ನಾಳೆಯಿಂದ ಮೂರು ದಿನ ಬ್ಯಾಂಕ್ ವ್ಯವಹಾರ ಇಲ್ಲ!

By Suvarna NewsFirst Published Jan 28, 2020, 3:49 PM IST
Highlights

2 ದಿನಗಳ ಮುಷ್ಕರಕ್ಕೆ ನೌಕರರ ಒಕ್ಕೂಟ ಕre| ಜ.31ರಿಂದ ಮೂರು ದಿನ ಬ್ಯಾಂಕ್ ವ್ಯವಹಾರ ಇಲ್ಲ!

ನವದೆಹಲಿ[ಜ.28]: ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳ ಕಾರ್ಮಿಕ ಸಂಘಗಳ ವೇದಿಕೆಯಾಗಿರುವ ‘ಬ್ಯಾಂಕ್ ನೌಕರರ ಸಂಘಗಳ ಸಂಯುಕ್ತ ಒಕ್ಕೂಟ’ (ಯುಎಫ್‌ಬಿಯು) ಜ.31ರಿಂದ ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಬ್ಯಾಂಕ್‌ನಲ್ಲಿ ನಗದು ವ್ಯವಹಾರ ಮಾಡುವವರಿಗೆ ತೊಂದರೆಯಾಗುವ ಸಾಧ್ಯತೆ ಇದೆ.

ಜನವರಿ 31ರ ಶುಕ್ರವಾರ ಮತ್ತು ಫೆ.1ರ ಶನಿವಾರ ಮುಷ್ಕರಕ್ಕೆ ಕರೆ ನೀಡಲಾಗಿದೆ. ಆದರೆ, ಫೆ.2 ಭಾನುವಾರ ರಜೆ ದಿನವಾಗಿದೆ. ಹೀಗಾಗಿ ಸತತ ಮೂರು ದಿನಗಳ ಕಾಲ ಎಲ್ಲ ಬ್ಯಾಂಕ್‌ಗಳಲ್ಲಿ ಚೆಕ್ ಹಾಗೂ ನಗದು ವ್ಯವಹಾರ ನಡೆಸುವವರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಜೊತೆಗೆ, ಠೇವಣಿ ಇಡುವು ದು, ಚೆಕ್ ಕ್ಲಿಯರೆನ್ಸ್ ಸೇರಿದಂತೆ ಇನ್ನಿತರ ವಹಿವಾಟುಗಳಿಗೆ ಅಡ್ಡಿಯಾಗಲಿದೆ.

2 ಸಾವಿರ ರೂ. ನೋಟು ಮುದ್ರಣ ನಿಲ್ಲಿಸಿದ RBI: ಮುಂದೇನು?

ಪ್ರತಿ ದಿನ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ವ್ಯವಹಾರ ನಡೆಸುವ ಬೀದಿ ವ್ಯಾಪಾರಿಗಳು, ಷೇರು ವ್ಯವಹಾರ ಮಾಡುವವರು ಮತ್ತು ಮಾರುಕಟ್ಟೆಯಲ್ಲಿ ವ್ಯವಹರಿಸುವವರಿಗೆ ಅಡಚಣೆಯಾಗಲಿದ್ದು, ಮುಂಜಾಗ್ರತೆ ವಹಿಸಿಕೊಳ್ಳಬೇಕಾಗಿದೆ. ಆನ್‌ಲೈನ್ ಬ್ಯಾಂಕಿಂಗ್, ಆ್ಯಪ್ ಮೂಲಕ ವ್ಯವಹಾರ (ಫೋನ್ ಪೇ, ಪೇಟಿಎಂ, ಗೂಗಲ್‌ಪೇ ಮತ್ತು ಭೀಮ್) ನಡೆಸುವವರಿಗೆ ಯಾವುದೇ ತೊಂದರೆಯಾಗುವುದಿಲ್ಲ.

ಎಟಿಎಂಗಳು ಸಾಮಾನ್ಯ ದಿನದಂತೆ ಕಾರ್ಯನಿರ್ವಹಿಸಲಿವೆ ಎಂದು ಬ್ಯಾಂಕ್ ಒಕ್ಕೂಟ ಮಾಹಿತಿ ನೀಡಿದೆ. ಮಾರ್ಚ್‌ನಲ್ಲಿ ಮತ್ತೆ ಮುಷ್ಕರ: ಬೇಡಿಕೆ ಈಡೇರದಿದ್ದಲ್ಲಿ ಮಾರ್ಚ್ 11ರಿಂದ ಮತ್ತೆ 3 ದಿನಗಳ ಕಾಲ ಮುಷ್ಕರ ಹಮ್ಮಿಕೊಳ್ಳಲಾಗು ವುದು. ಭರವಸೆ ಈಡೇರದಿದ್ದಲ್ಲಿ ಏಪ್ರಿಲ್ 1ರಿಂದ ಅನಿರ್ದಿಷ್ಟ ಮುಷ್ಕರ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

2 ದಿನ ದೇಶವ್ಯಾಪಿ ಬ್ಯಾಂಕ್‌ ನೌಕರರ ಮುಷ್ಕರಕ್ಕೆ ಕರೆ!, ಯಾವಾಗ? ಇಲ್ಲಿದೆ ಮಾಹಿತಿ

click me!