ನಿಮ್ಮ ಬಳಿ ಈ ಮಾತ್ರೆಗಳಿವೆಯೇ?: ಶೀಘ್ರದಲ್ಲೇ ಅಕ್ರಮವಾಗಲಿವೆ!

By Web DeskFirst Published Aug 7, 2018, 12:28 PM IST
Highlights

300ಕ್ಕೂ ಅಧಿಕ ಎಫ್‌ಡಿಸಿ ಔಷಧ ನಿಷೇಧ! ಸಾರಿಡಾನ್‌, ಡಿ ಕೋಲ್ಡ್‌ ಟೋಟಲ್‌, ಫಿನ್ಸಿಡಲ್‌! ಔಷಧಗಳ ತಾಂತ್ರಿಕ ಸಲಹಾ ಸಮಿತಿ ಶಿಫಾರಸು! ಶಿಫಾರಸು ಅಂಗೀಕರಿಸಿದ ಆರೋಗ್ಯ ಇಲಾಖೆ! ಸುಪ್ರೀಂ ಕೋರ್ಟ್‌ ಸೂಚನೆಗೆ ಡಿಟಿಎಬಿ ಅಸ್ತು
 

ನವದೆಹಲಿ(ಆ.7): ಕೆಮ್ಮಿನ ಔಷಧಿ, ನೋವು ನಿವಾರಕ ಮಾತ್ರೆ, ಜ್ವರ ಮತ್ತಿತರ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ವಿವಿಧ ಔಷಧಿಗಳನ್ನು ಕೇಂದ್ರ ಸರ್ಕಾರ ನಿಷೇಧಗೊಳಿಸಲಿದೆ.

 ಸಾರಿಡಾನ್‌, ಡಿ ಕೋಲ್ಡ್‌ ಟೋಟಲ್‌, ಫಿನ್ಸಿಡಲ್‌ ಸೇರಿದಂತೆ ಸುಮಾರು 300ಕ್ಕೂ ಅಧಿಕ ಎಫ್‌ಡಿಸಿ ಔಷಧಗಳ ಮೇಲೆ ಕೇಂದ್ರ ಸರ್ಕಾರ ಸದ್ಯದಲ್ಲಿಯೇ ನಿಷೇಧ ಹೇರಲಿದೆ ಎನ್ನಲಾಗಿದೆ. 

ಎಫ್‌ಡಿಸಿ ಔಷಧಗಳ ನಿಷೇಧಕ್ಕೆ ಭಾರತದ ಔಷಧಗಳ ತಾಂತ್ರಿಕ ಸಲಹಾ ಸಮಿತಿಯ(ಡಿಟಿಎಬಿ) ಉಪ ಸಮಿತಿಯ ಶಿಫಾರಸು ಮಾಡಿತ್ತು. ಈ ಶಿಫಾರಸ್ಸನ್ನು ಆರೋಗ್ಯ ಸಚಿವಾಲಯ ಅಂಗೀಕರಿಸಿದ್ದು, ಒಟ್ಟು  343 ಔಷಧಗಳನ್ನು ಸದ್ಯದಲ್ಲಿಯೇ ನಿಷೇಧ ಮಾಡಲಿದೆ. 

ನಿಷೇಧದ ಕ್ರಮದಿಂದ ಅಬಾಟ್‌ ಸೇರಿದಂತೆ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಪಿರಮಲ್‌, ಸಿಪ್ಲಾ ಮತ್ತು ಲುಪಿನ್‌ನಂಥ ದೇಶೀಯ ಕಂಪನಿಗಳ ಮೇಲೂ ಪರಿಣಾಮ ಉಂಟಾಗಲಿದೆ. ಇದಕ್ಕೂ ಮೊದಲು ಎಫ್‌ಡಿಸಿ ಔಷಧಗಳ ನಿಷೇಧವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಕಂಪನಿಗಳು ಹೋರಾಟ ನಡೆಸಿದ್ದವು. 

ಸಮಿತಿ ಉಲ್ಲೇಖಿಸಿರುವ ಔಷಧಗಳ ಮೇಲೆ ನಿಷೇಧದ ಕ್ರಮ ಜಾರಿಗೊಳಿಸುವಂತೆ ಆರೋಗ್ಯ ಸಚಿವಾಲಯಕ್ಕೆ ಶಿಫಾರಸು ಮಾಡುವಂತೆ ಸುಪ್ರೀಂ ಕೋರ್ಟ್‌ ಕಳೆದ ವರ್ಷ ಡಿಟಿಎಬಿಗೆ ಸೂಚಿಸಿತ್ತು.

click me!