
ನವದೆಹಲಿ(ಡಿ.1): ವರ್ಷಾಂತ್ಯಕ್ಕೆ ಕೇಂದ್ರ ಸರ್ಕಾರ ವಾಹನ ಸವಾರರಿಗೆ ಭಾರೀ ಸಿಹಿ ಸುದ್ದಿ ನೀಡುವ ಸಂಭವ ಹೆಚ್ಚಿದೆ. ಕಾರಣ ಸತತವಾಗಿ ಇಳಿಕೆಯತ್ತ ಮುಖ ಮಾಡಿರುವ ಪೆಟ್ರೋಲ್, ಡೀಸೆಲ್ ಬೆಲೆ, ಡಿಸೆಂಬರ್‌ನಲ್ಲಿ ಗಮನಾರ್ಹ ಇಳಿಕೆ ಕಾಣಲಿದೆ.
ಈ ಕುರಿತು ಮಾಹಿತಿ ನೀಡಿರುವ ಆಟೋಮೊಬೈಲ್ ಅಸೋಸಿಯೇಷನ್, ಸದ್ಯ ನಿತ್ಯವೂ ಇಳಿಕೆಯಾಗುತ್ತಿರುವ ಪೆಟ್ರೋಲ್, ಡೀಸೆಲ್ ದರದತ್ತ ಗಮನಹರಿಸಿದರೆ ಡಿಸೆಂಬರ್ ತಿಂಗಳಲ್ಲಿ ದರಗಳಲ್ಲಿ ಗಮನಾರ್ಹ ಇಳಿಕೆ ಕಾಣಲಿದೆ ಎಂದು ಅಂದಾಜಿಸಲಾಗಿದೆ.
ಸೆಂಟ್ರಲ್ ಎನರ್ಜಿ ಫಂಡ್ ಬಿಡುಗಡೆ ಮಾಡಿದ ಮಾಸಾಂತ್ಯದ ಇಂಧನ ದರ ಪಟ್ಟಿಯನ್ನು ಆಧಾರವಾಗಿಟ್ಟುಕೊಂಡು ಅಟೋಮೊಬೈಲ್ ಅಸೋಸಿಯೇಷನ್ ಈ ಅಂದಾಜು ಮಾಡಿದೆ.
ಕಳೆದ ಎಂಟು ತಿಂಗಳಿಂದ ಏರಿಕೆಯಾಗುತ್ತಲೇ ಇದ್ದ ತೈಲದರ ನವೆಂಬರ್ ತಿಂಗಳಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯನ್ನು ಕಂಡಿತ್ತು. ಇಳಿಕೆ ಪ್ರಮಾಣ ಹೀಗೇ ಮುಂದುವರಿದಲ್ಲಿ ಪೆಟ್ರೋಲ್ ದರ 1.85 ರೂ. ಹಾಗೂ ಡೀಸೆಲ್ 1.40 ರೂ. ಗೆ ಇಳಿಕೆಯಾಗುವ ಸಂಭವ ಇದೆ ಎಂದು ಅಂದಾಜಿಸಲಾಗಿದೆ.
ಪೆಟ್ರೋಲ್ 8, ಡೀಸೆಲ್ 3 ತಿಂಗಳ ಕನಿಷ್ಟ ಮಟ್ಟಕ್ಕೆ: ಚಿಲ್ರೆ ಯಾವ ಲೆಕ್ಕಕ್ಕೆ?
ಪೆಟ್ರೋಲ್ ಬೆಲೆಯಲ್ಲಿ ಭಾರೀ ಇಳಿಕೆ: ಈ ವರ್ಷದ ಕನಿಷ್ಠ ದರ ದಾಖಲು!
ಪೆಟ್ರೋಲ್ ದರ ಮಾಡ್ಬೇಡಿ ಗೆಸ್: ಮಾಡಿ ಜಸ್ಟ್ ಒಂದು SMS!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.