ನವದೆಹಲಿ: ಟ್ವೀಟರ್ ತನ್ನ ‘ಬ್ಲೂಟಿಕ್’ ನೀತಿಯಲ್ಲಿ ಈ ಹಿಂದೆ ಘೋಷಿಸಿದಂತೆ ಬದಲಾವಣೆ ತಂದಿದ್ದು 3 ಬಣ್ಣಗಳ ಟಿಕ್ ನೀಡಲು ಆರಂಭಿಸಿದೆ. ಸರ್ಕಾರಕ್ಕೆ ಸಂಬಂಧಿಸಿದ ವ್ಯಕ್ತಿಗಳ ಖಾತೆಗಳಿಗೆ ‘ಬೂದು ಬಣ್ಣ’ದ ಟಿಕ್ ನೀಡಲಾಗಿದೆ. ಇನ್ನು ಖಾಸಗಿ ಕಂಪನಿಗಳ ಅಧಿಕೃತ ಖಾತೆಗೆ ‘ಗೋಲ್ಡನ್’ (ಚಿನ್ನದ ಬಣ್ಣದ) ಟಿಕ್ ನೀಡಲಾಗಿದೆ. ಇದೇ ವೇಳೆ, ಈಗಾಗಲೇ ಇದ್ದ ಇತರ ಖಾಸಗಿ ವ್ಯಕ್ತಿಗಳ ಅಧಿಕೃತ ಖಾತೆಗಳಿಗೆ ‘ಬ್ಲೂಟಿಕ್’ ಮುಂದುವರಿಸಿವೆ. ಈ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರ ಖಾತೆಗೆ ಗ್ರೇ ಟಿಕ್ ಬಂದಿದೆ. ಖಾಸಗಿ ಕಂಪನಿಗಳು, ಮಾಧ್ಯಮಗಳಿಗೆ ಗೋಲ್ಡನ್ ಟಿಕ್ ಬಂದಿದೆ. ಆದರೆ ಇದನ್ನು ಆಧರಿಸಿ ಚಂದಾ ಹಣವನ್ನೇನಾದರೂ ಹಾಕುತ್ತಾ ತಿಳಿದು ಬಂದಿಲ್ಲ.
ಕೆಲ ದಿನಗಳ ಹಿಂದೆ ಟ್ವಿಟ್ಟರ್ (Twitter) ಮಾಲೀಕ ಎಲಾನ್ ಮಸ್ಕ್ (Elon Musk) ಅವರು ತಾವು 44 ಬಿಲಿಯನ್ ಡಾಲರ್‌ಗೆ ಖರೀದಿಸಿದ ಮೈಕ್ರೋಬ್ಲಾಗಿಂಗ್ ಸೈಟ್‌ನ (Micro Blogging Site) ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೇ ಎಂದು ತಮ್ಮ ಫಾಲೋವರ್‌ಗಳನ್ನು ಸಮೀಕ್ಷೆಯಲ್ಲಿ (Poll) ಕೇಳಿ ಟ್ವೀಟ್ ಮಾಡಿದ್ದರು. ಈ ಪೈಕಿ, ಹೆಚ್ಚಿನ ಬಳಕೆದಾರರು ಈ ಕ್ರಮದ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಸಮೀಕ್ಷೆಯ ಫಲಿತಾಂಶಗಳು ತೋರಿಸಿವೆ. ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದ ಸಮೀಕ್ಷೆಯಲ್ಲಿ ಒಟ್ಟು 17 ಮಿಲಿಯನ್ ಮತಗಳು (Votes) ಚಲಾವಣೆಯಾಗಿವೆ. ಇದರಲ್ಲಿ, ಎಲಾನ್ ಮಸ್ಕ್ ಅವರು ಅಧಿಕಾರ ವಹಿಸಿಕೊಂಡ 2 ತಿಂಗಳೊಳಗೆ ಬಿಲಿಯನೇರ್‌ಗೆ ಹಿನ್ನೆಡೆಯಾಗಿದ್ದು, ಸಾಮಾಜಿಕ ಮಾಧ್ಯಮ ವೇದಿಕೆಯ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯಿಂದ ಎಲಾನ್ ಮಸ್ಕ್ ಕೆಳಗಿಳಿಯುವಂತೆ ಅನೇಕ ಟ್ವಿಟ್ಟರ್ ಬಳಕೆದಾರರು ಮತ ಹಾಕಿದ್ದಾರೆ.
Twitter ಮುಖ್ಯಸ್ಥ ಸ್ಥಾನಕ್ಕೆ ಗುಡ್‌ಬೈ ಹೇಳ್ತಾರಾ ಎಲಾನ್ ಮಸ್ಕ್..? ಜನರ ಒಲವು ಹೀಗಿದೆ ನೋಡಿ..
ಭಾನುವಾರ ಸಂಜೆ ಈ ಸಮೀಕ್ಷೆ ಪ್ರಾರಂಭವಾಗಿದ್ದು, ಈ ಪೋಲ್ ಪ್ರಕಾರ 57.5% ರಷ್ಟು ಮತಗಳು ಎಲಾನ್ ತಮ್ಮ ಟ್ವಿಟ್ಟರ್ ಹುದ್ದೆಯಿಂದ ಕೆಳಗಿಳಿಯುವಂತೆ ಮತ ಚಲಾಯಿಸಿದ್ದಾರೆ. ಇನ್ನು, 42.5% ರಷ್ಟು ಜನರು ಟ್ವಿಟ್ಟರ್ ಮುಖ್ಯಸ್ಥ ಸ್ಥಾನದಿಂದ ಎಲೋನ್ ಮಸ್ಕ್ ಕೆಳಗಿಳಿಯುವುದನ್ನು ವಿರೋಧಿಸಿದ್ದಾರೆ. 17.5 ಮಿಲಿಯನ್ ಅಂದರೆ 1.75 ಕೋಟಿ ಜನರು ಈ ಮತದಾನದಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.
ಸಮೀಕ್ಷೆಯ ಫಲಿತಾಂಶಗಳಿಗೆ ನಾನು ಬದ್ಧನಾಗಿರುತ್ತೇನೆ ಎಂದು ಎಲಾನ್ ಮಸ್ಕ್ ಭಾನುವಾರ ಹೇಳಿದ್ದರು. ಆದರೆ ಫಲಿತಾಂಶ ಬಂದ ಬಳಿಕ ಅವರು ಈವರೆಗೆ ಯಾವುದೇ ಟ್ವೀಟ್ ಮಾಡಿಲ್ಲ. ಅಲ್ಲದೆ, ಫಲಿತಾಂಶ ತಮ್ಮ ವಿರುದ್ಧವಾಗಿ ಬಂದರೆ, ತಾನು ಯಾವಾಗ ಕೆಳಗಿಳಿಯುತ್ತೇನೆ ಎಂಬುದರ ಕುರಿತು ವಿವರಗಳನ್ನು ಸಹ ಎಲಾನ್ ಮಸ್ಕ್ ಈವರೆಗೆ ನೀಡಿಲ್ಲ. ಆದರೆ, ಅಧಿಕಾರವನ್ನು ಬಯಸುವವರು ಕನಿಷ್ಠ ಅರ್ಹರು ಎಂಬ ಮಾರ್ಮಿಕ ಟ್ವೀಟ್ ಅನ್ನು ಸಹ ಅವರು ಮಾಡಿದ್ದರು. ಈ ಮಧ್ಯೆ, ಪ್ರೀಮಾರ್ಕೆಟ್ ಟ್ರೇಡಿಂಗ್‌ನಲ್ಲಿ ಎಲಾನ್ ಮಸ್ಕ್ ಒಡೆತನದ ಎಲೆಕ್ಟ್ರಿಕ್-ಕಾರು ತಯಾರಕ ಟೆಸ್ಲಾ ಷೇರುಗಳು ನಷ್ಟ ಸುಮಾರು 5% ಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ.
ಟ್ವಿಟ್ಟರ್ ಬ್ಲೂಟಿಕ್ ಸೇವೆ ಜಾರಿ: ಟ್ವೀಟ್ ಪದಗಳ ಮಿತಿ 4000ಕ್ಕೆ ಹೆಚ್ಚಳ..!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.