ತರಬೇತಿ ವಿಮಾನಕ್ಕೆ ಎಂಜಿನ್‌ ಪೂರೈಕೆಗಾಗಿ ಹನಿವೆಲ್‌ನೊಂದಿಗೆ HAL 800 ಕೋಟಿ ಒಪ್ಪಂದ

By Suvarna News  |  First Published Jul 29, 2022, 6:15 PM IST

ತರಬೇತಿ ವಿಮಾನಕ್ಕೆ ಎಂಜಿನ್‌ ಪೂರೈಕೆಗಾಗಿ ಹನಿವೆಲ್‌ನೊಂದಿಗೆ ಎಚ್‌ಎಎಲ್‌   800 ಕೋಟಿ ಒಡಂಬಡಿಕೆ ಮಾಡಿಕೊಂಡಿದೆ. ಎಂಜಿನ್‌ ಉತ್ಪಾದನೆ, ರಿಪೇರಿ, ಪರೀಕ್ಷೆ ಸಹಭಾಗಿತ್ವ ಸೇರಿದೆ.


ಬೆಂಗಳೂರು (ಜು.29): ಹಿಂದೂಸ್ತಾನ್‌ ಏರೋನಾಟಿಕಲ್‌ ಲಿಮಿಟೆಡ್‌ನ (ಎಚ್‌ಎಎಲ್‌) ತರಬೇತಿ ವಿಮಾನ ‘ಹಿಂದೂಸ್ತಾನ್‌ ಟ್ರೈನರ್‌ ಏರ್‌ಕ್ರಾಫ್‌್ಟ’ಗೆ (ಎಚ್‌ಟಿಟಿ-40) 88 ಎಂಜಿನ್‌ ಪೂರೈಸಿ, ನಿರ್ವಹಿಸುವ ಸಂಬಂಧ .800 ಕೋಟಿ (100 ಮಿಲಿಯನ್‌ ಅಮೆರಿಕನ್‌ ಡಾಲರ್‌) ಒಪ್ಪಂದಕ್ಕೆ ಎಚ್‌ಎಎಲ್‌ ಮತ್ತು ‘ಹನಿವೆಲ್‌’ ಸಂಸ್ಥೆ ಸಹಿ ಹಾಕಿದೆ. ಈ ಸಂದರ್ಭದಲ್ಲಿ ಮಾತನಾಡಿದ ಎಚ್‌ಎಎಲ್‌ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಆರ್‌. ಮಾಧವನ್‌, ಈ ಒಪ್ಪಂದದಡಿ ಟಿಪಿಇ 331-12ಬಿ ಇಂಜಿನ್‌, ಮತ್ತದರ ಉಪಕರಣಗಳನ್ನು ಹನಿವೆಲ್‌ ಸಂಸ್ಥೆ ಎಚ್‌ಎಎಲ್‌ಗೆ ನೀಡಲಿದೆ. ಈ ಎಂಜಿನ್‌ಗಳನ್ನು ಭಾರತೀಯ ವಾಯುಪಡೆಯ ಪ್ರಾಥಮಿಕ ತರಬೇತಿ ವಿಮಾನ ಎಚ್‌ಟಿಟಿ-40ಗೆ ಬಳಸಿಕೊಳ್ಳುವ ಚಿಂತನೆ ಇದೆ. ಭಾರತೀಯ ವಾಯುಪಡೆ ಎಚ್‌ಎಎಲ್‌ ನಿಂದ 70 ವಿಮಾನಗಳನ್ನು ಕೊಳ್ಳುವ ನಿರೀಕ್ಷೆಯಿದ್ದು ಪ್ರಸ್ತಾವನೆಯು ಅನುಮೋದನೆಯ ಹಂತದಲ್ಲಿದೆ ಎಂದರು. ‘ಹನಿವೆಲ್‌’ನ ರಕ್ಷಣೆ ಮತ್ತು ಬಾಹ್ಯಾಕಾಶ ವಿಭಾಗದ ಹಿರಿಯ ನಿರ್ದೇಶಕ ಎರಿಕ್‌ ವಾಲ್ಟ​ರ್‍ಸ್ ಮಾತನಾಡಿ, ಟಿಪಿಇ 331-12ಬಿ ಇಂಜಿನ್‌ ಜಗತ್ತಿನ ಎಲ್ಲ ಭಾಗದಲ್ಲಿಯೂ ತನ್ನ ಕ್ಷಮತೆ ಪ್ರದರ್ಶಿಸಿದೆ. ನಿಗದಿತ ಅವಧಿಯೊಳಗೆ ನಾವು ಇಂಜಿನ್‌ ಮತ್ತಿತರ ಉಪಕರಣಗಳನ್ನು ಒದಗಿಸಲು ಬದ್ಧರಿದ್ದೇವೆ. ಮುಂದಿನ ದಿನದಲ್ಲಿ ಎಚ್‌ಟಿಟಿ-40 ಅನ್ನು ರಫ್ತು ಮಾಡಲು ಹನಿವೆಲ್‌ ಬೆಂಬಲ ನೀಡಲಿದೆ ಎಂದು ಹೇಳಿದ್ದಾರೆ.

ಎಚ್‌ಎಎಲ್‌ ಮತ್ತು ಹನಿವೆಲ್‌ 1 ಮೆಗಾವಾಟ್‌ ಟರ್ಬೋಜನರೇಟರ್‌ಗಳು, ಡಾರ್ನಿಯರ್‌ಗಾಗಿ ಟಿಪಿಇ 331-10 ಜಿಪಿ / 12ಜೆಆರ್‌ ಇಂಜಿನ್‌ ಉತ್ಪಾದನೆ, ರಿಪೇರಿ ಮತ್ತು ಪರೀಕ್ಷೆಯ ಸಹಭಾಗಿತ್ವದ ಬಗ್ಗೆ ಮಾತುಕತೆ ನಡೆಸುತ್ತಿವೆ.

Tap to resize

Latest Videos

ತರಬೇತಿ ವಿಮಾನ ಹಿಂದೂಸ್ತಾನ್‌ ಟ್ರೈನರ್‌ ಏರ್‌ಕ್ರಾಫ್‌್ಟ (ಎಚ್‌ಟಿಟಿ-40)ಗೆ 88 ಇಂಜಿನ್‌ ಪೂರೈಸಿ, ನಿರ್ವಹಿಸುವ 100 ಮಿಲಿಯನ್‌ ಅಮೆರಿಕನ್‌ ಡಾಲರ್‌ ಒಪ್ಪಂದಕ್ಕೆ ಹಿಂದೂಸ್ತಾನ್‌ ಏರೋನಾಟಿಕಲ್‌ ಲಿಮಿಟೆಡ್‌ (ಎಚ್‌ಎಎಲ್‌) ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಆರ್‌. ಮಾಧವನ್‌ ಮತ್ತು ಹನಿವೆಲ್‌ನ ರಕ್ಷಣೆ ಮತ್ತು ಬಾಹ್ಯಾಕಾಶ ವಿಭಾಗದ ಹಿರಿಯ ನಿರ್ದೇಶಕ ಎರಿಕ್‌ ವಾಲ್ಟ​ರ್‍ಸ್ ಸಹಿ ಹಾಕಿದರು.

ಶೇ.50ರಷ್ಟುಮಾತ್ರ ವಿಮಾನ ಹಾರಿಸಿ: ಸ್ಪೈಸ್‌ಜೆಟ್‌ಗೆ ಸರ್ಕಾರ ಆದೇಶ
ನವದೆಹಲಿ: ಇತ್ತೀಚೆಗೆ ತಾಂತ್ರಿಕ ದೋಷಗಳ ಸರಣಿಯನ್ನೇ ಸ್ಪೈಸ್‌ಜೆಟ್‌ ವಿಮಾನಗಳು ಅನುಭವಿಸಿದ ಹಿನ್ನೆಲೆಯಲ್ಲಿ, ಇನ್ನು ಮುಂದಿನ 2 ತಿಂಗಳು ಒಟ್ಟಾರೆ ವಿಮಾನ ಸಂಚಾರಕ್ಕೆ ಪಡೆದಿರುವ ಅವಕಾಶಗಳ ಪೈಕಿ ಶೇ.50ರಷ್ಟನ್ನು ಮಾತ್ರ ಹಾರಿಸುವಂತೆ ಸ್ಪೈಸ್‌ಜೆಟ್‌ ಕಂಪನಿಗೆ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಆದೇಶಿಸಿದೆ.

ಹಣದುಬ್ಬರ, ಆರ್ಥಿಕ ಹಿಂಜರಿತ ಭೀತಿಗೆ ನಲುಗಿದ ಮೆಟಾ: ಆದಾಯ ಕುಸಿತ, ಷೇರುಗಳು ಅಲ್ಲೋಲ

ಸ್ಪೈಸ್‌ಜೆಟ್‌ನ 8 ವಿಮಾನಗಳು ತಾಂತ್ರಿಕ ದೋಷದಿಂದ ಜೂ.19ರ ನಂತರ ಒಂದಾದ ಮೇಲೊಂದರಂತೆ ತುರ್ತು ಭೂಸ್ಪರ್ಶ ಮಾಡಿದ್ದವು. ಹೀಗಾಗಿ ವಿಮಾನಗಳ ತಾಂತ್ರಿಕ ಕ್ಷಮತೆ ಬಗ್ಗೆ ಶಂಕೆ ಮೂಡಿದ್ದವು. ಆದ್ದರಿಂದ ಕಂಪನಿಗೆ ಜು.6 ರಂದು ಶೋಕಾಸ್‌ ನೋಟಿಸ್‌ ನೀಡಿದ್ದ ಡಿಜಿಸಿಎ, ತನಿಖೆಗೂ ಆದೇಶಿಸಿತ್ತು.

ಪ್ರವಾಸೋದ್ಯಮ ಅಭಿವೃದ್ಧಿಗೆ ಹೂಡಿಕೆದಾರರ ಸಮಾವೇಶ: ಸಚಿವ ಅ​ಶ್ವತ್ಥ ನಾರಾ​ಯಣ

ಈ ಬಗ್ಗೆ ಬುಧವಾರ ಹೇಳಿಕೆ ನೀಡಿರುವ ಡಿಜಿಸಿಎ, ‘ನಾವು ಸ್ಪೈಸ್‌ಜೆಟ್‌ ವಿಮಾನಗಳ ಸ್ಥಳ ಪರಿಶೀಲನೆ ನಡೆಸಿದ್ದೇವೆ. ನೋಟಿಸ್‌ಗೆ ಕಂಪನಿ ನೀಡಿದ್ದ ಉತ್ತರವನ್ನೂ ಗಮನಿಸಿದ್ದೇವೆ. ಇದನ್ನು ಆಧರಿಸಿ ಮುಂದಿನ 8 ವಾರ ಕಾಲ ಸ್ಪೈಸ್‌ಜೆಟ್‌, ತನ್ನ ಒಟ್ಟು ಸಾಮರ್ಥ್ಯದ ಪೈಕಿ ಶೇ.50ರಷ್ಟುವಿಮಾನಗಳನ್ನು ಮಾತ್ರ ಹಾರಾಟ ನಡೆಸಬೇಕು ಎಂದು ಸೂಚಿಸಿತ್ತೇವೆ’ ಎಂದು ತಿಳಿಸಿದೆ. ಇನ್ನು ಸರ್ಕಾರದ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಈ ಆದೇಶದ ಹೊರತಾಗಿಯೂ ಯಾವುದೇ ವಿಮಾನಗಳ ಸಂಚಾರ ರದ್ದಾಗುವುದಿಲ್ಲ ಎಂದು ಭರವಸೆ ನೀಡಿದೆ.

click me!