ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ದರ ಸಾಕಷ್ಟು ಮೇಲ್ಮಟ್ಟದಲ್ಲಿರುವುದು ಕೂಡ ಭಾರತದ ಸಹಾಯಕ್ಕೆ ಬರುತ್ತಿದೆ. ಕೋವಿಡ್‌ನಿಂದ ಎದುರಾದ ಸವಾಲುಗಳಿಂದ ಭಾರತ ಯಶಸ್ವಿಯಾಗಿ ಹೊರಬಂದಿದೆ ಎಂದು ವಿಶ್ವ ಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನವದೆಹಲಿ (ಜುಲೈ 20, 2023): ಜಾಗತಿಕ ಆರ್ಥಿಕ ಹಿಂಜರಿಕೆಯಿಂದ ಹೊರಗುಳಿಯಲು ಭಾರತ ಸಾಕಷ್ಟುಕೆಲಸ ಮಾಡುತ್ತಿದೆ ಎಂದು ವಿಶ್ವ ಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಜಾಗತಿಕ ಆರ್ಥಿಕ ಹಿಂಜರಿಕೆಯಿಂದ ದೂರ ಉಳಿಯಲು ಭಾರತ ಸಾಕಷ್ಟು ಕೆಲಸ ಮಾಡುತ್ತಿದೆ. ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ದರ ಸಾಕಷ್ಟು ಮೇಲ್ಮಟ್ಟದಲ್ಲಿರುವುದು ಕೂಡ ಭಾರತದ ಸಹಾಯಕ್ಕೆ ಬರುತ್ತಿದೆ. ಕೋವಿಡ್‌ನಿಂದ ಎದುರಾದ ಸವಾಲುಗಳಿಂದ ಭಾರತ ಯಶಸ್ವಿಯಾಗಿ ಹೊರಬಂದಿದೆ. ಆದರೆ ಈ ವೇಗವನ್ನು ಹೀಗೇ ಕಾಯ್ದುಕೊಳ್ಳುವುದು ಮುಖ್ಯ’ ಎಂದು ಅವರು ಹೇಳಿದ್ದಾರೆ.
ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಜಯ್ ಬಂಗಾ ಕೆಲ ಸಮಯದ ಹಿಂದೆ ವಿಶ್ವ ಬ್ಯಾಂಕ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆ ಹುದ್ದೆಗೇರಿದ ಮೊದಲ ಭಾರತೀಯ ಮೂಲದ ವ್ಯಕ್ತಿ ಅವರಾಗಿದ್ದಾರೆ. ವಿಶ್ವ ಬ್ಯಾಂಕ್‌ನ ಅಧ್ಯಕ್ಷರಾದ ಬಳಿಕ ಮೊದಲ ಬಾರಿ ಅವರು ಭಾರತಕ್ಕೆ ಆಗಮಿಸಿದ್ದು, ಈ ವೇಳೆ ದ್ವಾರಕಾದಲ್ಲಿರುವ ಸ್ಕಿಲ್ ಸೆಂಟರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಭಾರತದ ಆರ್ಥಿಕತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನು ಓದಿ: 5 ವರ್ಷದಲ್ಲಿ 13.5 ಕೋಟಿ ಭಾರತೀಯರು ಬಡತನದಿಂದ ಹೊರಕ್ಕೆ: ಮೋದಿ ಅವಧಿಯಲ್ಲಿ ಕ್ರಾಂತಿಕಾರಿ ಆರ್ಥಿಕತೆ ಸುಧಾರಣೆ
ಅಧಿಕ ವೇತನದ ಉದ್ಯೋಗಗಳು ಭಾರತದಲ್ಲಿ ಹೆಚ್ಚಲಿವೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಇಂತಹ ಉದ್ಯೋಗಗಳು ಹೆಚ್ಚಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿವೆ. ಆದರೆ ಬಹಳ ಕಡಿಮೆ ಇವೆ. ಹಾಗೆಯೇ ಉತ್ಪಾದನಾ ಕ್ಷೇತ್ರದಲ್ಲೂ ಇವೆ. ಈ ಅವಕಾಶಗಳು ಕೇವಲ ಮೂರರಿಂದ ಐದು ವರ್ಷ ಮಾತ್ರ ಇರುತ್ತವೆ. ಉತ್ಪಾದನಾ ವಲಯದ ಕೇಂದ್ರವಾಗಿ ಬೇರೆ ಯಾವುದಾದರೂ ಸ್ಥಳಗಳು ಅಭಿವೃದ್ಧಿ ಹೊಂದಿದರೆ ಅಧಿಕ ವೇತನದ ಉದ್ಯೋಗಗಳು ಅಲ್ಲಿಗೆ ಹೋಗುತ್ತವೆ’ ಎಂದು ಹೇಳಿದರು.
ಇದನ್ನೂ ಓದಿ: ಈ ದಶಕದಲ್ಲೇ ಭಾರತ ಉದಯೋನ್ಮುಖ ಮಾರುಕಟ್ಟೆಯಾಗಲಿದ್ಯಾ? ಜಾಗತಿಕ ಉಜ್ವಲ ತಾಣ ಎನ್ನಲು ಈ 9 ಅಂಶಗಳೇ ಸಾಕ್ಷಿ!