ಕರ್ನಾಟಕ ಸೇರಿ 16 ರಾಜ್ಯಗಳಿಗೆ 6000 ಕೋಟಿ ರೂ ಜಿಎಸ್‌ಟಿ ಸಾಲ!

By Suvarna NewsFirst Published Nov 3, 2020, 9:51 AM IST
Highlights

ಕರ್ನಾಟಕ ಸೇರಿ 16 ರಾಜ್ಯಗಳಿಗೆ 6000 ಕೋಟಿ ರೂ. ಜಿಎಸ್‌ಟಿ ಸಾಲ ಪರಿಹಾರ| ಕರ್ನಾಟಕ ಸೇರಿದಂತೆ 16 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಿಗೆ ಪರಿಹಾರ

ನವದೆಹಲಿ(ನ.03): ಕರ್ನಾಟಕ ಸೇರಿದಂತೆ 16 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೋಮವಾರ ಜಿಎಸ್‌ಟಿ ಪರಿಹಾರದ 2ನೇ ಕಂತು 6 ಸಾವಿರ ಕೋಟಿ ರು.ಗಳನ್ನು ಸಾಲದ ರೂಪದಲ್ಲಿ ಬಿಡುಗಡೆ ಮಾಡಿದೆ.

ಅಕ್ಟೋಬರ್‌ 23ರಂದು 16 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಿಗೆ 6 ಸಾವಿರ ಕೋಟಿ ರು.ಗಳನ್ನು ಕೇಂದ್ರ ಬಿಡುಗಡೆ ಮಾಡಿತ್ತು. ಅದು ಮೊದಲ ಕಂತಾಗಿತ್ತು. ಈಗ ಪುದುಚೇರಿಯನ್ನೂ ಸೇರಿಸಲಾಗಿದ್ದು, ಜಿಎಸ್‌ಟಿ ಪರಿಹಾರ ಪಡೆದ 3ನೇ ಕೇಂದ್ರಾಡಳಿತ ಪ್ರದೇಶ ಎನ್ನಿಸಿಕೊಂಡಿದೆ.

ಜಿಎಸ್‌ಟಿ ಕೊರತೆ ಹಣವನ್ನು ಪರಿಹಾರ ರೂಪದಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡುತ್ತದೆ. ಆದರೆ ಕೊರೋನಾ ಕಾರಣ ಪರಿಹಾರ ನೀಡಿಕೆ ವಿಳಂಬವಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರವೇ ಶೇ.4.42ರಷ್ಟುಬಡ್ಡಿ ದರದಲ್ಲಿ ಸಾಲ ಪಡೆದು ರಾಜ್ಯ ಸರ್ಕಾರಗಳಿಗೆ ಪರಿಹಾರ ರೂಪದಲ್ಲಿ ನೀಡುತ್ತಿದೆ. ಸಾಲಕ್ಕೆ ಕರ್ನಾಟಕ ಸೇರಿ 21 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳು ಒಪ್ಪಿಗೆ ಸೂಚಿಸಿದ್ದವು.

click me!