ಬೆಲೆ ಏರಿಕೆಯಿಂದ ಕಂಗೆಟ್ಟಿರುವ ದೇಶದ ಮಧ್ಯಮ ವರ್ಗದ ಜನರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ಅಂದರೆ ನಾಡಿದ್ದು, ಮತ್ತೆ ಬಿಸಿ ಮುಟ್ಟಿಸುವ ಸಾಧ್ಯತೆ ಇದೆ.
ನವದೆಹಲಿ: ಬೆಲೆ ಏರಿಕೆಯಿಂದ ಕಂಗೆಟ್ಟಿರುವ ದೇಶದ ಮಧ್ಯಮ ವರ್ಗದ ಜನರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ಅಂದರೆ ನಾಡಿದ್ದು, ಮತ್ತೆ ಬಿಸಿ ಮುಟ್ಟಿಸುವ ಸಾಧ್ಯತೆ ಇದೆ. ಆರ್‌ಬಿಐನ ದ್ವೈಮಾಸಿಕ ಸಾಲ ನೀತಿ ಸಭೆ ಇಂದಿನಿಂದ ಆರಂಭವಾಗಲಿದ್ದು, ಬುಧವಾರ ಗೃಹ, ವಾಹನ, ವಾಣಿಜ್ಯ ಸಾಲದ ಹೊಸ ಬಡ್ಡಿದರವನ್ನು ಘೋಷಿಸಲಾಗುವುದು. ಮೂಲಗಳ ಪ್ರಕಾರ, ಈ ಬಾರಿಯೂ ಬಡ್ಡಿ ಏರಿಕೆ ಖಚಿತವಾಗಿದ್ದು, ಆದರೆ ಹಿಂದಿನ ಮೂರು ಸಾಲ ನೀತಿಗಳಿಗೆ ಹೋಲಿಸಿದರೆ ಪ್ರಮಾಣ ಕಡಿಮೆ ಇರಬಹುದು ಎಂದು ಹೇಳಲಾಗುತ್ತಿದೆ.
ಆರ್ಥಿಕ ತಜ್ಞರ ಪ್ರಕಾರ ಈ ಬಾರಿ ಆರ್‌ಬಿಐ ಸಾಲದ ಮೇಲಿನ ಬಡ್ಡಿದರವನ್ನು ಶೇ.0.25 ರಿಂದ ಶೇ.0.35ರಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ. ಹಣದುಬ್ಬರ ನಿಯಂತ್ರಣಕ್ಕಾಗಿ ಆರ್‌ಬಿಐ ಕಳೆದ ಜನವರಿ ಬಳಿಕ ಬಡ್ಡಿದರವನ್ನು ಶೇ.1.90ರಷ್ಟು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಿದೆ. ಈ ಪೈಕಿ ಕಳೆದ ಮೂರು ಹಣಕಾಸು ನೀತಿಗಳಲ್ಲೂ ಬಡ್ಡಿದರ ಏರಿಕೆ ಪ್ರಮಾಣ ಕ್ರಮವಾಗಿ ಶೇ.0.50ರಷ್ಟಿತ್ತು. ಪ್ರಸಕ್ತ ಹಣದುಬ್ಬರ ಅಲ್ಪ ಇಳಿಕೆಯಾಗಿದ್ದರೂ, ಇನ್ನೂ ಶೇ.6ಕ್ಕಿಂತಲೇ ಮೇಲೇ ಇರುವ ಕಾರಣ, ಬಹುತೇಕ ಬಡ್ಡಿದರ ಏರಿಕೆ ಮಾಡುವುದು ಖಚಿತ, ಆದರೆ ಹಿಂದಿನಂತೆ ಶೇ.0.50ರ ಬದಲಾಗಿ ಶೇ.0.25-0.35ರಷ್ಟಿರಬಹುದು ಎಂದು ವಿಶ್ಲೇಷಿಸಲಾಗಿದೆ. ಒಂದು ವೇಳೆ ಶೇ.0.35ರಷ್ಟು ಹೆಚ್ಚಳವಾದರೆ ಕಳೆದ 11 ತಿಂಗಳಲ್ಲಿ ಶೇ.2.25ರಷ್ಟು ಬಡ್ಡಿ ದರ ಹೆಚ್ಚಳ ಮಾಡಿದಂತೆ ಆಗಲಿದೆ.
ರಿಟೇಲ್ ಮಾರುಕಟ್ಟೆ ಪ್ರವೇಶಿಸಿದ ಡಿಜಿಟಲ್ ರೂಪಾಯಿ; ಈಗಲೇ ಬಳಕೆಗೆ ಲಭ್ಯವಾ?
Q2 GDP Data: ಜಾಗತಿಕ ಸವಾಲುಗಳ ನಡುವೆ ರಿಲೀಫ್ ನೀಡಿದ ಭಾರತದ ಆರ್ಥಿಕತೆ, ಶೇ.6.3ಗೆ ಏರಿಕೆ!