ಮಾಡೋದು ಪೋಸ್ಟ್ ಉಮನ್ ಕೆಲಸ, ದುಡಿಯೋದು ಲಕ್ಷ ಲಕ್ಷ! ಹೇಗಂತೀರಿ?

By Suvarna News  |  First Published Nov 23, 2023, 2:27 PM IST

ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯೊಬ್ಬಳ ಫೋಟೋ ವೈರಲ್ ಆಗ್ತಿದೆ. ಆಕೆ ನೋಡಿ ಜನರು ಆಕ್ಟರ್ ಎಂದಿಕೊಳ್ತಿದ್ದಾರೆ. ಆದ್ರೆ ಆಕೆ ನಟಿಯಲ್ಲ. ಬದಲಿಗೆ ಪೋಸ್ಟ್ ಮ್ಯಾನ್ ಕೆಲಸ ಮಾಡುವ ಮಹಿಳೆ. ಆಕೆ ಗಳಿಕೆ ಕೇಳಿದ್ರೆ ನೀವು ದಂಗಾಗ್ತೀರಾ.
 


ಖಾಕಿ ಬಣ್ಣದ ಡ್ರೆಸ್ ಹಾಕಿಕೊಂಡು, ಸೈಕಲ್ ತಳ್ತಾ ಒಬ್ಬರು ಬರ್ತಿದ್ದಾರೆ ಅಂದ್ರೆ ಅವರು ಪೋಸ್ಟ್ ಮ್ಯಾನ್ ಅಲ್ದೆ ಮತ್ತ್ಯಾರು ಅಲ್ಲ ಅಂತಾ ನಾವು ಭಾವಿಸ್ತೇವೆ. ನಮ್ಮಲ್ಲಿ ವಯಸ್ಸಾದ ಪೋಸ್ಟ್ ಮ್ಯಾನ್ ಗಳನ್ನೇ ನಾವು ಹೆಚ್ಚಾಗಿ ಕಾಣ್ತೇವೆ. ಯಂಗ್ ಆಗಿರುವ ಹುಡುಗ್ರು ಈ ಕೆಲಸಕ್ಕೆ ಬರೋದು ಬಹಳ ಅಪರೂಪ. ಅದ್ರಲ್ಲೂ ಹುಡುಗಿಯರು ಕಾಣಸಿಗೋದೆ ಇಲ್ಲ. ಸುಂದರ ಹುಡುಗಿಯೊಬ್ಬಳು ಪೋಸ್ಟ್ ಹಿಡಿದು ನಿಮ್ಮ ಮುಂದೆ ಬಂದ್ರೆ ನಿಮ್ಮ ಖುಷಿ ಡಬಲ್ ಆಗೋದ್ರಲ್ಲಿ ಅನುಮಾನವೇ ಇಲ್ಲ. ಯಾಕಪ್ಪ ಒಂದೇ ಒಂದು ಪೋಸ್ಟ್ ಬಂದಿದೆ, ದಿನಾ ಬರ್ಬಾರದಿತ್ತಾ ಎಂದುಕೊಳ್ಳೋರೇ ಹೆಚ್ಚು. ಬ್ರಿಟನ್ ನಲ್ಲಿ ಹುಡುಗಿಯೊಬ್ಬಳು ಪೋಸ್ಟ್ ಉಮನ್ ಕೆಲಸ ಮಾಡಿ ಫೇಮಸ್ ಆಗಿದ್ದಾಳೆ. 

ಪೋಸ್ಟ್ ಉಮನ್ (Post Woman) ಕೆಲಸ ಮಾಡ್ತಿದ್ದ ಹುಡುಗಿ ಹೆಸರು ಮೆಲ್ಲಿ ಮಪ್ಪೆಟ್. ಬ್ರಿಟನ್ ನ ಸೌತ್ ವಿಂಡ್ಸ್ ನಿವಾಸಿ. ಆಕೆ ಫೋಟೋ (Photo) ನೋಡಿದ್ರೆ ಈಕೆ ಪೋಸ್ಟ್ ಉಮನ್ ಕೆಲಸ ಮಾಡ್ತಿದ್ಲಾ ಎಂದು ನೀವು ಅಚ್ಚರಿಗೊಳ್ತಿರಾ. ಬಿಗಿಯಾದ ಡ್ರೆಸ್, ಒಂದಿಷ್ಟು ಮೇಕಪ್ (Makeup) ಹಾಕಿಕೊಂಡು ಜನರ ಹೃದಯ ಬಡಿತ ಹೆಚ್ಚಿಸುವ ಮೆಲ್ಲಿ ಮಪ್ಪೆಟ್ ಬ್ರಿಟನ್‌ನ ಸೆಕ್ಸಿಯೆಸ್ಟ್ ಪೋಸ್ಟಿ ಎಂಬ ಬಿರುದು ಪಡೆದಿದ್ದಾಳೆ. 

Tap to resize

Latest Videos

undefined

ಮದುವೆಗೂ ಸಾಲ ಪಡೆದಿದ್ದ ವ್ಯಕ್ತಿ ಈಗ 55 ಸಾವಿರ ಕೋಟಿ ಕಂಪನಿ ಒಡೆಯ!

ತನ್ನ ಕೆಲಸ ಹಾಗೂ ಪ್ರಸಿದ್ಧಿಯಿಂದಾಗಿ ಮೆಲ್ಲಿ ಮಪ್ಪೆಟ್ ಗಳಿಸ್ತಿರುವ ಹಣ, ದೊಡ್ಡ ಹುದ್ದೆಯಲ್ಲಿ ಕೆಲಸ ಮಾಡುವವರಿಗಿಂತ ಹೆಚ್ಚಿದೆ. ಸದ್ಯ ಮೆಲ್ಲಿ ಮಪ್ಪೆಟ್, ಫೋಸ್ಟ್ ಆಫೀಸ್ ಕೆಲಸವನ್ನು ಬಿಟ್ಟಿದ್ದಾಳೆ. ಆದ್ರೂ ಆಕೆ ಗಳಿಕೆ ಕಡಿಮೆಯಾಗಿಲ್ಲ. ಸದ್ಯ ಮೆಲ್ಲಿ ಮಪ್ಪೆಟ್, ಸಾಮಾಜಿಕ ಜಾಲತಾಣದಲ್ಲಿ ಸೋಶಿಯಲ್ ಐಕಾನ್ ಹೆಸರಿನ ಖಾತೆ ತೆರೆದಿದ್ದಾಳೆ. ಫೋಸ್ಟ್ ಮ್ಯಾನ್ ಯುನಿಫಾರ್ಮ್ ನಲ್ಲಿರುವ ಫೋಟೋಗಳನ್ನು ಈ ಖಾತೆಯಲ್ಲಿ ಮೆಲ್ಲಿ ಮಪ್ಪೆಟ್ ಹಂಚಿಕೊಳ್ತಿರುತ್ತಾಳೆ. ಸುಂದರ ಫೋಟೋಗಳೇ ಮೆಲ್ಲಿ ಮಪ್ಪೆಟ್ ಗಳಿಕೆಗೆ ಮೂಲವಾಗಿದೆ. ಮೆಲ್ಲಿ ಮಪ್ಪೆಟ್, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಮತ್ತು ವಿಡಿಯೋ ಪೋಸ್ಟ್ ಮಾಡಿ ತಿಂಗಳಿಗೆ ಹತ್ತು ಲಕ್ಷಕ್ಕಿಂತ ಹೆಚ್ಚು ಸಂಪಾದನೆ ಮಾಡ್ತಾಳೆ. 

ಪೋಸ್ಟ್ ಮ್ಯಾನ್  ಆಗಿದ್ದಾಗ ಹೇಗಿತ್ತು ಜನರ ರಿಯಾಕ್ಷನ್? : ಮೆಲ್ಲಿ ಮಪ್ಪೆಟ್ ಪೋಸ್ಟ್ ಮ್ಯಾನ್ ಕೆಲಸ ಮಾಡ್ತಿದ್ದಾಗ ಜನರಿಂದ ಉತ್ತಮ ರಿಯಾಕ್ಷನ್ ಸಿಕ್ಕಿತ್ತಂತೆ. ಮೆಲ್ಲಿ ಮಪ್ಪೆಟ್ ಯಿಂದ ಪೋಸ್ಟ್ ಸ್ವೀಕರಿಸಲು ಜನರು ಕಾಯುತ್ತಿದ್ದರಂತೆ. ಅನೇಕರು ತಮ್ಮ ವಿಳಾಸಕ್ಕೆ ತಾವೇ ಪತ್ರ ಬರೆದುಕೊಂಡು ಅದನ್ನು ನನ್ನ ಕೈನಿಂದ ಸ್ವೀಕರಿಸುತ್ತಿದ್ದರು ಎನ್ನುತ್ತಾಳೆ ಮೆಲ್ಲಿ ಮಪ್ಪೆಟ್. 

ಕೆಲಸ ಬಿಟ್ಟಿದ್ದು ಏಕೆ? : ಮೆಲ್ಲಿ ಮಪ್ಪೆಟ್ ಪೋಸ್ಟ್ ಮ್ಯಾನ್ ಕೆಲಸ ಚೆನ್ನಾಗಿಯೇ ಇತ್ತು. ತಿಂಗಳ ಸಂಬಳದಲ್ಲಿ ಮೆಲ್ಲಿ ಮಪ್ಪೆಟ್ ಖುಷಿಯಾಗಿದ್ದರೂ ಅಷ್ಟು ಸಾಕಾಗ್ತಿರಲಿಲ್ಲ. ಜೀವನದಲ್ಲಿ ಏನಾದ್ರೂ ಸಾಧನೆ ಮಾಡ್ಬೇಕು ಎನ್ನುವ ಕಾರಣಕ್ಕೆ ಮೆಲ್ಲಿ ಮಪ್ಪೆಟ್, ಪೋಸ್ಟ್ ಮ್ಯಾನ್ ಕೆಲಸ ಬಿಟ್ಟಳು. ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆದಳು.

ಹೇಳಿ ಕೇಳಿ ಮುಕೇಶ್ ಅಂಬಾನಿ ಮನೆಯಲ್ಲಿ ಅಡುಗೆ ಕೆಲಸ, ಸಂಬಳ ಎಷ್ಟಿರಬಹುದು ಗೆಸ್ ಮಾಡಿ!

ಪೋಸ್ಟ್ ಮ್ಯಾನ್ ಡ್ರೆಸ್ ಗಳಿಕೆಗೆ ದಾರಿ : ಪೋಸ್ಟ್ ಮ್ಯಾನ್ ಕೆಲಸ ಬಿಟ್ಟರೂ ಯುನಿಫಾರಂ ಹಿಂದಿರುಗಿಸಿಲ್ಲ ಎನ್ನುತ್ತಾಳೆ ಮೆಲ್ಲಿ ಮಪ್ಪೆಟ್. ಸಮವಸ್ತ್ರವೇ ನನ್ನ ಗಳಿಕೆಗೆ ಕಾರಣ ಎಂದು ಮೆಲ್ಲಿ ಮಪ್ಪೆಟ್ ಸಂತೋಷ ವ್ಯಕ್ತಪಡಿಸಿದ್ದಾಳೆ. ಈ ಯುನಿಫಾರಂ ಧರಿಸೋದು ನನಗೆ ಖುಷಿ ವಿಷ್ಯ. ಅದನ್ನು ಧರಿಸಿ ತೆಗೆಸಿಕೊಂಡ ಫೋಟೋಗಳನ್ನೇ ನಾನು ಪೋಸ್ಟ್ ಮಾಡುತ್ತೇನೆ. ಅದರಿಂದಲೇ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದೇನೆ ಎನ್ನುತ್ತಾಳೆ ಮೆಲ್ಲಿ ಮಪ್ಪೆಟ್. ಈಗಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಗಳಿಕೆಗೆ ಉತ್ತಮ ಮೂಲವಾಗಿದೆ. ಒಳ್ಳೆ ಹುದ್ದೆಯಲ್ಲಿದ್ದು ಹಣ ಸಂಪಾದನೆ ಮಾಡುವವರಿಗಿಂತ ಹೆಚ್ಚು ಹಣವನ್ನು ಸಾಮಾಜಿಕ ಜಾಲತಾಣದ ಮೂಲಕ ಸಾಮಾನ್ಯ ವ್ಯಕ್ತಿಗಳು ಗಳಿಸ್ತಿದ್ದಾರೆ. 

click me!