ದೇಶದ ಆರ್ಥಿಕತೆಯಲ್ಲಿ ಜಿಎಸ್ ಟಿ ಸಕಾರಾತ್ಮಕ ಬದಲಾವಣೆ ತಂದಿದೆ: ಮೋದಿ

First Published Jun 22, 2018, 3:29 PM IST
Highlights

ದೇಶದ ಆರ್ಥಿಕತೆಯಲ್ಲಿ ಜಿಎಸ್ಟಿ ಸಕಾರಾತ್ಮಕ ಬದಲಾವಣೆ ತಂದಿದೆ

ಪ್ರಧಾನಿ ನರೇಂದ್ರ ಮೋದಿ ಅಭಿಮತ

ವಾಣಿಜ್ಯ ಇಲಾಖೆಯ ನೂತನ ಕಚೇರಿ ಉದ್ಘಾಟನೆ

ನವದೆಹಲಿಯ ಇಂಡಿಯಾ ಗೇಟ್ ಬಳಿ ಶಂಕುಸ್ಥಾಪನೆ

ನವದೆಹಲಿ(ಜೂ.22): ಭಾರತದ ಆರ್ಥಿಕತೆಯಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಸಕಾರಾತ್ಮಕ ಬದಲಾವಣೆ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಯ ಇಂಡಿಯಾ ಗೇಟ್ ಬಳಿ ಸ್ಥಾಪಿಸಲಾಗುತ್ತಿರುವ  ವಾಣಿಜ್ಯ ಇಲಾಖೆಯ ನೂತನ ಕಚೇರಿ ವಾಣಿಜ್ಯ ಭವನಕ್ಕೆ ಇಂದು ಶಂಕುಸ್ಥಾಪನೆ  ನೆರವೇರಿಸಿ ಮಾತನಾಡಿದ ಅವರು, ಮುಂದಿನ ವರ್ಷದ ಡಿಸೆಂಬರ್‌ಗೂ ಮುಂಚಿತವಾಗಿ ಈ ಕಟ್ಟಡ ಪೂರ್ಣಗೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಪ್ರಸ್ತುತ ತಂತ್ರಜ್ಞಾನದ ಮೂಲಕ ಸುಲಭ ರೀತಿಯಲ್ಲಿ ವ್ಯವಹರಿಸಬಹುದಾಗಿದೆ. ಮುಂದಿನ ದಿನಗಳಲ್ಲೂ ಇದು ಮತ್ತಷ್ಟು ಅಭಿವೃದ್ದಿಯಾಗಲಿದ್ದು, ಜಿಎಸ್ ಟಿ ಆರ್ಥಿಕತೆಯಲ್ಲಿ ಸಕಾರಾತ್ಮಕ ಪರಿಣಾಮ ತಂದಿದೆ. ಹಣಕಾಸು ಚಟುವಟಿಕೆಗಳು ಕ್ಷಿಪ್ರವಾಗಿ ದೊರೆಯುವಂತಾಗಿವೆ ಎಂದು ಮೋದಿ ಹೇಳಿದರು.

Technology has eased ways of doing business today & this is going to grow in years to come. GST has brought positive changes in economy & in the way financial activities were carried out earlier: PM Narendra Modi at the foundation stone laying ceremony of Vanijya Bhawan in pic.twitter.com/mnJKpR2orH

— ANI (@ANI)

ಸುಮಾರು 226 ಕೋಟಿ ರೂಪಾಯಿಗಳ ವೆಚ್ಚದಲ್ಲಿ  4.33 ಎಕರೆ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದ್ದು,  ಒಂದು ಸಾವಿರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯನಿರ್ವಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ.

ಕಟ್ಟಡದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಚಾಲಿತ  ಸೌಲಭ್ಯಗಳನ್ನು  ಒದಗಿಸಲಾಗುತ್ತಿದ್ದು, ಕಾಗದ ರಹಿತ ನೆಟ್‌ವರ್ಕಿಂಗ್ ವ್ಯವಸ್ಥೆ ಇರಲಿದೆ.  ಈ ಹೊಸ ಕಟ್ಟಡ ಭಾರತದ ಆರ್ಥಿಕತೆಯ ಬೆಳವಣೆಗೆ ಮಾತ್ರವಲ್ಲದೇ, ಆಡಳಿತದಲ್ಲಿ ತಂತ್ರಜ್ಞಾನ  ಅಳವಡಿಕೆಯನ್ನು ಪ್ರತಿಬಿಂಬಿಸಲಿದೆ ಎನ್ನಲಾಗಿದೆ.

 

click me!