ಹಾಗಾಗಿ ಎಲ್ಲ ಗ್ರಾಹಕರು ಇ – ಕೆವೈಸಿ ಮಾಡುವುದು ಅನಿವಾರ್ಯವಾಗಿದೆ.

ಹಿರಿಯ ನಾಗರಿಕರಿಗೆ ಈ ಎರಡು ಯೋಜನೆಗಳು ಬೆಸ್ಟ್; ಪ್ರತಿ ತಿಂಗಳು ಪಿಂಚಣಿ ಫಿಕ್ಸ್ !

ಬ್ಯಾಕ್ ಆಗಿರುವ ನಿಮ್ಮ ಖಾತೆ ಅನ್ಫ್ರೀಜ್ ಮಾಡೋದು ಹೇಗೆ?: ಕೈನಲ್ಲಿ ಹಣವಿಲ್ಲವೆಂದ್ರೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಹಣಕಾಸಿನ ವಹಿವಾಟು ಸ್ಥಗಿತವಾದ್ರೆ ವ್ಯವಹಾರ ಕುಂಟಿತವಾಗುತ್ತದೆ. ಯಾವುದೇ ಸಮಸ್ಯೆಯಾಗಬಾರದು, ಫ್ರೀಜ್ ಆಗಿರುವ ಅಥವಾ ಬ್ಲಾಕ್ ಆಗಿರುವ ಬ್ಯಾಂಕ್ ಖಾತೆ ಅನ್ಫ್ರೀಜ್ ಆಗ್ಬೇಕು ಎಂದಾದ್ರೆ ನೀವು ಸುಲಭವಾದ ಒಂದು ಕೆಲಸ ಮಾಡಿದ್ರೆ ಸಾಕು. ನೀವು ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಸುಲಭದ ಕೆಲಸ. ಕೆವೈಸಿಗೆ ನೀವು ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ನ ಪ್ರತಿಯನ್ನು ಹೊಂದಿರಬೇಕು. ಬ್ಯಾಂಕ್ ನಲ್ಲಿಯೇ ನೀವು ಕೆವೈಸಿ ಭರ್ತಿ ಮಾಡಬಹುದು. ನೀವು ಆಧಾರ್ ಅಥವಾ ಪ್ಯಾನ್ ಕಾರ್ಡ್ ಪ್ರತಿಯೊಂದಿಗೆ ಬ್ಯಾಂಕ್ ಗೆ ಹೋಗಬೇಕು. ಅಲ್ಲಿ ಕೆವೈಸಿ ಫಾರ್ಮ್ ಅನ್ನು ಭರ್ತಿ ಮಾಡಬೇಕು.  ಕೆವೈಸಿ ಫಾರ್ಮ್ ನಲ್ಲಿ ನಿಮ್ಮ ಹೆಸರು, ವಿಳಾಸ ಸೇರಿದಂತೆ ಕೆಲ ಮಾಹಿತಿಗಳನ್ನು ನೀಡಬೇಕಾಗುತ್ತದೆ. ಫಾರ್ಮ್ ಭರ್ತಿ ಮಾಡಿದ ನಂತರ ಸಂಬಂಧಿಸಿದ ಅಧಿಕಾರಿಗಳಿಗೆ ನೀಡಬೇಕು. ನಿಮ್ಮ ಫಾರ್ಮ್ ಪರಿಶೀಲಿಸಿದ ನಂತ್ರ ಬ್ಯಾಂಕ್ ನಿಮ್ಮ ಖಾತೆಯನ್ನು ಅನ್ಫ್ರೀಜ್ ಮಾಡುತ್ತದೆ. ಇದ್ರಿಂದ ನೀವು ಸುಲಭವಾಗಿ ಹಣಕಾಸಿನ ವಹಿವಾಟನ್ನು ನಡೆಸಬಹುದು. 

KYC ಅಂದ್ರೇನು? ಅದ್ರ ಲಾಭವೇನು ಗೊತ್ತಾ?

ಬ್ಯಾಂಕ್ ಖಾತೆ ಬ್ಲಾಕ್ ಆಗಲು ಇವೂ ಕಾರಣ: ಕೆಲ ಬ್ಯಾಂಕ್ ಖಾತೆ ಬ್ಲಾಕ್ ಆಗಿದ್ರೂ ನೀವು ಖಾತೆಗೆ ಹಣ ಹಾಕಬಹುದು. ಆದ್ರೆ ಹಣ ತೆಗೆಯಲು ಸಾಧ್ಯವಾಗುವುದಿಲ್ಲ. ಕೆವೈಸಿ ಪೂರ್ಣಗೊಳಿಸದ ಕಾರಣಕ್ಕೆ ಮಾತ್ರವಲ್ಲ ಶಾಸನಾತ್ಮಕ ಕಾಯ್ದೆಗಳಿಂದಾಗಿ, ಕೆಲವೊಮ್ಮೆ ಆದಾಯ ತೆರಿಗೆ ಇಲಾಖೆಯಿಂದ ಮತ್ತು ಕೆಲವೊಮ್ಮೆ ನ್ಯಾಯಾಲಯದ ಆದೇಶಗಳಿಂದ ಬ್ಯಾಂಕ್ ಖಾತೆಗಳನ್ನು ಬ್ಲಾಕ್ ಮಾಡಲಾಗುತ್ತದೆ.

click me!