
ಬ್ಯುಸಿ ಲೈಫ್ ನಲ್ಲಿ ಜನರಿಗೆ ಟೈಂ ಸಿಗ್ತಿಲ್ಲ. ಆನ್ಲೈನ್ನಲ್ಲಿ ದಿನಸಿ ವಸ್ತುಗಳನ್ನು ಆರ್ಡರ್ ಮಾಡ್ತಿದ್ದಾರೆ. ಇದ್ರಿಂದ ದಿನಸಿ ಅಂಗಡಿ ಮಾಲೀಕರ ಗಳಿಕೆ ಕಡಿಮೆ ಆಗ್ತಿದೆ ಎನ್ನುವ ಅಭಿಪ್ರಾಯ ಅನೇಕರಿಗಿದೆ. ಆದ್ರೆ ಆನ್ಲೈನ್ ಬುಕ್ಕಿಂಗ್ ನಲ್ಲಿ ಜಿಎಸ್ಟಿ, ಹೆಚ್ಚುವರಿ ಚಾರ್ಜ್ ಅಂತ ಸುಲಿಗೆ ನಡೆಯೋದ್ರಿಂದ ಜನರು ಸ್ಮಾರ್ಟ್ ಆಗಿದ್ದಾರೆ. ತುರ್ತು ಪರಿಸ್ಥಿತಿ ಬಿಟ್ಟು ಉಳಿದ ಟೈಂನಲ್ಲಿ ಅಂಗಡಿಗೆ ಹೋಗಿ ಖರೀದಿ ಮಾಡ್ತಿದ್ದಾರೆ. ಆನ್ಲೈನ್ ಶಾಪ್, ಮಾಲ್ ಅಂತ ನಗರಗಳಲ್ಲಿ ಎಷ್ಟೇ ಅಂಗಡಿ ತಲೆ ಎತ್ತಿದ್ರೂ ದಿನಸಿ ಅಂಗಡಿಗಳ ಮುಂದೆ ಜನ ಕಮ್ಮಿ ಆಗ್ತಿಲ್ಲ. ಸಣ್ಣ ವ್ಯಾಪಾರದಲ್ಲಿ ಹೆಚ್ಚು ಗಳಿಕೆ ಇದೆ ಅನ್ನೋದು ಸಂಪೂರ್ಣ ಸತ್ಯ. ಮೇಲ್ನೋಟಕ್ಕೆ ಚಿಕ್ಕ ಅಂಗಡಿಯಾದ್ರೂ ತಿಂಗಳಿಗೆ ದಿನಸಿ ಅಂಗಡಿ ಮಾಲೀಕರ ಗಳಿಕೆ ಹುಬ್ಬೇರಿಸುವಂತೆ ಮಾಡುತ್ತದೆ. ಅದಕ್ಕೆ ಈಗ ರೆಡ್ಡಿಟ್ ನಲ್ಲಿ ವೈರಲ್ ಆದ ಪೋಸ್ಟ್ ಉತ್ತಮ ಎಗ್ಸಾಂಪಲ್.
ದಿನಸಿ ಅಂಗಡಿ ಮಾಲೀಕನ ಆದಾಯ ಎಷ್ಟು? : r/StartUpIndia ನ ರೆಡ್ಡಿಟ್ ಪುಟದಲ್ಲಿ, @Turbulent_Most_6396 ಎಂಬ ಬಳಕೆದಾರರು ಪೋಸ್ಟ್ ಹಂಚಿಕೊಂಡಿದ್ದಾರೆ. ನನ್ನ ಮನೆಯ ಬಳಿ ಒಂದು ಕಿರಾಣಿ ಅಂಗಡಿ ಇದೆ. ಅವರದ್ದು ಸುಮಾರು 300 ಚದರ ಅಡಿ ವಿಸ್ತೀರ್ಣದ ಅಂಗಡಿ. ಅದು ಮುಖ್ಯ ರಸ್ತೆ ಪಕ್ಕದಲ್ಲಿದೆ. ಅಂಗಡಿ ಮಾಲೀಕರೇ ಆ ಜಾಗದ ಓವರ್. ಅಂಗಡಿಯಲ್ಲಿ ಅಕ್ಕಿ, ಬೇಳೆಕಾಳುಗಳು ಮತ್ತು ಇತರ ಎಲ್ಲಾ ರೀತಿಯ ಮನೆಯ ಅಡುಗೆ ಸಾಮಗ್ರಿಗಳನ್ನು ಮಾರಾಟ ಮಾಡುತ್ತಾರೆ. ಅವರ ಮಗ ಮತ್ತು ನನ್ನ ಸೋದರಸಂಬಂಧಿ ಸ್ನೇಹಿತರಾಗಿದ್ದಾರೆ. ಅವರ ತಂದೆ ಒಂದು ವರ್ಷದಲ್ಲಿ ಸುಮಾರು 70 ಲಕ್ಷ ಲಾಭ ಗಳಿಸುತ್ತಾರೆ ಎಂದು ಅವರು ಹೇಳಿದ್ದಾರೆ. ನಾನು ಆರಂಭದಲ್ಲಿ ಕಿರಣ ಅಂಗಡಿಯವರು ಹೆಚ್ಚು ಗಳಿಸುವುದಿಲ್ಲ ಎಂದು ಭಾವಿಸುತ್ತಿದ್ದೆ. ಏಕೆಂದರೆ ಈಗ ಎಲ್ಲವೂ ಜೆಪ್ಟೋ ಮತ್ತು ಇನ್ಸ್ಟಾಮಾರ್ಟ್ನಂತೆ ಆನ್ಲೈನ್ನಲ್ಲಿದೆ ತರಿಸ್ತಾರೆ. ಆದರೆ ನಾನು ತಪ್ಪು ತಿಳಿದಿದ್ದೆ. ಇಂಥ ಸಣ್ಣ ವ್ಯವಹಾರಗಳು ತುಂಬಾ ಗಳಿಸುತ್ತಿವೆ ಎಂದು ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ನನ್ನ ಮನೆಯ ಬಳಿ ದಿನಸಿ ವ್ಯಾಪಾರಿ ಇಷ್ಟು ಸಂಪಾದಿಸುತ್ತಾನೆ ಎಂದು ನನಗೆ ನಂಬಲು ಆಗುತ್ತಿಲ್ಲ ಎಂದು ಶೀರ್ಷಿಕೆ ಹಾಕಿದ್ದಾರೆ.
ರೆಡ್ಡಿಟ್ ನಲ್ಲಿ ಇದಕ್ಕೆ ಸಾಕಷ್ಟು ಕಮೆಂಟ್ ಬಂದಿದೆ. ನನ್ನ ಸ್ನೇಹಿತೆ ಟೈರ್ 3 ನಗರದಲ್ಲಿ ಸೂಪರ್ ಮಾರ್ಕೆಟ್ ಅಂಗಡಿ ಹೊಂದಿದ್ದಾಳೆ. ದಿನಸಿ + ಸ್ಟೇಷನರಿ + ಇತರ ಚಿಲ್ಲರೆ ವಸ್ತುಗಳನ್ನು ಅಲ್ಲಿ ಮಾರಾಟ ಮಾಡಲಾಗುತ್ತದೆ. ಸಾಲ ಮರುಪಾವತಿಸಿದ ನಂತ್ರ ಅವಳು ತಿಂಗಳಿಗೆ 2 ಲಕ್ಷ ನಿವ್ವಳ ಲಾಭ ಪಡೆಯುತ್ತಿದ್ದಾಳೆ. ವಹಿವಾಟು ಅಲ್ಲ, ಕೇವಲ ನಿವ್ವಳ ಲಾಭ. ಆದ್ದರಿಂದ, ಟೈರ್ 1 ನಗರದಲ್ಲಿ 70 ಲಕ್ಷ ಲಾಭ ಸಾಧ್ಯ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಇದು ಸಾಧ್ಯವಿಲ್ಲ. 70 ಲಕ್ಷ ಮೌಲ್ಯದ ವಸ್ತುಗಳನ್ನು ಮಾರಾಟ ಮಾಡಿರಬಹುದು ಎಂದಿದ್ದಾರೆ. ಮತ್ತೊಬ್ಬರು ಎಲ್ಲ ಪ್ರದೇಶದಲ್ಲಿ ಇಷ್ಟೊಂದು ಲಾಭ ಸಾಧ್ಯವಿಲ್ಲದೆ ಇರಬಹುದು, ಆದ್ರೆ ಕೆಲ ಪ್ರದೇಶಗಳಲ್ಲಿರು ಕಿರಾಣಿ ಮಾಲೀಕರು 70 ಲಕ್ಷ ಲಾಭ ಪಡೆಯುತ್ತಿದ್ದಾರೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಕಿರಾಣಿ ಸ್ಟೋರ್ ಶುರು ಮಾಡೋದು ಹೇಗೆ? : ಎಂದೂ ಬಂದಾಗದ ವ್ಯವಹಾರಗಳಲ್ಲಿ ಇದು ಕೂಡ ಒಂದು. ಸದಾ ಬೇಡಿಕೆ ಇರುವ ಕಿರಾಣಿ ಅಂಗಡಿಯನ್ನು ನೀವೂ ಶುರು ಮಾಡಿ, ಹಣ ಸಂಪಾದನೆ ಮಾಡ್ಬಹುದು. ಸರಿಯಾದ ಸ್ಥಳವನ್ನು ಆರಿಸಿ, ದಿನಸಿ ಅಂಗಡಿ ವ್ಯವಹಾರಕ್ಕಾಗಿ ಪರವಾನಗಿ ಪಡೆದು ನೀವು ವ್ಯವಹಾರ ಶುರು ಮಾಡ್ಬಹುದು. ಸಣ್ಣ ಕಿರಾಣಿ ಅಂಗಡಿ ಪ್ರಾರಂಭಿಸಲು ಕನಿಷ್ಠ 50000 ಖರ್ಚು ಮಾಡ್ಬೇಕು. ದೊಡ್ಡ ಪ್ರಮಾಣದಲ್ಲಿ ಅಂಗಡಿ ತೆರೆಯುವ ಪ್ಲಾನ್ ಇದ್ರೆ 20 ರಿಂದ 25 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.