
ನವದೆಹಲಿ(ಏ.06): ದೇಶದ ಪ್ರತಿಷ್ಠಿತ ಐಟಿ ಕಂಪನಿ ವಿಪ್ರೋದಲ್ಲಿದ್ದ ಪಾಕ್ ಪ್ರಜೆಗಳ 1,150 ಕೋಟಿ ರೂ. ಮೌಲ್ಯದ ಷೇರುಗಳನ್ನು ಕೇಂದ್ರ ಸರ್ಕಾರ ಮಾರಾಟ ಮಾಡಿದೆ.
ಶತ್ರು ಆಸ್ತಿ ಕಾಯ್ದೆ 1968ರ ಅಡಿ ವಿಪ್ರೋದಲ್ಲಿದ್ದ ಪಾಕ್ ಪ್ರಜೆಗಳ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಇದೇ ಮೊದಲ ಬಾರಿಗೆ ಭಾರತದಲ್ಲಿದ್ದ ಪಾಕ್ ಪ್ರಜೆಗಳ ಷೇರುಗಳನ್ನು ಮಾರಾಟ ಮಾಡುವ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.
ಈ ಎಲ್ಲಾ ಷೇರುಗಳು ಗೃಹ ಇಲಾಖೆಯ ಶತ್ರು ಆಸ್ತಿ ವಾರಸುದಾರ ವಿಭಾಗದ(ಸಿಇಪಿಐ) ಅಧೀನದಲ್ಲಿತ್ತು. 1960ರ ದಶಕದಲ್ಲಿ ಭಾರತ-ಪಾಕ್ ಯುದ್ಧ ನಡೆದ ಬಳಿಕ, ಸಂಸತ್ತು ಶತ್ರು ಆಸ್ತಿ ಕಾಯ್ದೆಯನ್ನು ಜಾರಿಗೆ ತಂದಿತ್ತು.
ಅಜೀಂ ಪ್ರೇಮ್ ಜಿ ಒಡೆತನದ ವಿಪ್ರೋದಲ್ಲಿದ್ದ ಪಾಕ್ ಪ್ರಜೆಗಳ 4.3 ಕೋಟಿ ಷೇರುಗಳನ್ನು 258 ರೂ.ಗೆ ಮಾರಾಟ ಮಾಡಲಾಗಿದೆ. ಇವುಗಳಲ್ಲಿ ಶೇ.80ಕ್ಕೂ ಹೆಚ್ಚು ಷೇರುಗಳನ್ನು ಭಾರತೀಯ ಜೀವವಿಮಾ ನಿಗಮ ಖರೀದಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.