Gold Silver Price Today:ಬೆಂಗಳೂರಲ್ಲಿ ಚಿನ್ನದ ದರ ಸ್ಥಿರ, ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ

By Suvarna NewsFirst Published Aug 18, 2022, 11:28 AM IST
Highlights

ಚಿನ್ನ ಹಾಗೂ ಬೆಳ್ಳಿ ಖರೀದಿಸೋರಿಗೆ ಇಂದು ಶುಭದಿನ. ಬೆಂಗಳೂರಿನಲ್ಲಿ ಚಿನ್ನದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದ್ದರೆ, ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಹಾಗಾದ್ರೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ.
 

Business Desk:ಬಹಳ ದಿನಗಳಿಂದ ಚಿನ್ನ ಹಾಗೂ ಬೆಳ್ಳಿ ಖರೀದಿಗೆ ಪ್ಲ್ಯಾನ್ ಮಾಡುತ್ತಿರೋರಿಗೆ ಶುಭ ಸುದ್ದಿ. ಕಳೆದೆರಡು ದಿನಗಳಿಂದ ಇಳಿಕೆ ಕಾಣುತ್ತಿರುವ ಚಿನ್ನದ ಬೆಲೆ ಇಂದು ಸ್ಥಿರವಾಗಿದೆ. ಇನ್ನು ಬೆಳ್ಳಿ ಬೆಲೆ ಮತ್ತೆ ಇಳಿಕೆ ಕಂಡಿದೆ. ಈ ತಿಂಗಳ ಕೊನೆಯಲ್ಲಿ ಗೌರಿ ಗಣೇಶ ಹಬ್ಬ ಇರುವ ಕಾರಣ ಚಿನ್ನ ಹಾಗೂ ಬೆಳ್ಳಿಯ ಆಭರಣ, ವಸ್ತುಗಳನ್ನು ಖರೀದಿಸುವ ಯೋಚನೆಯಲ್ಲಿರೋರು ಇಂದು ಅದನ್ನು ಕಾರ್ಯರೂಪಕ್ಕೆ ತರಬಹುದು. ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಏರಿಳಿತ ಸಾಮಾನ್ಯ. ಇಂದು ಬೆಲೆ ಇಳಿಕೆಯಾಗಿದೆ ಎಂದ ಮಾತ್ರಕ್ಕೆ ನಾಳೆ ಕೂಡ ಬೆಲೆ ಇಳಿಕೆಯಾಗಬಹುದು ಎಂದು ಯೋಚಿಸಲು ಸಾಧ್ಯವಿಲ್ಲ. ಹೀಗಾಗಿ ಯಾವಾಗ ಚಿನ್ನ ಹಾಗೂ ಬೆಳ್ಳಿ ಬೆಲೆ ತಗ್ಗುತ್ತದೋ ಆಗ ಖರೀದಿಸೋದು ಉತ್ತಮ. ಚಿನ್ನದಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಮೋಸವಂತೂ ಆಗೋದಿಲ್ಲ. ಚಿನ್ನ ಹಾಗೂ ಬೆಳ್ಳಿ ಒಡವೆ ಅಥವಾ ವಸ್ತುಗಳು ಕಷ್ಟಕಾಲದಲ್ಲಿ ನೆರವಿಗೆ ಬರುತ್ತವೆ ಕೂಡ. ಹಾಗಾಗಿ ಚಿನ್ನ ಹಾಗೂ ಬೆಳ್ಳಿ ಮೇಲಿನ ಹೂಡಿಕೆ ವ್ಯರ್ಥ ಎಂದು ಭಾವಿಸಬೇಡಿ. ಈಗಂತೂ ಚಿನ್ನ ಹಾಗೂ ಬೆಳ್ಳಿ ಎರಡೂ ಇಳಿಕೆಯ ಹಾದಿ ಹಿಡಿದಿವೆ, ಹೀಗಾಗಿ ಖರೀದಿ ಬಗ್ಗೆ ಯೋಚಿಸೋದು ಉತ್ತಮ. ಹಾಗಾದ್ರೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಹೇಗಿದೆ? ಇಲ್ಲಿದೆ ಮಾಹಿತಿ.

ಒಂದು ಗ್ರಾಂ ಚಿನ್ನ (1GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ.4,795
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ.5,231

ಎಂಟು ಗ್ರಾಂ ಚಿನ್ನ (8GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 38,360
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,848

ಹತ್ತು ಗ್ರಾಂ ಚಿನ್ನ (10GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 47,950
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 52,310

ನೂರು ಗ್ರಾಂ ಚಿನ್ನ (100GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,79,500
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,23,100

ಮ್ಯಾಂಚೆಸ್ಟರ್ ಯುನೈಟೆಡ್ ಖರೀದಿಸುತ್ತೇನೆ ಎಂದಿದ್ದು ತಮಾಷೆಗೆ: ಎಲಾನ್ ಮಸ್ಕ್

ಬೆಂಗಳೂರು ಹಾಗೂ ಇತರೆಡೆ ಇಂದಿನ ಚಿನ್ನದ ದರ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ.47,950 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 48,380, ರೂ. 47,900, ರೂ.47,900, ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ  48,050ರೂ. ಆಗಿದೆ. 

ಇಂದಿನ ಬೆಳ್ಳಿ ದರ
ನಿನ್ನೆಗೆ ಹೋಲಿಸಿದರೆ ಇಂದು ಬೆಳ್ಳಿ ದರ ಕೆಜಿಗೆ 900ರೂ. ಇಳಿಕೆಯಾಗಿದೆ. ನಿನ್ನೆ 1ಕೆಜಿ ಬೆಳ್ಳಿಗೆ 57,600ರೂ. ಇತ್ತು. ಇಂದು 56,700ರೂ.ಗೆ ಇಳಿಕೆಯಾಗಿದೆ.  ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ - ಇಳಿಕೆಯಾದಂತೆಯೂ ಚಿನ್ನ - ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ. 

ವಾಹನ,ಅಡುಗೆ ಅನಿಲ ಬೆಲೆ ಇಳಿಕೆ; ಸಿಎನ್ ಜಿ, ಪಿಎನ್ ಜಿ ದರ ಕಡಿತಗೊಳಿಸಿದ ಮಹಾನಗರ್ ಗ್ಯಾಸ್

ಬೆಂಗಳೂರು ಹಾಗೂ ಇತರ ನಗರಗಳಲ್ಲಿ ಬೆಳ್ಳಿ ದರ
ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಒಂದು ಕೆಜಿ ಬೆಳ್ಳಿ ದರದಲ್ಲಿ 6,600ರೂ. ಇಳಿಕೆಯಾಗಿ ಇಂದಿನ ದರ 56,700ರೂ.ಆಗಿದೆ. ಇಂದು, ಬೆಂಗಳೂರಿನಲ್ಲಿ 10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ.567, ರೂ. 5,670 ಹಾಗೂ ರೂ. 56,700 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 62,400 ಆಗಿದ್ದರೆ, ಮುಂಬೈನಲ್ಲಿ ರೂ. 56,700 ಹಾಗೂ ಕೋಲ್ಕತ್ತದಲ್ಲಿ ಸಹ ರೂ. 56,700 ಗಳಾಗಿದೆ. ಇನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೂಡ ಇಂದಿನ ಬೆಳ್ಳಿ ದರ ರೂ.  56,700  ಆಗಿದೆ.

click me!