
ನವದೆಹಲಿ: ಭಾರತ (India) ಜಾಕ್‌ಪಾಟ್ ಸನೀಹದಲ್ಲಿದ್ದು, ಇದು ಹಿಂದೂಸ್ತಾನಕ್ಕೆ ಸಿಕ್ಕಿದ್ದೆ ಆದ್ರೆ ದೇಶದ GDP ನೇರವಾಗಿ 5ಪಟ್ಟು ವೃದ್ಧಿಯಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಈ ಖಜಾನೆ ಭಾರತಕ್ಕೆ ಸಿಗುತ್ತಿದ್ದಂತೆ ದೇಶ 20 ಟ್ರಿಲಿಯನ್ ಡಾಲರ್‌ಗೆ (20 trillion dollars) ಏರಿಕೆಯಾಗಿ ಅಭಿವೃದ್ದಿ (GDP Growth) ರಾಷ್ಟ್ರವಾಗಲಿದೆ ಎಂದು ಹೇಳಲಾಗುತ್ತಿದೆ. ಭಾರತದ ಅಭಿವೃದ್ದಿಯನ್ನು ಅಮೆರಿಕ (America), ಚೀನಾ (China) ಮತ್ತು ರಷ್ಯಾ (Russia) ನೋಡುತ್ತಾ ನಿಂತುಕೊಳ್ಳಬೇಕಾಗುತ್ತದೆ. ವರದಿಗಳ ಪ್ರಕಾರ, ಅಂಡಮಾನ್ ಸಾಗರದಲ್ಲಿ (Andaman Sea) ಸುಮಾರು 2 ಲಕ್ಷ ಕೋಟಿ ಲೀಟರ್ ಕ್ರೂಡ್ ಆಯಿಲ್ ನಿಧಿ ಸಿಗುವ ಸಾಧ್ಯತೆಗಳಿವೆ. ಕೇಂದ್ರಿಯ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri Statement) ಅವರ ಭಾರತ, ಈ ಕಚ್ಛಾ ತೈಲದ (Crude Oil) ಅತ್ಯಂತ ಸಮೀಪದಲ್ಲಿದೆ.
ಭಾರತ ತೈಲ ನಿಕ್ಷೇಪ ಕಂಡು ಹಿಡಿಯುವ ಹಂತಕ್ಕೆ ಬಹಳ ಸಮೀಪದಲ್ಲಿದೆ ಎಂದು 9ನೇ OPEC ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಹರ್ದೀಪ್ ಸಿಂಗ್ ಪುರಿ ಹೇಳಿಕೆಯನ್ನು ನೀಡಿದ್ದಾರೆ. ಆಸ್ಟ್ರಿಯಾ ರಾಜಧಾನಿ ವಿಯೆನ್ನಾದಲ್ಲಿ 9ನೇ OPEC ಅಂತರಾಷ್ಟ್ರೀಯ ಸಮ್ಮೇಳನ ನಡೆದಿತ್ತು.
ತೈಲ ನಿಕ್ಷೇಪದ ಅನ್ವೇಷಣೆ
ಈ ಸಮ್ಮೇಳನದಲ್ಲಿ ಭಾರತ ಸೇರಿದಂತೆ OPEC ರಾಷ್ಟ್ರಗಳು ಭಾಗಿಯಾಗಿದ್ದವು. ಭಾರತ ಸುಮಾರು 2.5 ಲಕ್ಷ ಚದರ ಕಿಲೋಮೀಟರ್ ವಿಸ್ತೀರ್ಣಕ್ಕೆ ಸಮಾನವಾದ ತೈಲ ನಿಕ್ಷೇಪದ ಅನ್ವೇಷಣೆಯನ್ನು ನಡೆಸುತ್ತಿದೆ. ಈಗ ಕಚ್ಛಾ ತೈಲದ ನಿಧಿಯ ಸಮೀಪಕ್ಕೆ ಭಾರತ ತಲುಪಿದೆ ಎಂದು ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಅಂಡಮಾನ್ ಸಮುದ್ರದ ವ್ಯಾಪ್ತಿಯಲ್ಲಿ ಕಚ್ಚಾ ತೈಲ ಮತ್ತು ಅನಿಲದ ದೊಡ್ಡ ನಿಕ್ಷೇಪ ಕಂಡು ಬಂದಿದೆ. ಈ ನಿಕ್ಷೇಪದಿಂದ ತೈಲವನ್ನು ಹೊರ ತೆಗೆಯುವಲ್ಲಿ ನಿರತವಾಗಿದೆ. ಒಂದು ವೇಳೆ ಇಲ್ಲಿ ಅಂದಾಜಿನಂತೆ ತೈಲ ದೊರಕಿದ್ರೆ ಇಂಧನ ಬಳಕೆಯಲ್ಲಿ ಭಾರತ ಆತ್ಮನಿರ್ಭರವಾಗಲಿದೆ ಎಂದು ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಭಾರತ ಎಲ್ಲಾ ಮಾದರಿಯ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ. ಭಾರತ ಇಂಧನ ಆಮದು ಮಾಡಿಕೊಳ್ಳುವ ಮೂರನೇ ಅತಿದೊಡ್ಡ ರಾಷ್ಟ್ರವಾಗಿದೆ.
ಕಚ್ಚಾ ತೈಲ ತೆಗೆಯುವ ಪ್ರಯತ್ನ
ಅಂಡಮಾನ್‌ನಲ್ಲಿ 2.5 ಲಕ್ಷ ಚದರ ಕಿಲೋಮೀಟರ್ ಪ್ರದೇಶದಲ್ಲಿ ಕಚ್ಚಾ ತೈಲ ತೆಗೆಯುವ ಪ್ರಯತ್ನಗಳನ್ನು ಅತ್ಯಂತ ವೇಗದಿಂದ ನಡೆಯುತ್ತಿದೆ. ಈ ಖಜಾನೆಯಿಂದ ಭಾರತದ ಆಮದು ಪ್ರಮಾಣ ಹಂತ ಹಂತವಾಗಿ ಇಳಿಕೆಯಾಗಿ, ಸ್ವಾವಲಂಬಿಯಾಗಲಿದೆ ಎಂದು ಹರ್ದೀಪ್ ಸಿಂಗ್ ಪುರಿ ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ: ಚೀನಾ ಮುಂದೆ ಮಂಡಿಯೂರಿತಾ ಅಮೆರಿಕ? 14 ಸೊನ್ನೆ ಸುತ್ತಿದ ದೊಡ್ಡಣ್ಣ ಡೊನಾಲ್ಡ್ ಟ್ರಂಪ್!
1.6 ಬಿಲಿಯನ್ ಬ್ಯಾರೆಲ್ ತೈಲ ಮತ್ತು ಅನಿಲ ನಿಕ್ಷೇಪ
ಗಯಾನ ವಿಸ್ತೀರ್ಣಕ್ಕೆ ಸಮಾನವಾದ ಕಚ್ಚಾ ತೈಲ ನಿಕ್ಷೇಪಗಳನ್ನು ಹೊಂದುವ ದಿನ ದೂರವಿಲ್ಲ. ಗಯಾನಾ 11.6 ಬಿಲಿಯನ್ ಬ್ಯಾರೆಲ್ ತೈಲ ಮತ್ತು ಅನಿಲ ನಿಕ್ಷೇಪಗಳನ್ನು ಹೊಂದಿದೆ. ಅಂಡಮಾನ್ ನಿಕ್ಷೇಪಗಳು ಭಾರತದಾದ್ರೆ ಗಯಾನಕ್ಕೆ ಸಮಾನವಾಗುತ್ತದೆ. ಇದರಿಂದ ತೈಲದ ಮೇಲಿನ ಅವಲಂಬನೆ ಕಡಿಮೆಯಾಗಲಿದೆ ಎಂದು ಹರ್ದೀಪ್ ಸಿಂಗ್ ಪುರಿ ಹೇಳುತ್ತಾರೆ. ಅಂಡಮಾನ್‌ನಲ್ಲಿ ಕಚ್ಚಾ ತೈಲ ನಿಕ್ಷೇಪಗಳ ಆವಿಷ್ಕಾರವು ಪೂರ್ಣಗೊಂಡರೆ ಭಾರತದ ಆರ್ಥಿಕತೆಯಲ್ಲಿ ಅದ್ಭುತ ಬೆಳವಣಿಗೆ ಕಂಡುಬರುತ್ತದೆ.
ಭಾರತದ 20 ಟ್ರಿಲಿಯನ್ ಡಾಲರ್
ಈ ಒಂದು ನಿಕ್ಷೇಪದಿಂದಾಗಿ ಭಾರತದ ಆರ್ಥಿಕತೆಯು 3.7 ಟ್ರಿಲಿಯನ್ ಡಾಲರ್‌ಗಳ ಆರ್ಥಿಕತೆಯಿಂದ 20 ಟ್ರಿಲಿಯನ್ ಡಾಲರ್‌ಗಳಿಗೆ ನೇರವಾಗಿ ಬೆಳೆಯುತ್ತದೆ. ತೈಲಕ್ಕಾಗಿ ಭಾರತದ ರಷ್ಯಾದ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಆರ್ಥಿಕತೆಯು ಉತ್ಕರ್ಷಗೊಂಡ ತಕ್ಷಣ, ಅಮೆರಿಕ ಮತ್ತು ಚೀನಾದಂತಹ ದೇಶಗಳ ಬೆದರಿಕೆ ಕೊನೆಗೊಳ್ಳುತ್ತದೆ.
ಇದನ್ನೂ ಓದಿ: ಒಂದ್ಕಡೆ ಡೊನಾಲ್ಡ್ ಟ್ರಂಪ್ ಸುಂಕ, ಮತ್ತೊಂದ್ಕಡೆ ಚೀನಾದಿಂದ ಚಿನ್ನ ಖರೀದಿ: ಬಂಗಾರ ಬೆಲೆ ಇಳಿಕೆಯಾಗುತ್ತಾ?
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.