ಅನಂತ್ ಅಂಬಾನಿ ಮದುವೆಗೆ 100 ರೂ. ಮುಯ್ಯಿ ಕೊಟ್ಟ ಅಜ್ಜಿ; ಅಹಂಕಾರವಿಲ್ಲದೇ ಸ್ವೀಕರಿಸಿದ ಕೋಟ್ಯಾಧೀಶ್ವರ

Published : Mar 10, 2024, 08:52 PM IST
ಅನಂತ್ ಅಂಬಾನಿ ಮದುವೆಗೆ 100 ರೂ. ಮುಯ್ಯಿ ಕೊಟ್ಟ ಅಜ್ಜಿ; ಅಹಂಕಾರವಿಲ್ಲದೇ ಸ್ವೀಕರಿಸಿದ ಕೋಟ್ಯಾಧೀಶ್ವರ

ಸಾರಾಂಶ

ಭಾರತದ ಆಗರ್ಭ ಶ್ರೀಮಂತ ಅನಂತ್ ಅಂಬಾನಿ ಮದುವೆ ಕಾರ್ಯಕ್ರಮಕ್ಕೆ ಬಂದು 100 ರೂ. ಮುಯ್ಯಿ ಕೊಟ್ಟು ಆಶೀರ್ವಾದ ಮಾಡಿದ ಅಜ್ಜಿ. ಗರ್ವ ತೋರಿಸದೇ ಸರಳತೆ ಮೆರೆದ ಕೋಟ್ಯಾಧೀಶ್ವರ ಅಂಬಾನಿ.

ನವದೆಹಲಿ (ಮಾ.10): ನಮ್ಮ ದೇಶದಲ್ಲಿ ಕುಬೇರ, ಆಗರ್ಭ ಶ್ರೀಮಂತ, ಕೋಟ್ಯಾಧೀಶ್ವರ ಎಂದು ಕರೆಸಿಕೊಳ್ಳುವ ಅಂಬಾನಿ ಕುಡಿ ಅನಂತ್ ಅಂಬಾವಿ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಅಜ್ಜಿಯೊಬ್ಬರು ಬಂದು ರಾಧಿಕಾಗೆ ಹೂಗುಚ್ಛ ನೀಡಿದರೆ, ಅನಂತ್‌ಗೆ 100 ರೂ. ಮುಯ್ಯಿ ನೀಡುತ್ತಾರೆ. ಆದರೆ, ಈ ಹಣವನ್ನು ಸ್ವಲ್ಪವೂ ಗರ್ವ ತೋರಿಸದೇ ಗೌರವವಾಗಿ ಸ್ವೀಕರಿಸಿದ ಅನಂತ್ ಅಂಬಾನಿ ನಡೆ ಹಾಗೂ ಅಜ್ಜಿಯ ಮದುವೆಗೆ ಉಡುಗೊರೆ ಕೊಡುವ ಸಂಪ್ರದಾಯ ನೋಡಿದ ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಹೌದು, ನಮ್ಮ ದೇಶದಲ್ಲಿ ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್ ಕಾರ್ಯಕ್ರಮವನ್ನು ಕುಬೇರರ ಕಾರ್ಯಕ್ರಮವೆಂದೇ ಹೇಳಬಹುದು. ಈ ಸಮಾರಂಭಕ್ಕೆ ದೇಶದ ಬಹುತೇಕ ಹಾಗೂ ಜಗತ್ತಿನ ಹಲವು ಸೆಲೆಬ್ರಿಟಿಗಳು ಮತ್ತು  ಶ್ರೀಮಂತರು ಬಂದು ಪಾಲ್ಗೊಂಡಿದ್ದಾರೆ. ಇನ್ನು ನಮ್ಮ ದೇಶದ ಎಲ್ಲ ಖ್ಯಾತ ಚಿತ್ರ ತಾರೆಯರು ಮತ್ತು ಕ್ರೀಡಾ ಪಟುಗಳು ಭಾಗವಹಿಸಿ ಕುಣಿದು ಕುಪ್ಪಳಿಸಿದ್ದಾರೆ. ಇನ್ನು ಸ್ವತಃ ಮುಖೇಶ್ ಅಂಬಾನಿ ಅವರು ಗುಜರಾತ್‌ನ ತಮ್ಮ ಗ್ರಾಮದ ಎಲ್ಲ ಜನಸಾಮಾನ್ಯರಿಗೂ ಆಹ್ವಾನವನ್ನೂ ಕೊಟ್ಟಿದ್ದಾರೆ. ಇನ್ನು ಮದುವೆ ಪೂರ್ವ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲ ಅತಿಥಿಗಳು ಕೂಡ ಅವರ ಸಾಮರ್ಥ್ಯಾನುಸಾರ ಉಡುಗೊರೆಯನ್ನು ನೀಡಿದ್ದಾರೆ.

ಅಕ್ಷಯ್ ಕುಮಾರ್‌ಗೆ ಚೀಟಿಂಗ್ ಮಾಡಿದ ಚೋಟಾ ಮಿಯಾನ್ ಟೈಗರ್ ಶ್ರಾಫ್!

ಇನ್ನು ಮದುವೆಗೆ ಬಂದಿದ್ದ ಅಜ್ಜಿಯೊಬ್ಬರು ವೇದಿಕೆಯ ಮೇಲೆ ಬಂದು ವಿವಾಹವಾಗುವ ಜೋಡಿಯಾದ ಅನಂತ್ ಅಂಬಾನಿ ಹಾಗೂ ರಾಧಿಕಾಗೆ ಆಶೀರ್ವಾದ ಮಾಡಿದ್ದಾರೆ. ಈ ವೇಳೆ ರಾಧಿಕಾ ಮರ್ಚೆಂಟ್‌ಗೆ ಹೂಗುಚ್ಛವನ್ನು ನೀಡಿ ಶುಭಾಶಯ ಕೋರಿದರೆ, ಪಕ್ಕದಲ್ಲಿಯೇ ನಿಂತಿದ್ದ ಕೋಟ್ಯಾಧೀಶ್ವರ ಅನಂತ್‌ಗೆ 100 ರೂ. ನೋಟನ್ನು ಮುಯ್ಯಿಯಾಗಿ ನೀಡಿ ತಲೆ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಿದ್ದಾರೆ. ಈ ವೇಳೆ ಅನಂತ್ ಒಂದಿನಿತೂ ತಾನು ಶ್ರೀಮಂತನೆಂಬ ಗರ್ವವನ್ನು ತೋರಿಸದೇ ನಗು-ನಗುತ್ತಲೇ ಗೌರವ ಪೂರ್ವಕವಾಗಿ ಮುಯ್ಯಿ ಹಣವನ್ನು ಪಡೆದಿದ್ದಾರೆ. ಇಲ್ಲಿ ಅನಂತ್ ಅಂಬಾನಿ ಕುಬೇರನಾಗಿದ್ದರೂ ಸರಳತೆ ತೋರಿದ್ದು ಹಾಗೂ ಅಜ್ಜಿ ಶ್ರೀಮಂತರ ಮದುವೆಗೆ ಬಂದಿದ್ದೇನೆ 100 ರೂ. ಉಡುಗೊರೆ ಕೊಟ್ಟರೆ ಪಡೆಯುತ್ತಾರೆ ಇಲ್ಲವೋ ಎಂಬ ಹಿಂಜರಿಕೆ ಇಲ್ಲದೇ ತಮ್ಮ ಸಾಮರ್ಥ್ಯದ ಅನುಸಾರ ಸಂಪ್ರದಾಯದಂತೆ ಮುಯ್ಯಿ ನೀಡಿದ್ದನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

5 ಕೋಟಿ ರೂ. ಮೌಲ್ಯದ ಕಾರ್ ಕೊಟ್ಟ ಶಾರುಖ್ ಖಾನ್:
ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರು ಅನಂತ್ ಅಂಬಾನಿಗಾಗಿ ವಿಶೇಷವಾಗಿ ತಯಾರಿಸಿದ ದುಬಾರಿ ಕಸ್ಟಮೈಸ್ ಮಾಡಿದ ವಾಚ್ ಮತ್ತು ರಾಧಿಕಾ ಮರ್ಚೆಂಟ್‌ಗೆ ವಜ್ರದ ಕಿವಿಯೋಲೆಗಳನ್ನು ಉಡುಗೊರೆಯಾಗಿ ನೀಡಿದರು. ಮತ್ತೊಂದೆಡೆ, ಶಾರುಖ್ ಖಾನ್ ನವ ದಂಪತಿಗೆ ಮರ್ಸಿಡಿಸ್ ಬೆಂಜ್ 300 ಎಸ್‌ಎಲ್‌ಆರ್ (Mercedes Benz 300 SLR) ಕಾರನ್ನು ಉಡುಗೊರೆಯಾಗಿ ನೀಡಿದರು. ಇದರ ಬೆಲೆ ಸುಮಾರು 5 ಕೋಟಿ ರೂ. ಆಗಿದೆ.

ಸೆಲೆಬ್ರೆಟಿಗಳಿಂದ ಐಷಾರಾಮಿ ಉಡುಗೊರೆ ಪಡೆದ ಅನಂತ್-ರಾಧಿಕಾ ಮರ್ಚೆಂಟ್‌, 5 ಕೋಟಿ ಮೌಲ್ಯದ ಗಿಫ್ಟ್ ಕೊಟ್ಟ ಶಾರುಖ್!

ಇನ್ನು ಐಷಾರಾಮಿ ಮನೆತನದ ಅಂಬಾನಿ ಕುಟುಂಬದ ಕುಡಿ ಅನಂತ್ ಅಂಬಾನಿ ಅತ್ಯಂತ ಆಕರ್ಷಕ ಉಡುಗೊರೆಗಳನ್ನು ಪಡೆದಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರಿಗೆ ಕಸ್ಟಮೈಸ್ ಮಾಡಿದ 1 ಕೋಟಿ ರೂ. ಮೌಲ್ಯದ ಡೈಮಂಡ್ ರೋಲೆಕ್ಸ್ ಕೈಗಡಿಯಾರಗಳನ್ನು ಉಡುಗೊರೆಯಾಗಿ ನೀಡಿದರು. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರು ರಾಧಿಕಾ ಮರ್ಚೆಂಟ್‌ಗೆ ಗುಸ್ಸಿ ಬ್ರಾಂಡ್‌ನಿಂದ ವಜ್ರದಿಂದ ಮಾಡಿದ ಸುಂದರವಾದ ಕ್ಲಚ್ ಮತ್ತು ಅನಂತ್ ಅಂಬಾನಿಗೆ ಏರ್ ಜೋರ್ಡಾನ್ ಶೂಗಳನ್ನು ಉಡುಗೊರೆಯಾಗಿ ನೀಡಿದರು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಮದುವೆ ವ್ಲಾಗ್ ಪೋಸ್ಟ್ ಮಾಡಿ ಕೋಟಿ ಬಾಚಿಕೊಂಡ ವ್ಲಾಗರ್