ಐಟಿ ರಿಟರ್ನ್ಸ್ ಬಂದಿಲ್ಲ ಅಂದ್ರೆ ಏನ್ಮಾಡಬೇಕು?: ಸಿಂಪಲ್ ಸ್ಟೆಪ್ಸ್!

By Web Desk  |  First Published Oct 22, 2019, 3:01 PM IST

ಅಂತಿಮ ಹಂತದಲ್ಲಿ ಆದಾಯ ತೆರಿಗೆ ಸಲ್ಲಿಕೆ ಪ್ರಕ್ರಿಯೆ| ಐಟಿ ರಿಟರ್ನ್ಸ್  ಪ್ರಕ್ರಿಯೆಗೆ ಆದಾಯ ತೆರಿಗೆ ಇಲಾಖೆ ಮುಂದಡಿ| ತೆರಿಗೆ ಮರುಪಾವತಿಗಾಗಿ ಕಾಯುತ್ತಿರುವ ಪ್ರಾಮಾಣಿಕ ಪಾವತಿದಾರರು| ಇ-ಫೈಲಿಂಗ್‌ನ ವೆಬ್‌ಸೈಟ್ ಮುಖಪುಟದಲ್ಲೇ ನಿಮ್ಮ ಐಟಿಆರ್ ಸ್ಟೇಟಸ್| ನಿಮ್ಮ ಪ್ಯಾನ್ ಕಾರ್ಡ್ ಐಟಿಆರ್ ಸ್ವೀಕೃತಿ ಸಂಖ್ಯೆಗಳನ್ನು ನಮೂದಿಸಿ| ಇನ್ನೂ ಐಟಿ ರಿಟರ್ನ್ಸ್ ಬಂದಿರದಿದ್ದರೆ ಏನು ಮಾಡಬೇಕು?| ನಿಮ್ಮ ಬ್ಯಾಂಕ್ ಅಕೌಂಟ್ ವಿವರ ತಪ್ಪಾಗಿದ್ದರೆ ಸರಿಪಡಿಸಿಕೊಳ್ಳಲು ಇದೆ ದಾರಿ| 


ಬೆಂಗಳೂರು(ಅ.22): ಆದಾಯ ತೆರಿಗೆ ಸಲ್ಲಿಕೆ ಪ್ರಕ್ರಿಯೆ ಮುಗಿಯುತ್ತಾ ಬಂದಿದ್ದು, ವೈಯಕ್ತಿಕ ಆದಾಯ ತೆರಿಗೆ ಸಲ್ಲಿಕೆ ಮುಕ್ತಾಯ ಕಂಡಿದೆ. 

ಈ ಮಧ್ಯೆ ಐಟಿ ರಿಟರ್ನ್ಸ್  ಪ್ರಕ್ರಿಯೆಗೆ ಆದಾಯ ತೆರಿಗೆ ಇಲಾಖೆ ಮುಂದಾಗಲಿದ್ದು, ತೆರಿಗೆ ಮರುಪಾವತಿಗಾಗಿ ಪ್ರಾಮಾಣಿಕ ತೆರಿಗೆದಾರರು ಕಾತರದಿಂದ ಕಾಯುತ್ತಿದ್ದಾರೆ.

Tap to resize

Latest Videos

ತೆರಿಗೆ ಸಲ್ಲಿಸಿದ ಬಳಿಕ ಐಟಿ ಇಲಾಖೆ ಮಾಹಿತಿಗಳನ್ನು ಪರಿಶೀಲಿಸುತ್ತದೆ. ಇದಾದ ಬಳಿಕವಷ್ಟೇ ಐಟಿಆರ್ ಪ್ರಕ್ರಿಯೆಗೆ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ಐಟಿಆರ್ ಪರಿಶೀಲನೆಯ ನಂತರ ನಿಮ್ಮ ತೆರಿಗೆ ಮರುಪಾವತಿ ಸ್ಟೇಟಸ್‌ನ್ನು ನೀವು ಆನ್‌ಲೈನ್‌ನಲ್ಲೇ ಪರಿಶೀಲಿಸಬಹುದಾಗಿದೆ.

ಟ್ಯಾಕ್ಸ್ ರಿಫಂಡ್ ಸ್ಟೇಟಸ್ ತಿಳಿಯೋದು ಹೀಗೆ: ಒಂದು ಕ್ಲಿಕ್‌ನ ಸೇವೆ ನಿಮಗೆ!

ಆದರೆ ಕೆಲವೊಮ್ಮೆ ಐಟಿ ರಿಟರ್ನ್ಸ್ ಬರುವುದು ವಿಳಂಬವಾಗುತ್ತದೆ. ಪ್ರತ್ಯೇಕ ತೆರಿಗೆದಾರರಿಗೆ ನಿರ್ದಿಷ್ಟ ರಿಟರ್ನ್ಸ್ ಸಲ್ಲಿಸಲು ಆದಾಯ ತೆರಿಗೆ ಇಲಾಖೆ ಸಮಯ ತೆಗೆದುಕೊಳ್ಳುತ್ತದೆ. 

ಅಲ್ಲದೇ ಕೆಲವೊಮ್ಮೆ ತೆರಿಗೆದಾರ ತೆರಿಗೆ ಕಟ್ಟುವ ಸಂದರ್ಭದಲ್ಲಿ ತನ್ನ ಬ್ಯಾಂಕ್ ಅಕೌಂಟ್ ವಿವರಗಳನ್ನು ತಪ್ಪಾಗಿ ನೀಡಿರುವ ಸಾಧ್ಯತೆ ಇರುವುದರಿಂದಲೂ ಐಟ ರಿಟರ್ನ್ಸ್ ವಿಳಂಬವಾಗುತ್ತದೆ.

ಹೀಗೆ ಐಟಿ ರಿಟರ್ನ್ಸ್  ಸಲ್ಲಿಕೆ ವಿಳಂಬವಾದರೆ ತೆರಿಗೆದಾರ ಆದಾಯ ತೆರಿಗೆ ಇಲಾಖೆ ಕದ ತಟ್ಟಬಹುದಾಗಿದ್ದು, ಆನ್’ಲೈನ್ ಮೂಲಕವೇ ಐಟಿ ರಿಟರ್ನ್ಸ್  ಸಲ್ಲಿಕೆಗೆ ಮನವಿ ಮಾಡಬಹುದಾಗಿದೆ.

ಆದಾಯ ತೆರಿಗೆ ಇಲಾಖೆ ಅಧಿಕೃತ ವೆಬ್’ಸೈಟ್’ಗೆ ಭೇಟಿ ನೀಡಿ ಪ್ಯಾನ್ ಸೇರಿದಂತೆ ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಿ, ಐಟಿ ರಿಟರ್ನ್ಸ್ ಗೆ ಮನವಿ ಸಲ್ಲಿಸಬಹುದು.

ಒಂದು ವೇಳೆ ನಿಮ್ಮ ರಿಟರ್ನ್ಸ್ ಪ್ರಕ್ರಿಯೆ ವಿಚಾರಣಾ ಹಂತದಲ್ಲಿದ್ದರೆ ಕೂಡಲೇ  ಐಟಿ ಇಲಾಖೆಯಿಂದ ನಿಮಗೆ ಮೆಸೆಜ್ ಬರುತ್ತದೆ. ಅಂತಿಮ ಹಂತದ ಪ್ರಕ್ರಿಯೆಯ ದಿನಾಂಕ ಮತ್ತು ರಿಟರ್ನ್ಸ್ ಬರುವ ದಿನಾಂಕದ ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದು.

ಒಂದು ವೇಳೆ ನೀವು ನಿಮ್ಮ ಬ್ಯಾಂಕ್ ಅಕೌಂಟ್ ವಿವರಗಳನ್ನು ತೆರಿಗೆ ಸಲ್ಲಿಸುವ ಸಮದರ್ಭದಲ್ಲಿ ತಪ್ಪಾಗಿ ನಮೂದಿಸಿದ್ದಲ್ಲಿ, ಈ ನಿರ್ದಿಷ್ಟ ವೆಬ್’ಸೈಟ್’ಗೆ ಭೇಟಿ ನೀಡುವ ಮೂಲಕ ನೈಜ ವಿವರಗಳನ್ನು ಮತ್ತೆ ಸಲ್ಲಿಸಬಹುದು.

click me!