
ನವದೆಹಲಿ(ಆ.11): ಹೆಚ್ಚಿನ ತೆರಿಗೆ ಹೊರೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಜಿಎಸ್ ಟಿ ಮೂಲಕ ಕೇಂದ್ರ ಸರ್ಕಾರ ತುಸು ಸಮಾಧಾನ ನೀಡುವ ಕಾರ್ಯಕ್ಕೆ ಕೈ ಹಾಕಿದೆ.
ಜಿಎಸ್ ಟಿ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಗೋಯಲ್, ಸರ್ಕಾರದ ವರಮಾನ ಇತರ ಮೂಲಗಳಿಂದ ಹೆಚ್ಚಾಗುವ ಸಂಭವವಿದ್ದು, ಹಾಗಾದರೆ ಮತ್ತಷ್ಟು ಸರಕುಗಳ ಮೇಲಿನ ತೆರಿಗೆಯನ್ನು ಕಡಿತ ಮಾಡಲಾಗುವುದು ಎಂದು ತಿಳಿಸಿದರು.
ಕಳೆದ ವರ್ಷ ಜಿಎಸ್ ಟಿ ಕೌನ್ಸಿಲ್ 384 ಸರಕುಗಳು, 68 ಸೇವೆಗಳ ಮೇಲಿನ ತೆರಿಗೆ ದರವನ್ನು ಕಡಿಮೆ ಮಾಡಿತ್ತು. ಹಾಗೆಯೇ 186 ಸರಕುಗಳು, 99 ಸೇವೆಗಳನ್ನು ಜಿಎಸ್ ಟಿಯಿಂದ ಈಗಾಗಲೇ ವಿನಾಯಿತಿ ನೀಡಲಾಗಿದೆ. ಸ್ಯಾನಿಟರಿ ಪ್ಯಾಡ್ಸ್ ಸಹ ವಿನಾಯಿತಿ ಪಡೆದ ಸರಕುಗಳಲ್ಲಿ ಇವೆ ಎಂದು ಗೋಯಲ್ ಲೋಕಸಬೇಗೆ ಮಾಹಿತಿ ನೀಡಿದರು.
ದೇಶದ ಆರ್ಥಿಕ ಕೊರತೆಗೆ ಅನುಗುಣವಾಗಿ ಜಿಎಸ್ ಟಿ ಸಂಗ್ರಹಿಸಲಾಗುತ್ತಿದೆ. ನಿರೀಕ್ಷಿತ ಪ್ರಮಾಣಕ್ಕಿಂತ ಭಾರತದ ಅಭಿವೃದ್ಧಿ ಉತ್ತಮವಾಗಿದೆ. ಐಎಂಎಫ್ ಬಿಡುಗಡೆ ಮಾಡಿರುವ ವರದಿಯಲ್ಲೂ 2019-20ನೇ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಪ್ರಮಾಣ ಶೇ.7.5ರಷ್ಟು ಇರಲಿದೆ ಎಂದು ಅಂದಾಜಿಸಿದೆ ಎಂದು ಗೋಯಲ್ ತಿಳಿಸಿದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.