
ನವದೆಹಲಿ[ಜೂ.22]: ಮಾರಾಟಗಾರರು ಜಿಎಸ್‌ಟಿ ತೆರಿಗೆ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವುದನ್ನು ಖಾತರಿಪಡಿಸಿಕೊಳ್ಳುವ ನಿಟ್ಟಿನಿಂದ ಸ್ಥಾಪಿಸಲ್ಪಟ್ಟ ಪ್ರಾಧಿಕಾರದ ಅವಧಿಯನ್ನು ಜಿಎಸ್‌ಟಿ ಮಂಡಳಿ ಸಭೆ ಶುಕ್ರವಾರ ಎರಡು ವರ್ಷಗಳವರೆಗೆ ವಿಸ್ತರಿಸಿದೆ.
ಜಿಎಸ್‌ಟಿಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೇ ಇದ್ದರೆ ಮಾರಾಟಾಗಾರರ ವಿರುದ್ಧ ಗರಿಷ್ಠ 25 ಸಾವಿರ ರು.ವರೆಗೂ ದಂಡ ವಿಧಿಸಲು ಅವಕಾಶವಿದೆ. ಆ ಪ್ರಮಾಣವನ್ನು ಇದೀಗ ಕಾನೂನು ಮೀರಿ ಮಾಡಿಕೊಂಡ ಲಾಭದ ಶೇ.10ರಷ್ಟುಹೆಚ್ಚಿಸಲು ನಿರ್ಧರಿಸಲಾಗಿದೆ. ಅಲ್ಲದೆ ಜಿಎಸ್‌ಟಿ ನೋಂದಣಿಗೆ ಆಧಾರ್ ಅನ್ನು ಪುರಾವೆಯನ್ನಾಗಿ ಒದಗಿಸಲು ಮತ್ತು ಇಲೆಕ್ಟ್ರಿಕ್ ವಾಹನಗಳ ಮೇಲೆ ತೆರಿಗೆ ಕಡಿತಕ್ಕೆ ಜಿಎಸ್‌ಟಿ ಮಂಡಳಿ ಒಪ್ಪಿಗೆ ಸೂಚಿಸಿದೆ.
ಅಲ್ಲದೇ ವಾರ್ಷಿಕ ಜಿಎಸ್‌ಟಿ ಸಲ್ಲಿಕೆ ಅವಧಿಯನ್ನು ಆಗಸ್ಟ್ 30ರ ವರೆಗೂ ವಿಸ್ತರಿಸಲಾಗಿದೆ. ಮೊದಲ ಬಾರಿಗೆ ಜಿಎಸ್‌ಟಿ ಇಲೆಕ್ಟ್ರಾನಿಕ್ ಇನ್‌ವೈಸಿಂಗ್ ವ್ಯವಸ್ಥೆಯನ್ನು ಪರಿಚಯಿಸಲು ಒಪ್ಪಿಗೆ ಸೂಚಿಸಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.