ನೀವೂ ವೇಟಿಂಗ್ ಲಿಸ್ಟ್ ಪ್ಯಾಸೆಂಜರಾ?: ಸ್ವೀಟ್ ಸುದ್ದಿ ಓದಿ!

Published : Dec 01, 2018, 07:34 PM IST
ನೀವೂ ವೇಟಿಂಗ್ ಲಿಸ್ಟ್ ಪ್ಯಾಸೆಂಜರಾ?: ಸ್ವೀಟ್ ಸುದ್ದಿ ಓದಿ!

ಸಾರಾಂಶ

ಇನ್ಮುಂದೆ ರೈಲಿನಲ್ಲಿ ಇರಲ್ಲ ವೇಟಿಂಗ್ ಲಿಸ್ಟ್ ಗೋಳು! ವೇಟಿಂಗ್ ಲಿಸ್ಟ್ ತಲೆನೋವಿಗೆ ಇತಿಶ್ರೀ ಹಾಡಲಿರುವ ರೈಲ್ವೇ ಇಲಾಖೆ! ರೈಲು ಹೊರಟ ಬಳಿಕ ಕ್ಯಾನ್ಸಲ್ ಆದ ಟಿಕೆಟ್ ಕುರಿತು ಟಿಕೆಟ್ ಪರೀಕ್ಷಕರಿಗೆ ಮಾಹಿತಿ! ರದ್ದಾದ ಟಿಕೆಟ್‌ನ್ನು ವೇಟಿಂಗ್ ಲಿಸ್ಟ್ ಪ್ರಯಾಣಿಕರಿಗೆ ತುರ್ತಾಗಿ ವರ್ಗಾವಣೆ! ಇದಕ್ಕೆಂದೇ ಎಲ್ಲಾ ಟಿಕೆಟ್ ಪರೀಕ್ಷಕರಿಗೆ ವಿಶೇಷ ಟರ್ಮಿನಲ್ ಸಾಧನ   

ನವದೆಹಲಿ(ಡಿ.01): ಭಾರತೀಯ ರೈಲ್ವೇಯ ಅತಿ ದೊಡ್ಡ ತಲೆನೋವು ಅಂದ್ರೆ ವೇಟಿಂಗ್ ಲಿಸ್ಟ್ ಪ್ರಯಾಣಿಕರಿಗೆ ಟಿಕೆಟ್ ಕನ್ಫರ್ಮ್ ಮಾಡುವುದು. ಭಾರತೀಯ ರೈಲು ಪ್ರಯಾಣಿಕರ ದೊಡ್ಡ ತಲೆನೋವು ಅಂದ್ರೆ ವೇಟಿಂಗ್ ಲಿಸ್ಟ್ ಟಿಕೆಟ್ ನ್ನು ಕನ್ಫರ್ಮ್ ಟಿಕೆಟ್ ಆಗಿ ಪರಿವರ್ತಿಸಿಕೊಳ್ಳುವುದು.

ಈ ಎರಡೂ ತಲೆನೋವುಗಳಿಗೆ ಭಾರತೀಯ ರೈಲ್ವೇ ಇಲಾಖೆ ಇತಿಶ್ರೀ ಹಾಡಲು ಭರ್ಜರಿ ಪ್ಲ್ಯಾನ್ ಮಾಡಿದೆ. ಹೌದು, ವೇಟಿಂಗ್ ಲಿಸ್ಟ್ ತಲೆನೋವನ್ನು ಕೊನೆಗಾಣಿಸಲು ನಿರ್ಧರಿಸಿರುವ ರೈಲ್ವೇ ಇಲಾಖೆ, ಇದಕ್ಕಾಗಿ ಹೊಸ ಯೋಜನೆ ಸಿದ್ಧಪಡಿಸಿದೆ.

ಅದರಂತೆ ಇನ್ನು ಮುಂದೆ ನಿಗದಿತ ಸಮಯದ ಬಳಿಕ ರೈಲು ಹೊರಟ ನಂತರ ಪ್ರಯಾಣಿಕರು ಟಿಕೆಟ್ ಕ್ಯಾನ್ಸಲ್ ಮಾಡಿದರೆ, ಕ್ಯಾನ್ಸಲ್ ಆದ ಟಿಕೆಟ್ ಕುರಿತು ನೇರವಾಗಿ ಟಿಕೆಟ್ ಪರೀಕ್ಷಕರಿಗೆ ಮಾಹಿತಿ ರವಾನೆಯಾಗಲಿದೆ.

ಇದರಿಂದ ರೈಲು ಹೊರಟ ಬಳಿಕವೂ ಯಾವ ಟಿಕೆಟ್ ಕ್ಯಾನ್ಸಲ್ ಆಗಿದೆ ಎಂಬುದರ ಮಾಹಿತಿ ಪಡೆಯುವ ಟಿಕೆಟ್ ಪರೀಕ್ಷಕರು, ಆ ಸೀಟನ್ನು ವೇಟಿಂಗ್ ಲಿಸ್ಟ್ ನಲ್ಲಿರುವ ಪ್ರಯಾಣಿಕರಿಗೆ ತುರ್ತಾಗಿ ವರ್ಗಾಯಿಸಬಹುದಾಗಿದೆ.

ಇದಕ್ಕಾಗಿ ಟಿಕೆಟ್ ಪರೀಕ್ಷಕರಿಗೆ ವಿಶೇಷ ಟರ್ಮಿನಲ್ ಸಾಧನಗಳನ್ನು ರೈಲ್ವೇ ಇಲಾಖೆ ಕೊಡಮಾಡಲಿದ್ದು, ಈ ಯಂತ್ರದ ಸಹಾಯದಿಂದ ರದ್ದಾದ ಟಿಕೆಟ್ ಮಾಹಿತಿ ಮತ್ತು ಅದನ್ನು ವೇಟಿಂಗ್ ಲಿಸ್ಟ್ ಪ್ರಯಾಣಿಕರಿಗೆ ವರ್ಗಾಯಿಸುವ ಪ್ರಕ್ರಿಯೆ ಸುಲಭವಾಗಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅಮೆರಿಕಾದ ಬಳಿಕ ಈಗ ಮೆಕ್ಸಿಕೋದಿಂದಲೂ ಭಾರತದ ಮೇಲೆ ಶೇ.50 ಸುಂಕ: ಜನವರಿ 1ರಿಂದಲೇ ಹೊಸ ತೆರಿಗೆ ಜಾರಿ
ಬೆಂಗಳೂರಿನಲ್ಲಿ ಊಬರ್‌ ಕ್ರಾಂತಿಯ ಹೆಜ್ಜೆ, B2B ಲಾಜಿಸ್ಟಿಕ್ಸ್, ಮೆಟ್ರೋ ಟಿಕೆಟ್‌ ಕೂಡ ಲಭ್ಯ!