ಪೈ ಇಂಟರ್‌ನ್ಯಾಷನಲ್ ಪರಿಚಯಿಸಿದ ಹೆನ್ರಿ ಸ್ಮಾರ್ಟ್ ಟಿವಿ: ಏನಿದರ ವಿಶೇಷತೆ?

By Girish GoudarFirst Published Aug 5, 2022, 11:20 PM IST
Highlights

ಗುಣಮಟ್ಟದ ವಸ್ತು ಹಾಗೂ ಉತ್ತಮ ಸೇವೆ ನೀಡುವ ಮೂಲಕ ಗ್ರಾಹಕರ ಮನಸ್ಸು ಗೆದ್ದ ಪೈ ಇಂಟರ್ ನ್ಯಾಶನಲ್‌

ವರದಿ: ವಿಕ್ರಮ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು 

ಬೆಂಗಳೂರು(ಆ.05):  ಪೈ ಇಂಟರ್ ನ್ಯಾಶನಲ್ ಎಲೆಕ್ಟ್ರಾನಿಕ್ ಲಿಮಿಟೆಡ್ ವತಿಯಿಂದ ಇಂದು(ಶುಕ್ರವಾರ) ಇಂದಿರಾ ನಗರದ ಪೈ ಮಳಿಗೆಯಲ್ಲಿ ಹೆನ್ರಿ ಸ್ಮಾರ್ಟ್ 4ಕೆ ಎಚ್ಡಿ, ಎಲ್ಇಡಿ ಟಿವಿ ಲೋಕಾರ್ಪಣೆ ಮಾಡಲಾಯಿತು. ಹೊಸ ಹೆನ್ರಿ ಟಿವಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಪೈ ಇಂಟರ್ ನ್ಯಾಶನಲ್‌ ಬ್ಯುಸಿನೆಸ್ ಹೆಡ್, ರಾಹುಲ್ ಪೈ ಮಾತನಾಡಿ, ಪೈ ಇಂಟರ್ ನ್ಯಾಶನಲ್ ಪ್ರೆವೇಟ್ ಲಿಮಿಟೆಡ್ ಗ್ರಾಹಕರ ಮನೆ-ಮನದಲ್ಲಿ ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದೆ. ಗುಣಮಟ್ಟದ ವಸ್ತು ಹಾಗೂ ಉತ್ತಮ ಸೇವೆಯನ್ನು ನೀಡುವ ಮೂಲಕ ಗ್ರಾಹಕರ ಮನಸ್ಸು ಗೆದ್ದಿದೆ. ಬೃಹತ್ ಬ್ರಾಂಡೆಡ್ ಸಂಸ್ಥೆಗಳೊಂದಿಗೆ ಕೈ ಜೋಡಿಸಿದೆ. ಇದರ ಭಾಗವಾಗಿ ಮೊದಲ ಬಾರಿ ಮೇಡ್‌ ಇನ್‌ ಇಂಡಿಯಾ ಪ್ಲಾಟ್‌ಫಾರಂನಡಿಯಲ್ಲಿ ಹೆನ್ರಿ ಟಿವಿಯನ್ನು ಲೋಕಾರ್ಪಣೆಗೊಳಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮಧ್ಯಮ ವರ್ಗದ ಕುಟುಂಬಗಳಿಗೂ ಸಹ ಕಡಿಮೆ ಬೆಲೆಯಲ್ಲಿ ಎಲ್ಲ  ವಿಶೇಷ ಆಯ್ಕೆಗಳಿರುವ ಹೆನ್ರಿ ಟಿವಿಯನ್ನು ಸಂಸ್ಥೆಯ ಮೂಲಕ ಬಿಡಗುಡೆಗೊಳಿಸುತ್ತಿರುವ ಹೆಮ್ಮಯ ಸಂಗತಿ. ರಾಜ್ಯದ 221 ಪೈ ಮಳಿಗೆಗಳಲ್ಲಿ ಹೆನ್ರಿ ಟಿವಿ ಲಭ್ಯವಿದೆ. ಖರಿದೀಸಲು ಅನುಕೂಲವಾಗುವಂತೆ ಇಎಂಐ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸ್ವಾತಂತ್ರೊತ್ಸವದ ಅಂಗವಾಗಿ ಆ.16ರ ವರೆಗೆ  32 ಇಂಚಿನ ಟಿವಿ 11990 ರೂ., 43 ಇಂಚಿನ ಟಿವಿಗೆ 29990 ರೂ., 55 ಇಂಚಿನ ಟಿವಿಗೆ 37990ರೂ. ವಿಶೇಷ ರಿಯಾಯಿತಿ ಬೆಲೆಯಲ್ಲಿ ಗ್ರಾಹಕರಿಗೆ ಸಿಗಲಿದೆ ಎಂದು ಮಾಹಿತಿ ನೀಡಿದರು.

ಅಡುಗೆ ಗ್ಯಾಸ್‌ ಬೆಲೆ ಮತ್ತೆ ಏರಿಕೆ: ಯೂನಿಟ್‌ಗೆ ರೂ. 2.63 ರಷ್ಟು ಹೆಚ್ಚಳ ಕಂಡ ನೈಸರ್ಗಿಕ ಅನಿಲ

ಹೆನ್ರಿ ಟಿವಿಯ ವಿಶೇಷತೆಗಳೇನು?

ಹೆನ್ರಿ ಸ್ಮಾರ್ಟ್ 4ಕೆ ಅಲ್ಟ್ರಾ ಎಚ್ಡಿ, ಎಲ್‌ಇಡಿ ವೈಶಿಷ್ಟ್ಯವನ್ನು ಹೊಂದಿದೆ. ವೆಬ್ ಓಎಸ್‌ನೊಂದಿಗೆ ಸಂಪರ್ಕ ಕಲ್ಪಿಸಲಿದ್ದು, ಪಾಯಿಂಟ್ ಕ್ಲಿಕ್ ಸ್ಕ್ರಾಲ್ನೊಂದಿಗೆ ಮ್ಯಾಜಿಕ್ ಮೋಶನ್ ರಿಮೋಟ್ ಲಭ್ಯವಿದೆ. ಧ್ವನಿಯ ಮೂಲಕ ಕಾರ್ಯಾಚರಿಸಲು ಅನುಕೂಲವಾಗುವಂತೆ ಅಲೆಕ್ಸಾ ಆಯ್ಕೆ ರಿಮೋಟ್ನಲ್ಲಿ ನೀಡಲಾಗಿದೆ. ಇದು ಡಾಲ್ಬಿ ಆಡಿಯೋ ಸೌಂಡ್ ಸಿಸ್ಟಮ್ನೊಂದಿಗೆ ಸಂಯೋಜಿಸಿದ್ದು, ಇದು ವಿಶೇಷ ಆಡಿಯೋ ಅನುಭವವನ್ನು ನೀಡಲಿದೆ. ಜತೆಗೆ ಬ್ಲೂಟೂತ್ ಮೂಲಕ ಮೊಬೈಲ್ ಗೆ ಕನೆಕ್ಟ್ ಮಾಡಲಿ 2ವೇ ಬ್ಲೂಟೂತ್ ಆಯ್ಕೆ ಲಭ್ಯವಿದೆ.

ಆನ್ಲೈನ್ ಶಾಪಿಂಗ್‌ಗೆ ಅವಕಾಶ:

ಪೈ ಇಂಟರ್ ನ್ಯಾಶನಲ್ ಪ್ರೆ ಲಿಮಿಟೆಡ್ 2 2ವರ್ಷದ ಹಿಂದೆ ಸ್ಥಾಪನೆಯಾದರೂ, ಪ್ರಸ್ತುತ ಆಧುನಿಕ ಜಗತ್ತಿಗೆ ಸವಾಲು ನೀಡುತ್ತಿದೆ. ಕೋವಿಡ್ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ಅನುಕೂಲವಾಗುವಂತೆ ಆನ್ಲೈನ್ ಶಾಪಿಂಗ್ ವ್ಯವಸ್ಥೆಯನ್ನು ಪ್ರಾರಂಭಿಸಿತ್ತು. ಜತೆಗೆ ಆನ್ಲೈನ್ ಮೂಲಕ ಖರೀದಿಗೂ ಅವಕಾಶ ಕಲ್ಪಿಸಿದ್ದು, ವಸ್ತುಗಳನ್ನು ಖರೀದಿಸಿದ 4ರಿಂದ 6 ಗಂಟೆಯೊಳಗೆ ನಗರದೊಳಗಿನ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದ್ದು, ಈ ಸಮಯವನ್ನು 2 ಗಂಟೆಗೆ ಇಳಿಕೆ ಮಾಡುವ ಗುರಿಯನ್ನು ಹೊಂದಿದೆ. ಜತೆಗೆ ಪೈ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಗ್ರಾಹಕರಿಗೆ ವಿಶೇಷ ದಿನದಂದು, ಐಪಿಎಲ್ ವೇಳೆ ಪ್ರಶ್ನೆಗಳನ್ನು ಕೇಳವು ಮೂಲಕ ಗ್ರಾಹರಿಗಾಗಿ ವಿಶೇಷ ಸ್ಪರ್ಧೆಯನ್ನು ಹಮ್ಮಿಕೊಳ್ಳುವುದ ಜತೆಗೆ ವಿಜೇತರಿಗೆ ಬಹುಮಾನವನ್ನು ಸಹ ವಿತರಿಸುತ್ತಿದೆ. 18ವರ್ಷ ಮೇಲ್ಪಟ್ಟ 3.5 ಮಿಲಿಯನ್ ಗ್ರಾಹಕರಿದ್ದು ಸಾಮಾಜಿಕ ಜಾಲತಾಣದಲ್ಲಿ 1.50 ಲಕ್ಷ ಜನರು ಪೈ ಗ್ರೂಪ್‌ನ ಫಾಲೋ ಮಾಡುತ್ತಿದ್ದಾರೆ.

ಫೈನಾನ್ಸಿಯಲ್‌ ಫ್ರೀಡಂ ಆ್ಯಪ್‌ ಕಚೇರಿ ಉದ್ಘಾಟಿಸಿದ ಆರಗ ಜ್ಞಾನೇಂದ್ರ, 900 ಕೋರ್ಸ್‌ಗಳು ಲಭ್ಯ

ಗುಣಮಟ್ಟದ ಸೇವೆಗೆ ಹೆಸರು: 

ಪೈ ಇಂಟರ್ ನ್ಯಾಶನಲ್ ಪ್ರೆವೇಟ್ ಲಿಮಿಟೆಡ್ ಸಾವಿರಾರು ಗ್ರಾಹಕರ ಮನೆ-ಮನದಲ್ಲಿ ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದೆ. ಗುಣಮಟ್ಟದ ಇಲೆಕ್ಟಾನಿಕ್ ವಸ್ತು ಹಾಗೂ ಪೀಠೋಪಕರಣಗಳನ್ನು ನೀಡುವುದರ ಜತಗೆ ಉತ್ತಮ ಸೇವೆಯನ್ನು ನೀಡುವ ಮೂಲಕ ಸಾವಿರಾರು ಗ್ರಾಹಕರ ಮನಸ್ಸು ಗೆದಿದ್ದಾರೆ. ಬೃಹತ್ ಬ್ರಾಂಡೆಡ್ ಸಂಸ್ಥೆಗಳೊಂದಿಗೆ ಕೈ ಜೋಡಿಸುವ ಮೂಲಕ ಜನರಿಗೆ ಅಗತ್ಯ ಬೇಡಿಕೆಗಳನ್ನು ಈಡೇರಿಸುತ್ತಿದೆ.

ಗ್ರಾಹಕರಿಗಾಗಿ 24X7 ಸೇವೆ:

ಪೈ ಇಂಟರ್ ನ್ಯಾಶನಲ್ ಪ್ರೆ ಲಿಮಿಟೆಡ್ ಪಾರದರ್ಶಕತೆ ಹಾಗೂ ಪ್ರಮಾಣಿಕತೆ, ನಂಬಿಕೆ ಮೇಲೆ ಕಳೆದ 22 ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಗ್ರಾಹಕರಿಗೆ ಸೇವೆ ನೀಡುವಲ್ಲಿ  24X7 ಸೇವೆಗಾಗಿ ಸಿಬ್ಬಂದಿಗಳು ತೊಡಗಿಸಿಕೊಂಡಿದ್ದಾರೆ. ಖರೀದಿ, ಇತರೆ ಸರ್ವೀಸ್‌ಗಳನ್ನು ನೀಡುವ ಪ್ರತಿಯೊಂದು ಹಂತದಲ್ಲಿ  ಗ್ರಾಹಕರ ತುರ್ತು ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಇದರಿಂದಾಗಿ ಜನರು ವಸ್ತುಗಳ ಖರೀದಿಗೆ ಪೈ ಇಂಟರ್ ನ್ಯಾಶನಲ್‌ನತ್ತ ಅರಸಿ ಬರುತ್ತಿದ್ದಾರೆ.
 

click me!