ಜನಸಾಮಾನ್ಯರಿಗೆ ಗುಡ್‌ ನ್ಯೂಸ್‌: ಕೇಂದ್ರ ಸರ್ಕಾರದಿಂದ 70 ರೂ. ಗೆ ಟೊಮ್ಯಾಟೋ ಮಾರಾಟ

By Kannadaprabha News  |  First Published Jul 20, 2023, 9:12 AM IST

ಟೊಮ್ಯಾಟೋ ಬೆಲೆಗಳು ದೇಶಾದ್ಯಂತ ಕೊಂಚ ಇಳಿಕೆಯಾಗಿರುವ ಕಾರಣ ತನ್ನ ಬೆಲೆಯನ್ನು 10 ರೂ. ನಷ್ಟು ಇಳಿಸಿ ಗ್ರಾಹಕನಿಗೆ ಸಮಾಧಾನ ನೀಡಿದೆ. ಉಳಿದಂತೆ ದೆಹಲಿಯಲ್ಲಿ ರಿಯಾಯ್ತಿ ರಹಿತ ಒಂದು ಕೇಜಿ ಟೊಮ್ಯಾಟೋಗೆ 120 ರೂ. ಇದ್ದು, ಉತ್ತರ ಪ್ರದೇಶದಲ್ಲಿ 245 ರೂ. ಇದೆ.


ನವದೆಹಲಿ (ಜುಲೈ 20, 2023): ಕೇಂದ್ರ ಸರ್ಕಾರದ ಸಂಸ್ಥೆಗಳ ಮೂಲಕ ನೀಡಲಾಗುತ್ತಿರುವ ರಿಯಾಯ್ತಿ ದರದ ಟೊಮ್ಯಾಟೋವನ್ನು ಮತ್ತೊಷ್ಟು ಇಳಿಕೆ ಮಾಡಲಾಗಿದ್ದು, ಬುಧವಾರ ಕೆಜಿಗೆ 80 ರೂ.ನಿಂದ 70 ರೂ.ಗೆ ಇಳಿಸಲಾಗಿದೆ. ಈ ಟೊಮ್ಯಾಟೋಗಳನ್ನು ಕೇಂದ್ರ ಸರ್ಕಾರದ ಎನ್‌ಸಿಸಿಎಫ್‌ ಹಾಗೂ ನ್ಯಾಫೆಡ್‌ ಸಹಕಾರಿ ಸಂಸ್ಥೆಗಳು ಬೆಳೆಗಾರರಿಂದ ಖರೀದಿ ಮಾಡಿ ಅದನ್ನು ದೆಹಲಿ ಸೇರಿದಂತೆ ವಿವಿಧ ನಗರಗಳಲ್ಲಿ ನ್ಯಾಫೆಡ್‌ ಕೇಂದ್ರಗಳಲ್ಲಿ ರಿಯಾಯ್ತಿ ದರಕ್ಕೆ ಮಾರಾಟ ಮಾಡುತ್ತಿದೆ.

ಈ ಟೊಮ್ಯಾಟೋ ಬೆಲೆಗಳು ದೇಶಾದ್ಯಂತ ಕೊಂಚ ಇಳಿಕೆಯಾಗಿರುವ ಕಾರಣ ತನ್ನ ಬೆಲೆಯನ್ನು 10 ರೂ. ನಷ್ಟು ಇಳಿಸಿ ಗ್ರಾಹಕನಿಗೆ ಸಮಾಧಾನ ನೀಡಿದೆ. ಉಳಿದಂತೆ ದೆಹಲಿಯಲ್ಲಿ ರಿಯಾಯ್ತಿ ರಹಿತ ಒಂದು ಕೇಜಿ ಟೊಮ್ಯಾಟೋಗೆ 120 ರೂ. ಇದ್ದು, ಉತ್ತರ ಪ್ರದೇಶದಲ್ಲಿ 245 ರೂ. ಇದೆ.

Tap to resize

Latest Videos

ಇದನ್ನು ಓದಿ: Good News: ಶೀಘ್ರದಲ್ಲೇ ಟೊಮ್ಯಾಟೋ ದರ ಇಳಿಕೆ; ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ

ಟೊಮ್ಯಾಟೋ ಮಾರಿ 3 ಕೋಟಿ ಗಳಿಸಿದ ಪುಣೆ ರೈತ
ಪುಣೆ: ದೇಶಾದ್ಯಂತ ಗಗನ ದಿಕ್ಕಿನಲ್ಲಿರುವ ಟೊಮ್ಯಾಟೋ ಬೆಲೆ ಜನರನ್ನು ತತ್ತರಿಸುವಂತೆ ಮಾಡಿದ್ದರೆ, ಪುಣೆಯ ರೈತರೊಬ್ಬರು ಟೊಮ್ಯಾಟೋ ಮಾರಿ 2 ತಿಂಗಳಲ್ಲಿ 3 ಕೋಟಿ ರೂ. ಆದಾಯ ಗಳಿಸಿದ್ದಾರೆ. ಈಶ್ವರ್‌ ಗಾಯ್ಕರ್‌ ಎಂಬ ರೈತರು ಜೂನ್‌ನಿಂದ ಜುಲೈವರೆಗೆ ಮಾರಾಟ ಮಾಡಿದ ಟೊಮ್ಯಾಟೋದಲ್ಲಿ ಒಟ್ಟು ಇಷ್ಟು ಆದಾಯ ಕಂಡಿದ್ದಾರೆ.

ಈಶ್ವರ್‌ ಮೇ ತಿಂಗಳಿನಲ್ಲಿ ಇದೇ ಟೊಮ್ಯಾಟೋ ಬೆಳೆದು ಭಾರಿ ಪ್ರಮಾಣದ ನಷ್ಟ ಅನುಭವಿಸಿದ್ದರು. ಆದರೆ ಛಲ ಬಿಡದೇ ತಮ್ಮ 12 ಎಕರೆ ಜಮೀನಿನಲ್ಲಿ ಟೊಮ್ಯಾಟೋವನ್ನೇ ಮುಂದುವರೆಸಿದರ ಪರಿಣಾಮ ಈಗ ಭಾರಿ ಗಳಿಕೆ ಕಂಡಿದ್ದಾರೆ. ಮೇನಲ್ಲಿ ಒಂದು ಕ್ರೇಟಿಗೆ 40 ರೂ.ಗೆ ಮಾರುತ್ತಿದ್ದ ಟೊಮ್ಯಾಟೋವನ್ನು ಜೂನ್‌ನಲ್ಲಿ 770 ರೂ.ಗೆ ಮಾರಿದ್ದರು. ಆಗ 1.5 ಕೋಟಿ ರೂ. ಆದಾಯ ಬಂದಿತ್ತು. ಬಳಿಕ ಜುಲೈನಲ್ಲಿ ಬರೋಬ್ಬರಿ 2200 ರೂ.ಗೆ 1 ಕ್ರೇಟ್‌ ಮಾರಿದ್ದಾರೆ. ಇದರಿಂದ ಮತ್ತೆ 1.5 ಕೋಟಿ ರೂ. ಆದಾಯ ಬಂದಿದೆ. ಈವರೆಗೂ 18,000 ಕ್ರೇಟ್‌ವರೆಗೆ ಮಾರಾಟ ಮಾಡಿದ್ದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ: ಕೆಜಿಗೆ 150 ರೂ. ದಾಟಿದ ಟೊಮ್ಯಾಟೋ: ಈ ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ 60 ರೂ. ಗೆ ಮಾರಾಟ!

click me!