ಮುಕೇಶ್ ಅಂಬಾನಿ ಸಹೋದರ ಅನಿಲ್ ಅಂಬಾನಿ, ಹಲವು ವರ್ಷಗಳಿಂದ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಮೂರು ವರ್ಷಗಳ ಹಿಂದೆ ಅವರ ನಿವ್ವಳ ಮೌಲ್ಯವು ಶೂನ್ಯವಾಗಿದೆ ಎಂದು ಅವರೇ ತಿಳಿಸಿದ್ದರು. ಸದ್ಯ ಕೋಟ್ಯಾಂತರ ರೂ. ಸಾಲದಲ್ಲಿರುವ ಅನಿಲ್ ಅಂಬಾನಿ ಬಿಸಿನೆಸ್‌ನ್ನು ಬೃಹತ್ ಉದ್ಯಮಿಯೊಬ್ಬರು ಖರೀದಿಸಲು ಮುಂದಾಗಿದ್ದಾರೆ.
ಬೃಹತ್ ಕೈಗಾರಿಕೋದ್ಯಮಿ ಧೀರೂಭಾಯಿ ಅಂಬಾನಿ ಅವರ ಕಿರಿಯ ಮಗ ಅನಿಲ್ ಅಂಬಾನಿ, ಹಲವು ವರ್ಷಗಳಿಂದ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಮೂರು ವರ್ಷಗಳ ಹಿಂದೆ ಅವರ ನಿವ್ವಳ ಮೌಲ್ಯವು ಶೂನ್ಯವಾಗಿದೆ ಎಂದು ಅವರೇ ತಿಳಿಸಿದ್ದರು. ಕೋಟ್ಯಾಂತರ ರೂ. ಸಾಲದಲ್ಲಿ ಮುಳುಗಿರುವ ಮುಕೇಶ್ ಅಂಬಾನಿ ತಮ್ಮ ಹಲವು ಸಂಸ್ಥೆಗಳನ್ನು ಮಾರಿದ್ದಾರೆ. ಸದ್ಯ ಸಂಕಷ್ಟದಲ್ಲಿರುವ ಅನಿಲ್ ಅಂಬಾನಿಯ ಕಂಪೆನಿಯೊಂದನ್ನು ಈ ಉದ್ಯಮಿ ಸಹೋದರರು ಖರೀದಿಸಲು ಮುಂದಾಗಿದ್ದಾರೆ. ಸಾಲದಲ್ಲಿ ಮುಳುಗಿರುವ ಅನಿಲ್ ಅಂಬಾನಿ ಕಂಪೆನಿಗಳನ್ನು ಖರೀದಿಸ್ತಿರೋದು ಮತ್ಯಾರೂ ಅಲ್ಲ ಭಾರತೀಯ ವ್ಯಾಪಾರ ವಲಯದಲ್ಲಿ ಸಾಕಷ್ಟು ಜನಪ್ರಿಯರಾಗಿರುವ ಹಿಂದೂಜಾ ಬ್ರದರ್ಸ್.
ಟ್ರಕ್‌ಗಳು, ಬ್ಯಾಂಕಿಂಗ್, ಕೇಬಲ್ ಟೆಲಿವಿಷನ್ ಹೀಗೆ ಹಲವು ರೀತಿಯ ಬಿಸಿನೆಸ್‌ಗೆ ಹಿಂದೂಜಾ ಗ್ರೂಪ್ ಹೆಸರು ಪಡೆದಿದೆ. ಬೃಹತ್ ಹೂಡಿಕೆಯಿಂದಾಗಿ ಹಿಂದೂಜಾ ಸಹೋದರರು ಭಾರತೀಯ ವ್ಯಾಪಾರ ವಲಯದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಹಿಂದೂಜಾ ಸಹೋದರರಲ್ಲಿ ನಾಲ್ವರು ಸಹೋದರರು ಸೇರಿದ್ದಾರೆ. ಶ್ರೀಚಂದ್, ಗೋಪಿಚಂದ್, ಪ್ರಕಾಶ್ ಮತ್ತು ಅಶೋಕ್. ಎಲ್ಲಾ ನಾಲ್ಕು ಹಿಂದೂಜಾ ಸಹೋದರರು ಒಟ್ಟಾಗಿ 1914ರಲ್ಲಿ ಅವರ ತಂದೆ ಪರ್ಮಾನಂದ್ ದೀಪ್‌ಚಂದ್ ಹಿಂದುಜಾ ಸ್ಥಾಪಿಸಿದ ಬೃಹತ್ ಸಮೂಹವನ್ನು ಮುನ್ನಡೆಸಿದರು.
ಜಗತ್ತಿನ 6ನೇ ಅತಿದೊಡ್ಡ ಶ್ರೀಮಂತರಾಗಿದ್ದ ಅನಿಲ್ ಅಂಬಾನಿ ದಿವಾಳಿಯಾಗಿದ್ದು ಆ ಒಂದು ತಪ್ಪಿನಿಂದ!
9650 ಕೋಟಿ ರೂ. ರಿಲಯನ್ಸ್ ಕ್ಯಾಪಿಟಲ್ ಸ್ವಾಧೀನಪಡಿಸಿಕೊಳ್ಳಲು ಸಿದ್ಧತೆ
ಫೋರ್ಬ್ಸ್ ಪ್ರಕಾರ, ಹಿಂದೂಜಾ ಕುಟುಂಬವು ಪ್ರಸ್ತುತ 166110 ಕೋಟಿ ರೂ. ವ್ಯವಹಾರವನ್ನು ನಿರ್ವಹಿಸುತ್ತಿದೆ. ಜೊತೆಗೆ ಮುಕೇಶ್ ಅಂಬಾನಿ ಅವರ ಸಹೋದರ ಅನಿಲ್ ಅಂಬಾನಿ ಒಡೆತನದ 9650 ಕೋಟಿ ರೂ. ರಿಲಯನ್ಸ್ ಕ್ಯಾಪಿಟಲ್‌ನ್ನು ಸ್ವಾಧೀನಪಡಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಅನಿಲ್ ಅಂಬಾನಿ ಅವರ ಕಂಪನಿಯನ್ನು ಖರೀದಿಸಲು 4000 ಕೋಟಿ ರೂ ಸಾಲವನ್ನು ಪಡೆಯಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.
ಹಿಂದುಜಾ ಗ್ರೂಪ್ ಅನಿಲ್ ಅಂಬಾನಿಯವರ ರಿಲಯನ್ಸ್ ಕ್ಯಾಪಿಟಲ್ ಅನ್ನು ದಿವಾಳಿತನದ ಕೋಡ್ ಅಡಿಯಲ್ಲಿ ಸ್ವಾಧೀನಪಡಿಸಿಕೊಳ್ಳಲು 4000 ರೂ. ಕೋಟಿ ಸಾಲವನ್ನು ಪಡೆಯಲು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿ 360 ಒನ್ ಪ್ರೈಮ್ (ಹಿಂದೆ IIFL ವೆಲ್ತ್ ಪ್ರೈಮ್) ನೊಂದಿಗೆ ಮಾತುಕತೆ ನಡೆಸುತ್ತಿದೆ. ಹಿಂದೂಜಾ ಗ್ರೂಪ್‌ನ ಇಂಡಸ್‌ಇಂಡ್ ಇಂಟರ್‌ನ್ಯಾಶನಲ್ ಹೋಲ್ಡಿಂಗ್ಸ್ ಒಪ್ಪಂದಕ್ಕಾಗಿ ಒಟ್ಟು 8,000 ಕೋಟಿ ಸಾಲ ಪಡೆಯಲು ಎದುರು ನೋಡುತ್ತಿದೆ ಎಂದು ವರದಿ ಸೂಚಿಸುತ್ತದೆ.
ಜಗತ್ತಿನ 6ನೇ ಅತಿದೊಡ್ಡ ಸಿರಿವಂತ ಎನಿಸಿಕೊಂಡಾತ ಈಗ ಬರೋಬ್ಬರಿ 23 ಕೋಟಿಯ ಸಾಲಗಾರ!
ಗೋಪಿಚಂದ್ ಹಿಂದುಜಾ ಪ್ರಸ್ತುತ ಗುಂಪಿನ ಅಧ್ಯಕ್ಷರಾಗಿದ್ದಾರೆ. ಮೇ 2023 ರಲ್ಲಿ ಅವರ ಹಿರಿಯ ಸಹೋದರ ಚಂದ್ ಹಿಂದುಜಾ ನಿಧನರಾದ ನಂತರ ಅವರು ಈ ಸ್ಥಾನವನ್ನು ಪಡೆದರು. 1979ರ ವರೆಗೆ ಹಿಂದೂಜಾ ಗ್ರೂಪ್ ಇರಾನ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿತ್ತು. ಚಂದ್ ಹಿಂದುಜಾ ಮತ್ತು ಅವರ ಸಹೋದರ ಗೋಪಿಚಂದ್ ರಫ್ತು ವ್ಯವಹಾರವನ್ನು ಅಭಿವೃದ್ಧಿಪಡಿಸಲು 1979ರಲ್ಲಿ ಲಂಡನ್‌ಗೆ ತೆರಳಿದರು. ಪ್ರಕಾಶ್ ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಗುಂಪಿನ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದ್ದರೆ ಕಿರಿಯ ಸಹೋದರ ಅಶೋಕ್ ಭಾರತೀಯ ಬಿಸಿನೆಸ್ ನೋಡಿಕೊಳ್ಳುತ್ತಾರೆ.
ಭಾರತ ಸೇರಿದಂತೆ ಪ್ರಪಂಚದಾದ್ಯಂತದ ಅನೇಕ ಪ್ರಮುಖ ನಗರಗಳಲ್ಲಿ ಹಿಂದುಜಾ ಗ್ರೂಪ್ ಕಚೇರಿಗಳನ್ನು ಹೊಂದಿದೆ. 2017ರಲ್ಲಿ ಶ್ರೀಚಂದ್ ಮತ್ತು ಗೋಪಿಚಂದ್ ಹಿಂದುಜಾ ಅವರನ್ನು ಬ್ರಿಟನ್‌ನ ಅತ್ಯಂತ ಶ್ರೀಮಂತ ವ್ಯಕ್ತಿಗಳೆಂದು ಗುರುತಿಸಲಾಗಿದೆ.