ಸಬ್‌ ರಿಜಿಸ್ಟ್ರಾರ್‌ ಕಚೇರಿ, ಆಸ್ತಿ ನೊಂದಣಿ ಆರಂಭಕ್ಕೆ ನಿರ್ಧಾರ

By Suvarna News  |  First Published Apr 28, 2020, 10:15 AM IST

ರಾಜ್ಯದ ಆರ್ಥಿಕ ಪುನಶ್ಚೇತಕ್ಕಾಗಿ ಲಾಕ್‌ಡೌನ್‌ ನಿಯಮವನ್ನು ಮತ್ತಷ್ಟುಸಡಿಲಗೊಳಿಸಲು ಸರ್ಕಾರವು ಮುಂದಾಗಿದೆ. ಬುಧವಾರದಿಂದ ಕ್ರಷರ್‌ ವ್ಯವಹಾರ ಮತ್ತು ಸಬ್‌ ರಿಜಿಸ್ಟ್ರಾರ್‌ ಕಚೇರಿಗಳ ಆರಂಭಿಸಲು ನಿರ್ಧರಿಸಿದೆ. 


ಬೆಂಗಳೂರು (ಏ. 28): ರಾಜ್ಯದ ಆರ್ಥಿಕ ಪುನಶ್ಚೇತಕ್ಕಾಗಿ ಲಾಕ್‌ಡೌನ್‌ ನಿಯಮವನ್ನು ಮತ್ತಷ್ಟುಸಡಿಲಗೊಳಿಸಲು ಸರ್ಕಾರವು ಮುಂದಾಗಿದೆ. ಬುಧವಾರದಿಂದ ಕ್ರಷರ್‌ ವ್ಯವಹಾರ ಮತ್ತು ಸಬ್‌ ರಿಜಿಸ್ಟ್ರಾರ್‌ ಕಚೇರಿಗಳ ಆರಂಭಿಸಲು ನಿರ್ಧರಿಸಿದೆ. ಈ ಬಗ್ಗೆ ಅಧಿಕೃತ ಆದೇಶ ಹೊರಬಂದಿಲ್ಲ. ಮಂಗಳವಾರ ಆದೇಶ ಪ್ರಕಟಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಲಾಕ್‌ಡೌನ್ ನಡುವೆ ಬೆಂಗಳೂರಿಗರಿಗೆ ಸಿಹಿ ಸುದ್ದಿ!

Latest Videos

ಈಗಾಗಲೇ ಅಗತ್ಯ ಸೇವೆಯ ಜತೆಗೆ ಆರ್ಥಿಕ ಚಟುವಟಿಕೆಗಾಗಿ ಕೆಲವು ನಿಯಮಗಳಲ್ಲಿ ಸಡಿಲಗೊಳಿಸಲಾಗಿದೆ. ಸರ್ಕಾರದ ಬೊಕ್ಕಸಕ್ಕೆ ಆದಾಯ ತಂದುಕೊಡುವುದರಲ್ಲಿ ಕ್ರಷರ್‌ ವ್ಯವಹಾರ ಮತ್ತು ಆಸ್ತಿ ನೋಂದಣಿಯು ಪ್ರಮುಖವಾದ ಮೂಲಗಳು. ಹೀಗಾಗಿ ಕೆಲವು ಷರತ್ತುಗಳೊಂದಿಗೆ ಅನುಮತಿ ನೀಡುವ ದಿಸೆಯಲ್ಲಿ ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ.

click me!