ಗೃಹಸಾಲ ವಿಮೆ ಕಡ್ಡಾಯವೇ? ಗೃಹಸಾಲ ಪಡೆಯೋ ಪ್ರತಿಯೊಬ್ಬರೂ ಈ ಮಾಹಿತಿ ಹೊಂದಿರೋದು ಅಗತ್ಯ

Published : Nov 14, 2023, 05:07 PM ISTUpdated : Nov 14, 2023, 05:18 PM IST
ಗೃಹಸಾಲ ವಿಮೆ ಕಡ್ಡಾಯವೇ? ಗೃಹಸಾಲ ಪಡೆಯೋ ಪ್ರತಿಯೊಬ್ಬರೂ ಈ ಮಾಹಿತಿ ಹೊಂದಿರೋದು ಅಗತ್ಯ

ಸಾರಾಂಶ

ಗೃಹಸಾಲ ಪಡೆಯುವಾಗ ವಿಮೆ ಪಡೆಯಬೇಕೆ ಅಥವಾ ಬೇಡವೆ ಎಂಬ ಬಗ್ಗೆ ಅನೇಕರಿಗೆ ಗೊಂದಲಗಳಿರುತ್ತವೆ. ಅಲ್ಲದೆ, ಗೃಹಸಾಲ ಪಡೆಯೋದು ಕಡ್ಡಾಯವೇ ಎಂಬ ಪ್ರಶ್ನೆಗಳು ಕೂಡ ಕಾಡುತ್ತವೆ.  

Business Desk: ಭಾರತದಲ್ಲಿ ಮನೆ ಖರೀದಿಸೋವಾಗ ವಿವಿಧ ವಿಮಾ ಪಾಲಿಸಿಗಳನ್ನು ನೀಡಲಾಗುತ್ತದೆ. ಈ ಪಾಲಿಸಿಗಳು ಮನೆಯ ಮಾಲೀಕರಿಗೆ ಅಪಾಯಗಳಿಂದ ರಕ್ಷಣೆ ನೀಡುತ್ತವೆ. ಎಲ್ಲ ಬ್ಯಾಂಕ್ ಗಳು ಗೃಹಸಾಲ ನೀಡುವಾಗ ಈ ವಿಮಾ ಪಾಲಿಸಿ ಖರೀದಿಸುವಂತೆ ಗ್ರಾಹಕರಿಗೆ ಸಲಹೆ ನೀಡುತ್ತವೆ. ಈ ಗೃಹಸಾಲಕ್ಕೆ ಸಂಬಂಧಿಸಿದ ವಿಮೆಗಳ ಬಗ್ಗೆ ಗ್ರಾಹಕರು ಮಾಹಿತಿ ಹೊಂದಿರೋದು ಅಗತ್ಯ. ಕೆಲವು ವಿಮೆಗಳು ಅತ್ಯಂತ ಅಗತ್ಯ ಕೂಡ. ಉದಾಹರಣೆಗೆ ಆಸ್ತಿ ವಿಮೆ ಖರೀದಿಸೋದು ಗೃಹಸಾಲ ಅರ್ಜಿದಾರರಿಗೆ ಕಡ್ಡಾಯ. ಹಾಗೆಯೇ ಗೃಹಸಾಲ ವಿಮೆ ಗ್ರಾಹಕರ ಆಯ್ಕೆಗೆ ಬಿಟ್ಟಿದ್ದು. ಗೃಹಸಾಲ ವಿಮೆಯನ್ನು ಅಡಮಾನ ವಿಮೆ ಅಥವಾ ಅಡಮಾನ ಸಂರಕ್ಷಣೆ ವಿಮೆ ಎಂದು ಕೂಡ ಕರೆಯುತ್ತಾರೆ. ಇದು ಮನೆ ಖರೀದಿಸೋರಿಗೆ ಮರಣ ಅಥವಾ ಇನ್ಯಾವುದೇ ಸಂಕಷ್ಟದ ಸಮಯದಲ್ಲಿಸಾಲ ಮರುಪಾವತಿಸಲು ಸಾಧ್ಯವಾಗದ ಸಂದರ್ಭದಲ್ಲಿ ಹಣಕಾಸಿನ ಸುರಕ್ಷತೆ ಒದಗಿಸುತ್ತದೆ. ಈ ವಿಮೆಯನ್ನು ಗೃಹಸಾಲ ಪಡೆಯುವಾಗ ಅಥವಾ ಸಾಲದ ಅವಧಿಯಲ್ಲಿ ಯಾವುದೇ ಸಮಯದಲ್ಲಿ ಪಡೆಯಬಹುದು. ಇನ್ನು ಸಾಲದ ವೆಚ್ಚ ಕೂಡ ಸಾಲದ ಮೊತ್ತ, ಸಾಲದ ಅವಧಿ, ಸಾಲಗಾರರ ವಯಸ್ಸು ಹಾಗೂ ಆರೋಗ್ಯ, ಆಯ್ಕೆ ಮಾಡಿದ ಕವರೇಜ್ ಸೇರಿದಂತೆ ಅನೇಕ ಅಂಶಗಳನ್ನು ಅವಲಂಬಿಸಿದ್ದು, ಅದರ ಆಧಾರದಲ್ಲಿ ವಿಮೆ ವೆಚ್ಚ ಬದಲಾಗುತ್ತದೆ. 

ಗೃಹಸಾಲ ವಿಮೆ ಕಡ್ಡಾಯವಲ್ಲ
ಇನ್ನು ಗೃಹಸಾಲ ವಿಮೆ ಕಡ್ಡಾಯವಲ್ಲ. ಸಾಲ ನೀಡುವ ಬ್ಯಾಂಕ್ ಗಳು ಖರೀದಿದಾರರಿಗೆ ಪಾಲಿಸಿಯನ್ನು ಖರೀದಿಸುವಂತೆ ಒತ್ತಾಯ ಕೂಡ ಮಾಡಬಾರದು. ಹೀಗಾಗಿ ನೀವು ಗೃಹಸಾಲ ಪಡೆಯುವಾಗ ವಿಮೆ ಖರೀದಿಸುವಂತೆ ಬ್ಯಾಂಕ್ ಗಳು ಒತ್ತಡ ಹೇರಿದರೆ ನೀವು ಖರೀದಿಸಬೇಕಾಗಿಲ್ಲ. ಇದು ಖರೀದಿದಾರರ ಆಯ್ಕೆಗೆ ಬಿಟ್ಟಿದ್ದಾಗಿದೆ. 

ಗೃಹಸಾಲ ತೀರಿಸಿದ ತಕ್ಷಣ ತಪ್ಪದೇ ಈ 5 ಕೆಲಸಗಳನ್ನುಮಾಡಿ, ಇಲ್ಲವಾದ್ರೆ ತೊಂದ್ರೆ ಖಚಿತ!

ಆಸ್ತಿ ವಿಮೆ ಕೂಡ ಕಡ್ಡಾಯವಲ್ಲ
ಭಾರತದಲ್ಲಿ ಗೃಹಸಾಲಗಳಿಗೆ ಆಸ್ತಿ ವಿಮೆ ಕಡ್ಡಾಯ. ಆದರೂ ಖರೀದಿದಾರರಿಗೆ ವಿಮಾ ಕಂಪನಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನೀಡಲಾಗಿದೆ. ಈ ಕಂಪನಿಗಳಿಂದ ಅವರು ವಿಮಾ ಕವರೇಜ್ ಪಡೆಯಬಹುದು. ಉದಾಹರಣೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಅಡಮಾನ ಆಸ್ತಿಗೆ ಬೆಂಕಿ, ಪ್ರವಾಹ, ಭೂಕಂಪ ಹಾಗೂ ಇತರ ಅಪಾಯಗಳಿಂದ ವಿಮೆ ಸಿಗುವಂತೆ ಮಾಡಲಾಗಿದೆ. ವಿಮೆಯನ್ನು ಬ್ಯಾಂಕ್ ಹಾಗೂ ಸಾಲಗಾರರು ಜಂಟಿಯಾಗಿ ಪಡೆಯಬೇಕು. ಇನ್ನು ಸಾಲಗಾರರು ಈ ವಿಮೆಯ ವೆಚ್ಚವನ್ನು ಭರಿಸಲು ಜವಾಬ್ದಾರರಾಗಿದ್ದಾರೆ. 

ಗೃಹಸಾಲದ ಜೊತೆಗೆ ಲಭ್ಯವಿರುವ ವಿಮೆಗಳು
ಎಸ್ ಬಿಐ ಗೃಹಸಾಲ ಪೋರ್ಟಲ್ ನಲ್ಲಿ ನೀಡಿರುವ ಮಾಹಿತಿ ಅನ್ವಯ ಟರ್ಮ್ ಇನ್ಯುರೆನ್ಸ್ ಉತ್ಪನ್ನಗಳನ್ನು ಎಸ್ ಬಿಐ ಲೈಫ್ ಇನ್ಯುರೆನ್ಸ್ ಕಂಪನಿ ಒದಗಿಸುತ್ತದೆ. ಈ ಉತ್ಪನ್ನಗಳು ಪಾಲಿಸಿದಾರರಿಗೆ ನಿರ್ದಿಷ್ಟ ಅವಧಿಗೆ ಹಣಕಾಸಿನ ಕವರೇಜ್ ಒದಗಿಸುತ್ತದೆ. ಇನ್ನು ಪಾಲಿಸಿ ಅವಧಿಯಲ್ಲಿ ವಿಮೆ ಪಡೆದ ವ್ಯಕ್ತಿಗಳು ಮರಣ ಹೊಂದಿದರೆ ಫಲಾನುಭವಿಗೆ ಮರಣ ಪ್ರಯೋಜನ ನೀಡಲಾಗುತ್ತದೆ. ಟರ್ಮ್ ಇನ್ಯುರೆನ್ಸ್ ಖರೀದಿದಾರರ ಆಯ್ಕೆಗೆ ಬಿಟ್ಟಿದ್ದಾಗಿದೆ.

ಬಾಡಿಗೆ ಮನೆ ವಾಸಿಗಳಿಗೆ ಗುಡ್ ನ್ಯೂಸ್; ಸ್ವಂತ ಸೂರು ಹೊಂದಲು ಶೀಘ್ರದಲ್ಲೇ ಕೇಂದ್ರದ ಹೊಸ ಯೋಜನೆ ಜಾರಿ

ಇನ್ನೊಂದೆಡೆ ಎಸ್ ಬಿಐ ಜನರಲ್ ಆಸ್ತಿ ವಿಮೆ ಒದಗಿಸುತ್ತದೆ. ಇದು ಖಾಸಗಿ ಮನೆಗಳನ್ನು ಕವರ್ ಮಾಡುತ್ತದೆ. ಅಲ್ಲದೆ, ನೈಸರ್ಗಿಕ ವಿಕೋಪಗಳಿಂದ ಆದ ಹಾನಿಯಿಂದ ಸಂರಕ್ಷಣೆ ಒದಗಿಸುತ್ತದೆ. ಎಸ್ ಬಿಐನಲ್ಲಿ ಆಸ್ತಿ ವಿಮೆ ಮಾಡೋದು ಕಡ್ಡಾಯ. 

ಇನ್ನು ಗೃಹಸಾಲ ವಿಮೆ ಖರೀದಿಸಬೇಕೆ ಅಥವಾ ಬೇಡ್ವಾ ಎಂಬುದು ವೈಯಕ್ತಿಕ ಆಯ್ಕೆ. ಹೀಗಾಗಿ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಗೃಹ ಸಾಲ ವಿಮೆಯ ಪ್ರಯೋಜನ ಹಾಗೂ ಕೊರತೆಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಹೀಗಾಗಿ ಗೃಹಸಾಲ ಪಡೆಯೋರು ವಿಮೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡು ಆ ಬಳಿಕ ಖರೀದಿ ನಿರ್ಧಾರ ಮಾಡೋದು ಉತ್ತಮ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!