ಜಿಯೋದಿಂದ 200 ರೂ.ಗೂ ಕಡಿಮೆ ಬೆಲೆಯ 3 ಸೂಪರ್ ಹಿಟ್ ರೀಚಾರ್ಜ್‌ಗಳು

ರಿಲಯನ್ಸ್ ಜಿಯೋ 200 ರೂಪಾಯಿಗಿಂತ ಕಡಿಮೆ ಬೆಲೆಯ ಮೂರು ಸೂಪರ್ ಹಿಟ್ ಪ್ರಿಪೇಯ್ಡ್ ಪ್ಲಾನ್‌ಗಳನ್ನು ನೀಡುತ್ತಿದೆ. ಈ ಪ್ಲಾನ್‌ಗಳು ಅನ್‌ಲಿಮಿಟೆಡ್ ಕಾಲಿಂಗ್, ಡೇಟಾ ಮತ್ತು SMS ಪ್ರಯೋಜನಗಳನ್ನು ಒಳಗೊಂಡಿವೆ.

Jio 3 super hit recharge plans under Rs 200 mrq

ಮುಂಬೈ: ದೇಶದ ನಂಬರ್ ಒನ್ ಖಾಸಗಿ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹಲವು ಪ್ರಿಪೇಯ್ಡ್ ಪ್ಲಾನ್‌ಗಳನ್ನು ನೀಡುತ್ತಿದೆ. ಬೆಲೆ ಏರಿಕೆಯಿಂದಾಗಿ ಕಳೆದುಕೊಂಡಿರು ಗ್ರಾಹಕರನ್ನು ಮತ್ತೆ ವಾಪಸ್  ಕರೆತರಲು ಮತ್ತು ಇರೋ ಬಳಕೆದಾರರನ್ನು ಉಳಿಸಿಕೊಳ್ಳಲು ರಿಲಯನ್ಸ್ ಜಿಯೋ ಕೈಗೆಟುಕುವ ದರ ಮತ್ತು ಹೆಚ್ಚು ವ್ಯಾಲಿಡಿಟಿಯ ಪ್ಲಾನ್‌ಗಳನ್ನು ನೀಡುತ್ತಿದೆ. ಈ ಲೇಖನದಲ್ಲಿ ಜಿಯೋ ನೀಡುತ್ತಿರುವ 200 ರೂಪಾಯಿಗೂ ಕಡಿಮೆ ಬೆಲೆಯ ಮೂರು ಸೂಪರ್ ಹಿಟ್ ಪ್ರಿಪೇಯ್ಡ್ ಪ್ಲಾನ್‌ಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಈ  ಮೂರು ಪ್ಲಾನ್‌ಗಳ ಬೆಲೆ, ಬೆನೆಫಿಟ್ ಮತ್ತು ಬೆಲೆ ಎಷ್ಟಿದೆ ಎಂದು  ನೋಡೋಣ ಬನ್ನಿ.

1.Jio 189 Plan
ಗ್ರಾಹಕರು 189 ರೂಪಾಯಿ ರೀಚಾರ್ಜ್ ಮಾಡಿಕೊಂಡ್ರೆ ಈ ಪ್ಲಾನ್ ಆಕ್ಟಿವೇಟದ್ ಆಗುತ್ತದೆ. ಇದು 14 ಅಲ್ಲ, ಬರೋಬ್ಬರಿ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ  ಪ್ಲಾನ್‌ನಲ್ಲಿ ಯಾವುದೇ ನೆಟ್‌ವರ್ಕ್‌ಗೆ  ಅನ್‌ಲಿಮಿಟೆಡ್ ಕಾಲಿಂಗ್ ಮಾಡಬಹುದು. ಇದರ ಜೊತೆಯಲ್ಲಿ 2GB ಡೇಟಾ  ಮತ್ತು  300 ಎಸ್‌ಎಂಎಸ್‌ಗಳ ಆಯ್ಕೆಯೂ ಸಿಗುತ್ತದೆ.

Latest Videos

2.Jio 199 Plan
ಮೇಲಿನ ಪ್ರಿಪೇಯ್ಡ್ ಪ್ಲಾನ್‌ಗಿಂತ ಕೇವಲ 10 ರೂಪಾಯಿ ಅಧಿಕವಾಗಿದೆ. ಜಿಯೋ ಬಳಕೆದಾರರು 199 ರೂಪಾಯಿ ರೀಚಾರ್ಜ್ ಮಾಡಿಕೊಂಡ್ರೆ 18 ದಿನಗಳವರೆಗೆ ಪ್ರತಿದಿನ ಕನಿಷ್ಠ 1.5GB ಡೇಟಾ ಸಿಗುತ್ತದೆ. ಇದರ ಜೊತೆಯಲ್ಲಿ ಉಚಿವಾಗಿ ಪ್ರತಿದಿನ 100  ಎಸ್‌ಎಂಎಸ್‌ ಕಳುಹಿಸಬಹುದು. ಹಾಗೆಯೇ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕಾಲ್ ಮಾಡಬಹುದು. 

3.Jio 198 Plan
ಮೇಲಿನ ಪ್ರಿಪೇಯ್ಡ್ ಪ್ಲಾನ್‌ನಲ್ಲಿ  ಪ್ರತಿದಿನ 2ಜಿಬಿ ಹೈಸ್ಪೀಡ್  ಡೇಟಾ ಸಿಗುತ್ತದೆ. ಇದು ಪ್ರಿಪೇಯ್ಡ್  ಬಳಕೆದಾರರಿಗೆ ಮಾತ್ರ ಸೀಮಿತವಾಗಿದ್ದು, ಡೇಟಾ ಜೊತೆಯಲ್ಲಿ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತವಾಗಿ ಕರೆ ಮಾಡಬಹುದು. ಈ ಯೋಜನೆ ಕೇವಲ 14 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದರೊಂದಿಗೆ ಪ್ರತಿದಿನ ಉಚಿತವಾಗಿ 100 ಎಸ್‌ಎಂಎಸ್ ಕಳುಹಿಸಬಹುದಾಗಿದೆ. ಈ ಪ್ಲಾನ್ ಜೊತೆಯಲ್ಲಿ 5G ಡೇಟಾ ಸಹ ನೀಡಲಾಗುತ್ತದೆ. ಹೆಚ್ಚುವರಿಯಾಗಿ ಜಿಯೋ ಕ್ಲೌಡ್, ಜಿಯೋ ಟಿವಿಯ ಫ್ರೀ ಆಕ್ಸೆಸ್ ಸಿಗುತ್ತದೆ.

ಇದನ್ನೂ ಓದಿ: ಜಿಯೋ ಧಮಾಕ, ಕೇವಲ ₹100ಕ್ಕೆ 5ಜಿಬಿ ಡೇಟಾ,90 ದಿನ ಜಿಯೋ ಹಾಟ್‌ಸ್ಟಾರ್ ಸಬ್‌ಸ್ಕ್ರಿಪ್ಶನ್ ಉಚಿತ

JioHotstar ಮೆಂಬರ್‌ಶಿಪ್‌ 
ಜಿಯೋ ಬಳಕೆದಾರರು 299 ರೂಪಾಯಿ ರೀಚಾರ್ಜ್ ಮಾಡಿಕೊಳ್ಳಬೇಕು. ಹಾಲಿ ಅಥವಾ ಹೊಸ ಬಳಕೆದಾರರು ಇದೇ ಪ್ಲಾನ್ ಅಥವಾ ಇದಕ್ಕಿಂತ ಹೆಚ್ಚಿನ ಬೆಲೆಯ ಯಾವುದೇ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬೇಕು. ಈ ರೀಚಾರ್ಜ್ ಮಾಡಿಕೊಂಡ ಗ್ರಾಹಕರಿಗೆ 90 ದಿನಗಳವರೆಗೆ JioHotstar ಸಬ್‌ಸ್ಕ್ರಿಪ್ಷನ್ 4Kನಲ್ಲಿ ಲಭ್ಯವಾಗುತ್ತದೆ.  ಈ ಸಬ್‌ಸ್ಕ್ರಿಪ್ಷನ್ ಪಡೆಯುವ ಮೂಲಕ ಎಲ್ಲಾ ಐಪಿಎಲ್ ಪಂದ್ಯಗಳನ್ನು ಆನಂದಿಸಬಹುದಾಗಿದೆ. ಈ ಪ್ಲಾನ್ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: IPL ಫ್ಯಾನ್ಸ್‌ಗಾಗಿ Jioದಿಂದ ಅನ್‌ಲಿಮಿಟೆಡ್‌ ಪ್ಲಾನ್; JioHotstar ಮೆಂಬರ್‌ಶಿಪ್‌ ಜೊತೆ ಮತ್ತಷ್ಟು ಮಗದಷ್ಟು ಆಫರ್

vuukle one pixel image
click me!