Home Loan:ಗೃಹ ಸಾಲ ಪಡೆಯಲು ಯಾವ ಬ್ಯಾಂಕ್ ಬೆಸ್ಟ್; ಎಲ್ಲಿ ಬಡ್ಡಿದರ ಕಡಿಮೆಯಿದೆ? ಇಲ್ಲಿದೆ ಮಾಹಿತಿ

Published : Jun 04, 2022, 09:44 PM IST
Home Loan:ಗೃಹ ಸಾಲ ಪಡೆಯಲು ಯಾವ ಬ್ಯಾಂಕ್ ಬೆಸ್ಟ್; ಎಲ್ಲಿ ಬಡ್ಡಿದರ ಕಡಿಮೆಯಿದೆ? ಇಲ್ಲಿದೆ ಮಾಹಿತಿ

ಸಾರಾಂಶ

*ಉತ್ತಮ ಬಡ್ಡಿದರದಲ್ಲಿ ಗೃಹ ಸಾಲ ನೀಡುತ್ತಿರುವ ಎಚ್ ಡಿಎಫ್ ಸಿ, ಎಸ್ ಬಿಐ, ಕೋಟಕ್, ಯೂನಿಯನ್ ಬ್ಯಾಂಕ್ *ಸಾಲಗಾರರ ಸಿಬಿಲ್ ಸ್ಕೋರ್, ಲಿಂಗ ಹಾಗೂ ಸಾಲದ ಮೊತ್ತದ ಆಧಾರದಲ್ಲಿ ಬಡ್ಡಿದರ ನಿಗದಿ *ಆರ್ ಬಿಐ ರೆಪೋ ದರ ಹೆಚ್ಚಳ ಬೆನ್ನಲ್ಲೇ ಗೃಹಸಾಲದ ಬಡ್ಡಿದರ ಹೆಚ್ಚಿಸಿರುವ ಬ್ಯಾಂಕುಗಳು  

Business Desk:ಭಾರತದಲ್ಲಿ ರಿಯಲ್ ಎಸ್ಟೇಟ್ ಮಾರ್ಕೆಟ್ ಚಟುವಟಿಕೆಗಳು ಈಗ ಬಿರುಸುಗೊಂಡಿದ್ದು, ಮನೆಗಳ ಮಾರಾಟ ಹಾಗೂ ಆಸ್ತಿಗಳ ನೋಂದಣಿಯಲ್ಲಿ ಏರಿಕೆ ಕಂಡುಬರುತ್ತಿದೆ. ಈ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಬ್ಯಾಂಕುಗಳು ಗೃಹಸಾಲದ ಮೇಲಿನ ಬಡ್ಡಿದರವನ್ನು ಕೂಡ ಹೆಚ್ಚಳ ಮಾಡಿವೆ. ಗೃಹಸಾಲದ ಬಡ್ಡಿದರದಲ್ಲ ಬ್ಯಾಂಕಿನಿಂದ ಬ್ಯಾಂಕಿಗೆ ವ್ಯತ್ಯಾಸವಿದೆ. ಎಚ್ ಡಿಎಫ್ ಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI),ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೋಟಕ್ ಮಹೀಂದ್ರ ಬ್ಯಾಂಕ್ ಗಳಲ್ಲಿ ಗೃಹಸಾಲದ ಮೇಲಿನ ಬಡ್ಡಿದರ ಎಷ್ಟಿದೆ? ಯಾವ ಬ್ಯಾಂಕಿನಲ್ಲಿ ಬಡ್ಡಿದರ ಕಡಿಮೆಯಿದೆ?
ಇಲ್ಲಿದೆ ಮಾಹಿತಿ.

ಎಚ್ ಡಿಎಫ್ ಸಿ 
ಎಚ್ ಡಿಎಫ್ ಸಿ (HDFC) ದೇಶದ ಅತೀದೊಡ್ಡ ಸಾಲ ನೀಡುವ ಸಂಸ್ಥೆಯಾಗಿದೆ. ಇದು ಈಗ ಎಚ್ ಡಿಎಫ್ ಸಿ ಬ್ಯಾಂಕಿನೊಂದಿಗೆ ವಿಲೀನಗೊಂಡಿದೆ. ಎಚ್ ಡಿಎಫ್ ಸಿ ಶೇ.7.15-ಶೇ.8.05 ಬಡ್ಡಿದರದಲ್ಲಿ ಗೃಹ ಸಾಲಗಳನ್ನು (Home loan) ನೀಡುತ್ತದೆ. ಈ ಬಡ್ಡಿದರವು ಸಾಲಗಾರರ ರಿಸ್ಕ್ ಪ್ರೊಫೈಲ್ (Risk Profile), ಲಿಂಗ  (Gender) ಹಾಗೂ ಎಷ್ಟು ಮೊತ್ತದ ಸಾಲ ಪಡೆದಿದ್ದಾರೆ ಎಂಬುದನ್ನು ಅವಲಂಬಿಸಿದ್ದು, ಅದರ ಆಧಾರದಲ್ಲಿ ಬದಲಾಗುತ್ತದೆ. ಒಂದು ವೇಳೆ ನೀವು ಉತ್ತಮ ಸಿಬಿಲ್ ಸ್ಕೋರ್ ( CIBIL score) ಹೊಂದಿದ್ದರೆ, ಕಡಿಮೆ ಸ್ಕೋರ್ ಹೊಂದಿರೋರಿಗಿಂತ ನಿಮಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತದೆ. ಹಾಗೆಯೇ ನಿಮ್ಮ ಸಾಲದ ಮೊತ್ತ ಅಧಿಕವಿದ್ದರೆ, ಬಡ್ಡಿದರ ಕೂಡ ಹೆಚ್ಚಿರುತ್ತದೆ. ಎಚ್ ಡಿಎಫ್ ಸಿಯ ಹೊಂದಾಣಿಕೆ ದರದ ಗೃಹ ಸಾಲ ಯೋಜನೆಗಳಡಿಯಲ್ಲಿ ಈ ಗೃಹಸಾಲಗಳ ಮೇಲಿನ ಬಡ್ಡಿದರ ಬದಲಾಗುತ್ತದೆ. 

Personal Finance : ಕ್ರೆಡಿಟ್ ಕಾರ್ಡ್ ಸಾಲ ಕತ್ತಿಗೆ ಬರೋ ಮುನ್ನ ಹೀಗೆ ಮಾಡಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಭಾರತದ ಅತೀದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶೇ.7-ಶೇ.7.7 ಬಡ್ಡಿದರಗಳಲ್ಲಿ ಗೃಹ ಸಾಲಗಳನ್ನು ಒದಗಿಸುತ್ತದೆ. ಲಿಂಗದ ಹೊರತಾಗಿಯೂ ಬ್ಯಾಂಕ್ ಸಿದ್ಧಗೊಂಡಿರುವ ಆಸ್ತಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರತ್ಯೇಕ ಬಡ್ಡಿದರಗಳನ್ನು ಹೊಂದಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಲಿಂಗದ ಹೊರತಾಗಿಯೂ ವೇತನ ಪಡೆಯುತ್ತಿರುವ ಹಾಗೂ ವೇತನ ಪಡೆಯದ ಸಾಲಗಾರರ ಆಧಾರದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank of India)  ಪ್ರಸ್ತುತ ಶೇ.6.9-ಶೇ.8.6 ಬಡ್ಡಿದರ ನೀಡುತ್ತಿದೆ. 

ಕೋಟಕ್ ಮಹೀಂದ್ರ ಬ್ಯಾಂಕ್
ಖಾಸಗಿ ವಲಯದ ಬ್ಯಾಂಕ್ ಕೋಟಕ್ ಮಹೀಂದ್ರ ಬ್ಯಾಂಕ್ (Kotak Mahindra Bank) ಗೃಹ ಸಾಲಗಳ ಮೇಲೆ ಶೇ.6.55-ಶೇ.7.6 ಬಡ್ಡಿದರ ವಿಧಿಸುತ್ತದೆ. ಈ ಬಡ್ಡಿದರಗಳ ಹೊರತಾಗಿ ಬ್ಯಾಂಕುಗಳು ಜಿಎಸ್ ಟಿ ಹಾಗೂ ಪ್ರಕ್ರಿಯೆ ಶುಲ್ಕವನ್ನು ಕೂಡ ವಿಧಿಸುತ್ತದೆ. ಇದು ಸುಮಾರು ಶೇ.0.5 ರಷ್ಟಿದೆ.

Business Ideas : 25 ಸಾವಿರ ಹೂಡಿಕೆಯ ಈ ಬ್ಯುಸಿನೆಸ್‌ನಲ್ಲಿ ಸಿಗುತ್ತೆ 3 ಲಕ್ಷ ಲಾಭ

ಇಎಂಐ ಹೊರೆ ತಗ್ಗಿಸುವುದು ಹೇಗೆ? 
ಗೃಹಸಾಲಗಳ (Home Loans) ಮೇಲಿನ ಬಡ್ಡಿದರ ಹೆಚ್ಚಳದಿಂದ ತಿಂಗಳ ಇಎಂಐ (EMI) ಪಾವತಿಯಲ್ಲಿ ಏರಿಕೆಯಾಗುವುದು ಸಹಜ. ಆದ್ರೆ ಇತ್ತೀಚಿನ ದಿನಗಳಲ್ಲಿ ಹಣದುಬ್ಬರ (Inflation) , ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಈಗಾಗಲೇ ಜೀವನ ನಿರ್ವಹಣೆ ದುಬಾರಿಯಾಗಿದೆ. ತಿಂಗಳ ವೇತನದಲ್ಲಿ ನಿತ್ಯದ ಖರ್ಚು ವೆಚ್ಚಗಳನ್ನು ನಿಭಾಯಿಸುವುದೇ ಕಷ್ಟವಾಗಿದೆ. ಇಂಥ ಸಂದರ್ಭದಲ್ಲಿ ಇಎಂಐ ಹಚ್ಚಳ ಖಂಡಿತವಾಗಿಯೂ ಬಹುತೇಕರ ಜೇಬಿಗೆ ಹೊರೆಯಾಗಲಿದೆ. ಇಂಥ ಸಂದರ್ಭದಲ್ಲಿ ಇಎಂಐ ಹೊರೆ ತಗ್ಗಿಸಲು ಎರಡು ಆಯ್ಕೆಗಳಿವೆ. ಒಂದು ಸಾಲದ ಅವಧಿ ವಿಸ್ತರಣೆ. ಇನ್ನೊಂದು ಸಾಲದ ಸ್ವಲ್ಪ ಮೊತ್ತವನ್ನು ಅವಧಿಗೂ ಮುನ್ನವೇ ಪಾವತಿಸುವುದು. ಇದ್ರಿಂದ ಇಎಂಐ ಭಾರ ತಗ್ಗಲಿದೆ. ಗೃಹಸಾಲಗಳು ದೀರ್ಘಾವಧಿಯದ್ದಾಗಿರುವ ಕಾರಣ ಅವಧಿಗೂ ಮುನ್ನವೇ ಪಾವತಿ ಮಾಡುವ ಅವಕಾಶವಿದೆ. ಹೀಗಾಗಿ ಸಾಲವನ್ನು ಆದಷ್ಟು ಬೇಗನೇ ತೀರಿಸಲು ಪ್ರಯತ್ನಿಸಿ. ಇದು ಸಾಧ್ಯವಾಗದವರು ಪ್ರತಿ ವರ್ಷ ನಿಗದಿತ ಮೊತ್ತಕ್ಕಿಂತ ಸ್ವಲ್ಪ ಹೆಚ್ಚಿನ ಮೊತ್ತವನ್ನು ಸಾಲದ ಖಾತೆಗೆ ಹಾಕುವ ಮೂಲಕ ಇಎಂಐ ಹೊರೆಯನ್ನು ತುಸು ತಗ್ಗಿಸಿಕೊಳ್ಳಬಹುದು ಎನ್ನುತ್ತಾರೆ ತಜ್ಞರು. 


 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಬೀದಿಯಲ್ಲಿ ಬಿದ್ದಿದ್ದ ಕಲ್ಲಿಂದ ಹಣ ಮಾಡೋದು ಹೇಗೆ ಎಂದು ತೋರಿಸಿಕೊಟ್ಟ ಹುಡುಗ: ವೀಡಿಯೋ ಭಾರಿ ವೈರಲ್
ಸ್ಟಾರ್‌ಲಿಂಕ್‌ ಇಂಟರ್ನೆಂಟ್‌ ವೆಬ್‌ಸೈಟ್‌ ಆರಂಭ, 30 ದಿನದ ಫ್ರೀ ಟ್ರಯಲ್‌ ಜೊತೆ ರಿಚಾರ್ಜ್‌ ಘೋಷಿಸಿದ ಮಸ್ಕ್‌ ಕಂಪನಿ!