ದೇಶದ ಆರ್ಥಿಕ ಸ್ಥಿತಿಗತಿ ಕುರಿತು ಎಲ್ಲೆಡೆ ಚರ್ಚೆ| ಹೊಸ ವಿವಾದಕ್ಕೆ ನಾಂದಿ ಹಾಡಿದ ಕೇಂದ್ರ ಸರ್ಕಾರ| ಯುಪಿಎ ಅವಧಿಯ ಜಿಡಿಪಿ ಬೆಳವಣಿಗೆ ದರದ ಡೇಟಾ ಡಿಲೀಟ್| ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ವೆಬ್‌ಸೈಟ್’ನಿಂದ ಡಿಲೀಟ್| ಜಿಡಿಪಿ ಲೆಕ್ಕಾಚಾರಕ್ಕೆ ಬೇಸ್ ಇಯರ್ ಆಗಿ 2004-05 ಬದಲು 2010-11ಕ್ಕೆ ಬದಲಾವಣೆ| 2006-07 ನೇ ಸಾಲಿನಲ್ಲಿ ಭಾರತ ಶೇ.10.8 ರಷ್ಟು ಐತಿಹಾಸಿಕ ಬೆಳವಣಿಗೆ ದಾಖಲು|
ನವದೆಹಲಿ(ಸೆ.01): ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ದೇಶದ ಆರ್ಥಿಕ ಸ್ಥಿತಿಗತಿಯ ಕುರಿತು ಗಂಭೀರ ಚರ್ಚೆ ನಡೆಯುತ್ತಿರುವ ಮಧ್ಯೆಯೇ ಹೊಸ ವಿವಾದವೊಂದು ಇದೀಗ ಭುಗಿಲೆದ್ದಿದೆ.
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಅವಧಿಯಲ್ಲಿ ದಾಖಲಾಗಿದ್ದ ಗರಿಷ್ಠ ಜಿಡಿಪಿ ಬೆಳವಣಿಗೆ ದರದ ವರದಿಯನ್ನು, ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ವೆಬ್‌ಸೈಟ್’ನಿಂದ ತೆಗೆದು ಹಾಕಲಾಗಿದೆ.
undefined
ಎನ್’ಡಿಎ ಸರ್ಕಾರ ಜಿಡಿಪಿ ಲೆಕ್ಕಾಚಾರಕ್ಕೆ ಬೇಸ್ ಇಯರ್ ಆಗಿ 2004-05 ಬದಲು 2010-11 ಕ್ಕೆ ಬದಲಾವಣೆ ಮಾಡಿದೆ. ಹಳೆಯ ವಿಧಾನದಲ್ಲಿ 2004-05ನ್ನು ಯುಪಿಎ ಸರ್ಕಾರ ಮಾದನಂಡವನ್ನಾಗಿ ಬಳಕೆ ಮಾಡಿದ್ದನ್ನು ಗಮನಿಸಬಹುದಾಗಿದೆ.
ಸಚಿವಾಲಯದ ವರದಿ ವೆಬ್ ಸೈಟ್ ನಲ್ಲಿ ಜು.25 ರಂದು ಪ್ರಕಟವಾಗಿತ್ತು, ಇದರಲ್ಲಿನ ಮಾಹಿತಿಯ ಪ್ರಕಾರ 2006-07 ನೇ ಸಾಲಿನಲ್ಲಿ ಭಾರತ ಶೇ.10.8 ರಷ್ಟು ಬೆಳವಣಿಗೆ ದಾಖಲಿಸಿತ್ತು.