ಬಂಕ್, ಎಲ್ ಪಿಜಿಗೂ 10 % ಮೀಸಲಾತಿ?

By Web DeskFirst Published Jan 13, 2019, 8:02 AM IST
Highlights

ಪೆಟ್ರೋಲ್‌ ಪಂಪ್‌, ಗ್ಯಾಸ್‌ ಏಜೆನ್ಸಿ ಹಂಚಿಕೆಯಲ್ಲೂ ಶೇ.10 ಮೀಸಲು ವಿಸ್ತರಣೆ?  ಮೀಸಲು ಅಧಿಸೂಚನೆ ಪ್ರಕಟವಾದ ಬಳಿಕ ಪ್ರಸ್ತಾವನೆ ಸಲ್ಲಿಕೆ | 

ನವದೆಹಲಿ (ಜ.13): ಮೇಲ್ವರ್ಗದಲ್ಲಿನ ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇ.10ರಷ್ಟುಮೀಸಲು ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಪೆಟ್ರೋಲ್‌ ಪಂಪ್‌ಗಳು ಮತ್ತು ಎಲ್‌ಪಿಜಿ ಗ್ಯಾಸ್‌ ಏಜೆನ್ಸಿಗಳ ಹಂಚಿಕೆಗೂ ವಿಸ್ತರಿಸುವ ಸಾಧ್ಯತೆ ಇದೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಕೇಂದ್ರ ಸರ್ಕಾರದ ಮೀಸಲು ಯೋಜನೆಯನ್ನು ಪಾಲಿಸುತ್ತಿವೆ. ಹೀಗಾಗಿ ಅವುಗಳಿಗೂ ಈ ನೀತಿ ಅನ್ವಯವಾಗಲಿದೆ. ಶೇ.10 ಮೀಸಲು ಮಸೂದೆ ಕುರಿತು ಶೀಘ್ರದಲ್ಲೇ ಅಧಿಸೂಚನೆ ಪ್ರಕಟವಾಗಲಿದ್ದು, ಆ ಬಳಿಕ ಪೆಟ್ರೋಲ್‌ ಪಂಪ್‌ ಹಾಗೂ ಗ್ಯಾಸ್‌ ಏಜೆನ್ಸಿಗಳ ಹಂಚಿಕೆಯಲ್ಲೂ ಶೇ.10ರಷ್ಟುಮೀಸಲು ಕಲ್ಪಿಸುವ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಈ ಕುರಿತು ಪೆಟ್ರೋಲಿಯಂ ಸಚಿವಾಲಯದ ಹಿರಿಯ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌, ಹಿಂದುಸ್ತಾನ್‌ ಪೆಟ್ರೋಲಿಯಂ ಮತ್ತು ಭಾರತ್‌ ಪೆಟ್ರೋಲಿಯಂ ಕಂಪನಿಗಳು ಈಗಾಗಲೇ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ನೀಡುತ್ತಿವೆ.

ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್‌ ಪಂಪ್‌ಗಳು ಮತ್ತು ಎಲ್‌ಪಿಜಿ ವಿತರಣಾ ಸಂಸ್ಥೆಗಳ ಹಂಚಿಕೆಯಲ್ಲಿ ಹಿಂದುಳಿದ ವರ್ಗಕ್ಕೆ ಮೀಸಲು ನೀಡುವ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಸದ್ಯ ಎಸ್‌/ಎಸ್‌ಟಿಗೆ ಶೇ.22.5, ಒಬಿಸಿಗೆ ಶೇ.27% ಹಾಗೂ ಸಾಮಾನ್ಯ ವರ್ಗಕ್ಕೆ ಶೇ.50ರಷ್ಟುಮೀಸಲು ಕಲ್ಪಿಸಲಾಗುತ್ತಿದೆ.

 

click me!