ಸರ್ಕಾರಿ ನೌಕರರಿಗೆ ಕೇಂದ್ರದಿಂದ ಗುಡ್‌ ನ್ಯೂಸ್!

By Kannadaprabha News  |  First Published Mar 14, 2020, 10:53 AM IST

ಕೇಂದ್ರ ನೌಕರರ ತುಟ್ಟಿ ಭತ್ಯೆ ಶೇ.4ರಷ್ಟುಏರಿಕೆ| 1.13 ಕೋಟಿ ಜನರಿಗೆ ಲಾಭ


ನವದೆಹಲಿ[ಮಾ.14]: ಯುಗಾದಿಗೂ ಮುನ್ನ ಕೇಂದ್ರ ಸರ್ಕಾರ ತನ್ನ ನೌಕರರು ಮತ್ತು ಪಿಂಚಣಿದಾರರಿಗೆ ಶೇ.4ರಷ್ಟುತುಟ್ಟಿಭತ್ಯೆ ನೀಡುವ ಸಿಹಿ ಸುದ್ದಿ ಪ್ರಕಟಿಸಿದೆ. ಹೀಗಾಗಿ ಶೇ.17ರಷ್ಟಿದ್ದ ತುಟ್ಟಿಭತ್ಯೆ ಇನ್ನು ಶೇ.21ಕ್ಕೆ ಏರಲಿದೆ. 2020ರ ಜ.1ರಿಂದಲೇ ಈ ತುಟ್ಟಿಭತ್ಯೆ ಪೂರ್ವಾನ್ವಯವಾಗಲಿದೆ.

ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದಾಗಿ ಕೇಂದ್ರ ಸರ್ಕಾರಿ ನೌಕರರ ವೇತನ ಕನಿಷ್ಠ 720 ರು.ನಿಂದ ಗರಿಷ್ಠ 10000 ರು.ವರೆಗೂ ಏರಿಕೆಯಾಗಲಿದೆ. ಈ ಏರಿಕೆಯಿಂದಾಗಿ 48 ಲಕ್ಷ ನೌಕರರು ಮತ್ತು 65 ಲಕ್ಷ ಪಿಂಚಣಿದಾರರಿಗೆ ಲಾಭವಾಗಲಿದೆ.

Latest Videos

ಇನ್ನು ಏರಿಕೆಯ ಪರಿಣಾಮ ಕೇಂದ್ರದ ಬೊಕ್ಕಸಕ್ಕೆ 14595 ಕೋಟಿ ರು. ಹೊರೆ ಬೀಳಲಿದೆ.

click me!