5 ವರ್ಷಕ್ಕಿಂತ ಮೊದಲೇ ಉದ್ಯೋಗ ಬಿಟ್ರೂ ಸಿಗುತ್ತೆ ಗ್ರ್ಯಾಚುಟಿ, ಹೇಗೆ? ಇಲ್ಲಿದೆ ವಿವರ

By Suvarna NewsFirst Published Apr 13, 2022, 12:27 PM IST
Highlights

* ಐದು ವರ್ಷ ಪೂರೈಸಿದರಷ್ಟೇ ಗ್ಯಾಚ್ಯುಟಿ ಸಿಗುತ್ತದೆ ಎಂಬ ನಿಯಮ

* ಐದು ವರ್ಷಕ್ಕಿಂತ ಕಡಿಮೆ ಅವಧಿಯ ಸೇವೆಗೂ ಸಿಗುತ್ತೆ ಈ ಮೊತ್ತ

* ಹೇಗೆ? ಪ್ರಕ್ರಿಯೆ, ನಿಯಮ ಏನು? ಇಲ್ಲಿದೆ ವಿವರ

ನವದೆಹಲಿ(ಏ.13): ನೀವು ಸಂಬಳದ ವರ್ಗಕ್ಕೆ ಸೇರಿದವರಾಗಿದ್ದರೆ, ಗ್ಯಾಚ್ಯುಟಿ ಬಗ್ಗೆ ನಿಮಗೆ ಖಂಡಿತವಾಗಿಯೂ ತಿಳಿದಿರಬೇಕು. ಯಾವುದೇ ಕಂಪನಿಯಲ್ಲಿ ಐದು ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡುವ ಉದ್ಯೋಗಿಗಳು ಗ್ರಾಚ್ಯುಟಿಗೆ ಅರ್ಹರಾಗುತ್ತಾರೆ. ಆದರೆ ಗ್ರಾಚ್ಯುಟಿಯ ಪ್ರಯೋಜನ ಐದು ವರ್ಷಗಳಿಗಿಂತ ಕಡಿಮೆ ಅವಧಿಯ ಸೇವೆಯ ಮೇಲೆ ಸಹ ಲಭ್ಯವಿದೆ ಎಂದು ನಿಮಗೆ ತಿಳಿದಿದೆಯೇ. ಹಾಗಾದ್ರೆ ಯಾರು ಗ್ರಾಚ್ಯುಟಿ ಪಡೆಯಲು ಅರ್ಹರು? ಇಲ್ಲಿದೆ ವಿವರ.

ಇವರಿಗೆಲ್ಲಾ ಸಿಗುತ್ತೆ ಲಾಭ

ಪಾವತಿ ಮತ್ತು ಗ್ರಾಚ್ಯುಟಿ ಕಾಯ್ದೆಯು ದೇಶದ ಎಲ್ಲಾ ಕಾರ್ಖಾನೆಗಳು, ಗಣಿಗಳು, ತೈಲ ಕ್ಷೇತ್ರಗಳು, ಬಂದರುಗಳು ಮತ್ತು ರೈಲ್ವೆಗಳಿಗೆ ಅನ್ವಯಿಸುತ್ತದೆ. ಇದರೊಂದಿಗೆ, 10 ಕ್ಕಿಂತ ಹೆಚ್ಚು ಜನರು ಕೆಲಸ ಮಾಡುವ ಅಂಗಡಿಗಳು ಮತ್ತು ಕಂಪನಿಗಳ ಉದ್ಯೋಗಿಗಳು ಸಹ ಗ್ರಾಚ್ಯುಟಿಯ ಪ್ರಯೋಜನವನ್ನು ಪಡೆಯುತ್ತಾರೆ.

ಯಾವ ಆಧಾರದ ಮೇಲೆ ಗ್ರಾಚ್ಯುಟಿ ಲಭ್ಯ

ಗ್ರಾಚ್ಯುಟಿ ಕಾಯ್ದೆಯ ಪ್ರಕಾರ, ಯಾವುದೇ ಒಂದು ಉದ್ಯೋಗದಾತರೊಂದಿಗೆ ಸತತ ಐದು ವರ್ಷಗಳ ಕಾಲ ಕೆಲಸ ಮಾಡುವ ಉದ್ಯೋಗಿಗಳು ಗ್ರಾಚ್ಯುಟಿಯ ಪ್ರಯೋಜನವನ್ನು ಪಡೆಯುತ್ತಾರೆ. ಆದಾಗ್ಯೂ, ಕಾಯಿದೆಯ ಸೆಕ್ಷನ್ 2A 'ಕೆಲಸವನ್ನು ಮುಂದುವರೆಸುವುದು' ಎಂದು ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತದೆ. ಇದರ ಪ್ರಕಾರ, ಅನೇಕ ಉದ್ಯೋಗಿಗಳು ಪೂರ್ಣ 5 ವರ್ಷಗಳ ಕಾಲ ಕೆಲಸ ಮಾಡದಿದ್ದರೂ ಸಹ ಗ್ರಾಚ್ಯುಟಿಯ ಪ್ರಯೋಜನವನ್ನು ಪಡೆಯಬಹುದು.

ಐದು ವರ್ಷಕ್ಕೂ ಮೊದಲೇ ಗ್ರಾಚ್ಯುಟಿಯ ಪ್ರಯೋಜನವನ್ನು ಹೇಗೆ ಪಡೆಯುವುದು?

ಗ್ರಾಚ್ಯುಟಿ ಕಾಯ್ದೆಯ ಸೆಕ್ಷನ್-2ಎ ಪ್ರಕಾರ, ಭೂಗತ ಗಣಿಗಳಲ್ಲಿ ಕೆಲಸ ಮಾಡುವ ನೌಕರರು ತಮ್ಮ ಉದ್ಯೋಗದಾತರೊಂದಿಗೆ 4 ವರ್ಷ 190 ದಿನಗಳನ್ನು ಪೂರ್ಣಗೊಳಿಸಿದರೆ, ಅವರು ಗ್ರಾಚ್ಯುಟಿಯ ಪ್ರಯೋಜನವನ್ನು ಪಡೆಯುತ್ತಾರೆ. ಅದೇ ಸಮಯದಲ್ಲಿ, ಇತರ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು 4 ವರ್ಷ 240 ದಿನಗಳವರೆಗೆ ಕೆಲಸ ಮಾಡಿದ ನಂತರ ಗ್ರಾಚ್ಯುಟಿಗೆ ಅರ್ಹರಾಗುತ್ತಾರೆ.

ಸೂಚನೆಯ ಅವಧಿಯು ಸಹ ಪರಿಗಣಿಸಲ್ಪಡುತ್ತದೆ

ಗ್ರಾಚ್ಯುಟಿಯ ಅವಧಿಯನ್ನು ಲೆಕ್ಕಾಚಾರ ಮಾಡುವಾಗ ನೋಟೀಸ್ ಅವಧಿಯನ್ನು ಸೇರಿಸಲಾಗುತ್ತದೆಯೇ ಎಂಬ ಬಗ್ಗೆ ಅನೇಕ ಜನರಲ್ಲಿದೆ. ಆದರೆ ನೋಟಿಸ್ ಅವಧಿಯೂ ನಿಮ್ಮ 'ನಿರಂತರ ಸೇವೆ'ಯಲ್ಲಿ ಎಣಿಸಲಾಗುತ್ತದೆ ಎಂಬುವುದು ಗಮನಾರ್ಹ. 

click me!