Gold, Silver Price:ಚಿನ್ನ ಖರೀದಿಸೋರಿಗೆ ಕಹಿಸುದ್ದಿ, ಬೆಂಗಳೂರಿನಲ್ಲಿ ಇಂದು ಚಿನ್ನ, ಬೆಳ್ಳಿ ದರ ಏರಿಕೆ

Suvarna News   | Asianet News
Published : Dec 08, 2021, 11:54 AM ISTUpdated : Dec 08, 2021, 11:56 AM IST
Gold, Silver Price:ಚಿನ್ನ ಖರೀದಿಸೋರಿಗೆ ಕಹಿಸುದ್ದಿ, ಬೆಂಗಳೂರಿನಲ್ಲಿ ಇಂದು ಚಿನ್ನ, ಬೆಳ್ಳಿ ದರ ಏರಿಕೆ

ಸಾರಾಂಶ

ಒಮಿಕ್ರಾನ್ ಭೀತಿ ಹೆಚ್ಚುತ್ತಿರೋ ಬೆನ್ನಲ್ಲೇ ಇಂದು ಬೆಂಗಳೂರಿನಲ್ಲಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಏರಿಕೆಯಾಗಿದೆ. ಆದ್ರೆ ದೇಶದ ಕೆಲವು ನಗರಗಳಲ್ಲಿ ಚಿನ್ನದ ದರ ಸ್ಥಿರವಾಗಿದ್ದು, ಬೆಳ್ಳಿ ಬೆಲೆಯಲ್ಲಿ ಮಾತ್ರ ಏರಿಕೆಯಾಗಿದೆ. 

ಬೆಂಗಳೂ:ರು (ಡಿ.8):  ಚಿನ್ನ (Gold),ಬೆಳ್ಳಿ (Silver)ಖರೀದಿಸೋ ಮುನ್ನ ಪ್ರತಿಯೊಬ್ಬರೂ ಸಾಕಷ್ಟು ಯೋಚಿಸುತ್ತಾರೆ. ಅದಕ್ಕಾಗಿಯೇ ವರ್ಷಗಳಿಂದ ಹಣವನ್ನು ಉಳಿತಾಯ (Saving)ಮಾಡಿಕೊಂಡು ಬಂದಿರುತ್ತಾರೆ. ಅನಿವಾರ್ಯ ಸಂದರ್ಭಗಳನ್ನು ಹೊರುಪಡಿಸಿದ್ರೆ ಬೇರೆಲ್ಲ ಸಮಯದಲ್ಲೂ ಮಾರುಕಟ್ಟೆಯಲ್ಲಿನ ಚಿನ್ನ, ಬೆಳ್ಳಿ ದರವನ್ನು(Price) ಕೆಲವು ದಿನಗಳ ಕಾಲ ಪರಿಶೀಲಿಸಿ ದರ ಕಡಿಮೆಯಾದ ಸಮಯದಲ್ಲಿ ಖರೀದಿಗೆ(Purchase)ಮುಂದಾಗುತ್ತಾರೆ. ಇನ್ನು ಚಿನ್ನ ಹಾಗೂ ಬೆಳ್ಳಿಯಲ್ಲಿ  ಹೂಡಿಕೆ(Invest) ಮಾಡಲು ಬಯಸೋರು ಕೂಡ ಕೆಲವು ದಿನಗಳ ಕಾಲ ಮಾರುಕಟ್ಟೆ(Market)ದರ ಪರಿಶೀಲಿಸಿ ಸೂಕ್ತ ಸಮಯದಲ್ಲಿ ಹೂಡಿಕೆ ಮಾಡುತ್ತಾರೆ.  ಈ ಎಲ್ಲ ಕಾರಣಗಳಿಂದ ಪ್ರತಿದಿನ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಎಂಬುದನ್ನು ಪರಿಶೀಲಿಸೋ ಅಭ್ಯಾಸವನ್ನು ಬಹುತೇಕರು ಹೊಂದಿರುತ್ತಾರೆ. ಕೊರೋನಾ (Corona)ಬಳಿಕ ಏರಿಕೆ ಕಂಡಿದ್ದ ಚಿನ್ನ ಹಾಗೂ ಬೆಳ್ಳಿ ದರ ಈ ವರ್ಷದ ಪ್ರಾರಂಭದಲ್ಲಿ ಇಳಿಕೆ ದಾಖಲಿಸಿತ್ತು. ಕಳೆದ ಕೆಲವು ದಿನಗಳಿಂದ ಬೆಳ್ಳಿ ದರ ಕೊಂಚ ಮಟ್ಟಿಗೆ ಹಾವೇಣಿ ಆಟವಾಡಿದರೂ ಚಿನ್ನದ ಬೆಲೆ ಮಾತ್ರ ಸ್ಥಿರತೆ ಕಾಯ್ದುಕೊಂಡಿತ್ತು.  ಒಮಿಕ್ರಾನ್ (Omicron) ವೈರಸ್ (Virus)ಹಾವಳಿ ಹೆಚ್ಚುತ್ತಿರೋ ಬೆನ್ನಲ್ಲೇ ಚಿನ್ನ ಹಾಗೂ ಬೆಳ್ಳಿ ದರ ಏರಿಕೆಯಾಗಬಹುದೆಂಬ ನಿರೀಕ್ಷೆಯಿತ್ತು. ಇಂದಿನ (ಡಿ.8) ಚಿನ್ನ ಹಾಗೂ ಬೆಳ್ಳಿ ದರ ಗಮನಿಸಿದ್ರೆ  ಈ ನಿರೀಕ್ಷೆ ನಿಜವಾಗುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ.  ಇಂದು ಬೆಂಗಳೂರಿನಲ್ಲಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಏರಿಕೆ ಕಂಡುಬಂದಿದೆ.  ಆದ್ರೆ  ದೇಶದ ಇತರ ಕೆಲವು ನಗರಗಳಲ್ಲಿ ಚಿನ್ನದ ದರ ಇಂದು ಸ್ಥಿರವಾಗಿದ್ದು, ಬೆಳ್ಳಿ ಬೆಲೆಯಲ್ಲಿ ಮಾತ್ರ ಏರಿಕೆ ಕಂಡುಬಂದಿದೆ. ದೇಶದ ಪ್ರಮುಖ ನಗರಗಳಲ್ಲಿ ಇಂದು  (ಡಿ.8) ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ?

ಬೆಂಗಳೂರಿನಲ್ಲಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಇಂದು ಏರಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 44,760ರೂ.ಇದ್ದು, ಇಂದು 1900ರೂ. ಏರಿಕೆ ಕಂಡು 44,950ರೂ. ತಲುಪಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 48,830 ರೂ.ಇದ್ದು,ಇಂದು 210ರೂ. ಏರಿಕೆಯಾಗಿ 49,040ರೂ. ಆಗಿದೆ.  ಬೆಳ್ಳಿ ದರದಲ್ಲಿಇಂದು ಗಮನಾರ್ಹ ಏರಿಕೆಯಾಗಿದೆ. ಒಂದು ಕೆ.ಜಿ. ಬೆಳ್ಳಿ ದರದಲ್ಲಿ 700ರೂ. ಏರಿಕೆ ಕಂಡುಬಂದಿದೆ. ಒಂದು ಕೆ.ಜಿ.ಬೆಳ್ಳಿಗೆ ನಿನ್ನೆ 61,200ರೂ.ಇತ್ತು.ಆದ್ರೆ ಇಂದು 61,900ರೂ.ಗೆ ಏರಿಕೆಯಾಗಿದೆ. 

ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಬೆಲೆ ಇಳಿಕೆಯಾಗಿದೆಯಾ? ರಾಜ್ಯದ ಪ್ರಮುಖ ನಗರಗಳಲ್ಲಿ ಇಂಧನ ದರ ಎಷ್ಟಿದೆ?

ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ ಚಿನ್ನದ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 46,910ರೂ.ಆಗಿದ್ದು,ನಿನ್ನೆ ಕೂಡ ಅಷ್ಟೇ ಇತ್ತು. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ ಯಾವುದೇ ಬದಲಾವಣೆಯಾಗಿಲ್ಲ. ನಿನ್ನೆ 51,170 ರೂ. ಇತ್ತು, ಇಂದು  ಕೂಡ ಅಷ್ಟೇ ಇದೆ. ಬೆಳ್ಳಿ ದರದಲ್ಲಿ ಮಾತ್ರ ಇಂದು 700ರೂ. ಏರಿಕೆಯಾಗಿದೆ. ನಿನ್ನೆಒಂದು ಕೆ.ಜಿ.ಬೆಳ್ಳಿಗೆ 61,200ರೂ.ಇತ್ತು.ಆದ್ರೆ ಇಂದು 61,900ರೂ. ಆಗಿದೆ. 

ಮುಂಬೈನಲ್ಲಿಎಷ್ಟಿದೆ ದರ?
ಮುಂಬೈನಲ್ಲಿ ಚಿನ್ನದ ದರದಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ.  22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 46,820ರೂ.ಇದ್ದು,ಇಂದು ಕೂಡ ಅಷ್ಟೇ ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ47,820ರೂ.ಇತ್ತು, ಇಂದು ಕೂಡ ಯಾವುದೇ ಬದಲಾವಣೆಯಾಗಿಲ್ಲ. ಬೆಳ್ಳಿ ದರದಲ್ಲಿ ಮಾತ್ರ ಇಂದು ಏರಿಕೆಯಾಗಿದೆ.  ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 61,200ರೂ.ಇತ್ತು.ಆದ್ರೆ ಇಂದು 61,900ರೂ. ಆಗಿದೆ. ಅಂದ್ರೆ ನಿನ್ನೆಗಿಂತ ಇಂದು700 ರೂ. ಏರಿಕೆಯಾಗಿದೆ.

Billionaires Wealth: ಕೊರೋನಾ ಪಿಡುಗಿದ್ದರೂ ಧನಿಕರ ಸಂಪತ್ತು ದಾಖಲೆ ಏರಿಕೆ!

ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ ಇಂದು ಚಿನ್ನದ ದರದಲ್ಲಿ ಏರಿಕೆಯಾಗಿದೆ.  22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು  45,220ರೂ.ಇದೆ. ನಿನ್ನೆ 45,000ರೂ.ಇತ್ತು. ಅಂದ್ರೆ ನಿನ್ನೆಗಿಂತ ಇಂದು 220ರೂ. ಏರಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ ನಿನ್ನೆಗಿಂತ ಇಂದು 230ರೂ. ಏರಿಕೆಯಾಗಿದೆ. ನಿನ್ನೆ 49,100 ರೂ.ಇತ್ತು, ಇಂದು 49,330 ರೂ.ಇದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 65,000ರೂ.ಇದ್ದು, ಇಂದು 65,600ರೂ. ಆಗಿದೆ. ಅಂದ್ರೆ 600ರೂ. ಏರಿಕೆಯಾಗಿದೆ.  

"

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!