ಮಿಸ್​ ವರ್ಲ್ಡ್​ ವೇದಿಕೆಯಲ್ಲಿ ನೀತಾ ಅಂಬಾನಿಗೆ ವಿಶೇಷ ಮಾನವೀಯ ಪ್ರಶಸ್ತಿ: ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?

By Suvarna News  |  First Published Mar 10, 2024, 12:51 PM IST

ಮುಂಬೈನಲ್ಲಿ ನಡೆದ ಮಿಸ್​ ವರ್ಲ್ಡ್​ ವೇದಿಕೆಯಲ್ಲಿ ನೀತಾ ಅಂಬಾನಿ ಅವರಿಗೆ ವಿಶೇಷ ಮಾನವೀಯ ಪ್ರಶಸ್ತಿ: ಈ ಕುರಿತು ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?
 


ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಿನ್ನೆ (ಮಾರ್ಚ್​ 9) ನಡೆದ 71ನೇ ಮಿಸ್ ವರ್ಲ್ಡ್ ಫೈನಲ್ಸ್ ಸಂದರ್ಭದಲ್ಲಿ  ಮುಕೇಶ್​ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರು ಪ್ರತಿಷ್ಠಿತ ‘ಬ್ಯೂಟಿ ವಿತ್ ಎ ಪರ್ಪಸ್ ಹ್ಯುಮಾನಿಟೇರಿಯನ್ ಅವಾರ್ಡ್’ (‘Beauty With a Purpose Humanitarian Award’) ಪಡೆದರು.  ಈ ಕಾರ್ಯಕ್ರಮದಲ್ಲಿ ಜೆಕ್ ಗಣರಾಜ್ಯದ ಸುಂದರಿ ಕ್ರಿಸ್ಟಿನಾ ಪಿಸ್ಕೋವಾ ಅವರು ಮಿಸ್​ ವರ್ಲ್ಡ್​ ಪ್ರಶಸ್ತಿ ಪಡೆದುಕೊಂಡರೆ,  ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಮುಖೇಶ್ ಅಂಬಾನಿ ಅವರಿಗೆ ವಿಶ್ವ ಸುಂದರಿ ಪ್ರತಿಷ್ಠಾನದ 'ಮಾನವೀಯ ಪ್ರಶಸ್ತಿ' ನೀಡಿ ಗೌರವಿಸಿತು.  ಹೆಸರಾಂತ ಅಂತರರಾಷ್ಟ್ರೀಯ ಸ್ಪರ್ಧೆಯಿಂದ ನೀಡಲ್ಪಡುವ  ಅತ್ಯುನ್ನತ ಪ್ರಶಸ್ತಿ ಇದಾಗಿದೆ.  ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡುವಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಪ್ರಾಮುಖ್ಯತೆಯನ್ನು ಈ ಪ್ರಶಸ್ತಿ ತೋರಿಸುವುದಾಗಿ ಸಂಸ್ಥೆ ಹೇಳಿದೆ.  ವಿಶ್ವ ಸುಂದರಿ ಚೇರ್‌ಪರ್ಸನ್ ಜೂಲಿಯಾ ಮೊರ್ಲೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ನೀತಾ ಅಂಬಾನಿ ಭಾರತೀಯ ಉದ್ಯಮಿ, ಸಮಾಜ ಸೇವಕಿ ಮತ್ತು ಶಿಕ್ಷಣತಜ್ಞರಾಗಿದ್ದಾರೆ. ನೀತಾ ಅಂಬಾನಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವ ಸಂದರ್ಭದಲ್ಲಿ ಜೂಲಿಯಾ ಮೊರ್ಲಿ ಅವರು ವಿಶ್ವಕ್ಕೆ ನೀತಾ ಅಂಬಾನಿ ನೀಡಿರುವ ಸಾಧನೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.  ನೀತಾ ಅಂಬಾನಿ ಅವರು  ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಹೆಚ್ಚು ಗೌರವಾನ್ವಿತರಾಗಿದ್ದಾರೆ ಎಂದು ಅವರು ಹೇಳಿದರು. ಅಗತ್ಯವಿದ್ದಾಗ ಸಹಾಯ ಮಾಡಲು ಸದಾ ಸಿದ್ಧವಾಗಿರುವ ನೀತಾ ಅಂಬಾನಿಯವರ ಮನೋಭಾವವನ್ನು ಅವರು ಮುಕ್ತಕಂಠದಿಂದ ಹೊಗಳಿದರು.

Latest Videos

undefined

ಶ್ರೀರಸ್ತು-ಶುಭಮಸ್ತು ತುಳಸಿಗೆ ಮನಮೆಚ್ಚಿದ ನಾಯಕಿ ಅವಾರ್ಡ್‌: ಸುಧಾರಾಣಿ ಕುರಿತು ಇಂಟರೆಸ್ಟಿಂಗ್ ಮಾಹಿತಿ
 
ಈ ಪ್ರಶಸ್ತಿ ಕುರಿತು ಹೇಳುವುದಾದರೆ, ಇದು ಮಾನವೀಯ ಪ್ರಶಸ್ತಿಯಾಗಿದ್ದು,  ಪ್ರಪಂಚದಾದ್ಯಂತ ಮಾನವೀಯ ಕಾರ್ಯಗಳಿಗೆ ಕೊಡುಗೆ ನೀಡುವ ಜನರು ಮತ್ತು ಸಂಸ್ಥೆಗಳಿಗೆ ನೀಡಲಾಗುವ ಅತ್ಯುನ್ನತ ಗೌರವಗಳಲ್ಲಿ ಒಂದಾಗಿದೆ. ತಮ್ಮ ಸಮುದಾಯದ ಒಳಗೆ ಅಥವಾ ಹೊರಗಿನ ಇತರರ ಯೋಗಕ್ಷೇಮಕ್ಕೆ ಗಮನಾರ್ಹ ಕೊಡುಗೆ ನೀಡಿದ,  ಇದರೊಂದಿಗೆ ಮಾನವೀಯ ಸೇವೆ ಮಾಡುವ ವ್ಯಕ್ತಿಗಳಿಗೆ ಇದನ್ನು ನೀಡಲಾಗುತ್ತದೆ.  ಗೌರವವನ್ನು ಸ್ವೀಕರಿಸಿದ ನೀತಾ ಅಂಬಾನಿ ಅವರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು,  ಅವರು ಭಾರತೀಯ ಮೌಲ್ಯಗಳಲ್ಲಿ ಬೇರೂರಿರುವ ತಮ್ಮ ಮಾರ್ಗದರ್ಶಿ ತತ್ವಗಳನ್ನು ವಿವರಿಸಿದರು. ಸತ್ಯಂ, ಶಿವಂ, ಸುಂದರಂ ಎಂಬ ಭಾರತೀಯ ತತ್ವಗಳಿಂದ ತಾವು ಪ್ರೇರೇಪಿತರಾಗಿರುವ ಬಗ್ಗೆ ತಿಳಿಸಿದ್ದಾರೆ.  ಸತ್ಯಂ ಎಂದರೆ ಶುದ್ಧತೆ, ಪ್ರಾಮಾಣಿಕತೆ ಮತ್ತು ಸತ್ಯತೆಯೊಂದಿಗೆ ಸತ್ಯದ ಅನ್ವೇಷಣೆ. ಶಿವಂ ಎಂದರೆ ವ್ಯಕ್ತಿಯೊಳಗಿನ ದೈವತ್ವವನ್ನು ಪೋಷಿಸುವುದು ಮತ್ತು ಸುಂದರಂ ಎಂದರೆ ಸುತ್ತಮುತ್ತಲಿನ ಸೌಂದರ್ಯವನ್ನು ಆಚರಿಸುವುದು ಎಂದು ಹೇಳಿದರು.  

ಈ ಪ್ರಶಸ್ತಿ ಪಡೆದಿರುವ ಬಗ್ಗೆ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಅಭಿನಂದನೆ ಸಲ್ಲಿಸಿದ್ದಾರೆ. ನಾನು ನೀತಾ ಅಂಬಾನ ಅವರಿಂದ  ಸಾಕಷ್ಟು ಸ್ಫೂರ್ತಿ ಪಡೆಯುತ್ತೇನೆ ಎಂದು ಪ್ರಿಯಾಂಕಾ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ  ಪ್ರಿಯಾಂಕಾ ಚೋಪ್ರಾ ಜೋನಾಸ್ ಅವರ ವೀಡಿಯೊವನ್ನು ಪ್ಲೇ ಮಾಡಲಾಗಿದ್ದು, ಇದರಲ್ಲಿ ಅವರು ನೀತಾ ಅಂಬಾನಿ ಅವರ ಬದ್ಧತೆ, ಉತ್ಸಾಹ ಮತ್ತು ಪ್ರತಿಯೊಂದು ಸಣ್ಣ ವಿಷಯಕ್ಕೂ ಗಮನ ಹರಿಸುವ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನೀತಾ ಅಂಬಾನಿ ಅವರ ಸಮರ್ಪಣೆಯನ್ನು ಹತ್ತಿರದಿಂದ ನೋಡಿದ್ದೇನೆ ಮತ್ತು ಅವರಿಂದ ಸಾಕಷ್ಟು ಸ್ಫೂರ್ತಿ ಪಡೆಯುತ್ತೇನೆ ಎಂದು ಅವರು ಹೇಳಿದರು.

ಸರ್ಕಾರಿ ಶಾಲೆಗಳನ್ನು ಅಂದಗಾಣಿಸೋ ಅನು ಅಕ್ಕನಿಗೆ ಸ್ತ್ರೀ ಅವಾರ್ಡ್​: ಕೆಚ್ಚೆದೆಯ ಕನ್ನಡತಿ ಮಾತು ಕೇಳಿ...

click me!