ಮ್ಯಾಂಚೆಸ್ಟರ್ ಯುನೈಟೆಡ್ ಖರೀದಿಸುತ್ತೇನೆ ಎಂದಿದ್ದು ತಮಾಷೆಗೆ: ಎಲಾನ್ ಮಸ್ಕ್

By Suvarna NewsFirst Published Aug 17, 2022, 6:57 PM IST
Highlights

*ಟ್ವಿಟರ್ ಬಳಕೆದಾರರನ್ನು ಮತ್ತೊಮ್ಮೆ ಗೊಂದಲಕ್ಕೆ ದೂಡಿದ ಮಸ್ಕ್
*ಮ್ಯಾಂಚೆಸ್ಟರ್ ಯುನೈಟೆಡ್ ಖರೀದಿ ಟ್ವೀಟ್ ಜೋಕ್ ಎಂದ ಟೆಸ್ಲಾ ಸಿಇಒ
*ನಾಲ್ಕು ಗಂಟೆಗಳ ಬಳಿಕ ಇನ್ನೊಂದು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ ಮಸ್ಕ್ 

ಮ್ಯಾಂಚೆಸ್ಟರ್ (ಆ.17): ಒಂದಿಲ್ಲೊಂದು ಟ್ವೀಟ್ ಮೂಲಕ ಸದಾ ಸುದ್ದಿಯಲ್ಲಿರುವ ವಿಶ್ವದ ಸಿರಿವಂತ ಉದ್ಯಮಿ ಎಲಾನ್ ಮಸ್ಕ್, ಮತ್ತೊಮ್ಮೆ ತಮ್ಮ ಟ್ವೀಟ್ ಮೂಲಕ ಸಂಚಲನ ಮೂಡಿಸಿದ್ದಾರೆ. ಟೆಸ್ಲಾದ ಸಿಇಒ ಮಸ್ಕ್, ಸುಪ್ರಸಿದ್ಧಇಂಗ್ಲಿಷ್ ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಖರೀದಿಸುತ್ತಿರೋದಾಗಿ ಟ್ವೀಟ್ ಮಾಡಿದ್ದಾರೆ. ಇದು ಕೆಲವು ಗಂಟೆಗಳ ಕಾಲ ಅನೇಕರನ್ನು ಗೊಂದಲದಲ್ಲಿ ಮುಳುಗಿಸಿತ್ತು. ಮಸ್ಕ್ ನಿಜ ಹೇಳುತ್ತಿದ್ದಾರೋ ಅಥವಾ ಜೋಕ್ ಮಾಡುತ್ತಿದ್ದಾರೋ ಎಂಬ ಅನುಮಾನ ಕಾಡಿತ್ತು. ಏಕೆಂದ್ರೆ ಈ ಹಿಂದೆ ಕೂಡ ಮಸ್ಕ್ ಇಂಥ ಅನೇಕ ಟ್ವೀಟ್ ಗಳನ್ನು ಮಾಡಿ, ಜನರನ್ನು ಗೊಂದಲದಲ್ಲಿ ಮುಳುಗಿಸಿ ಆ ಬಳಿಕ ಅದರಲ್ಲಿ ಹುರುಳಿಲ್ಲ ಎಂದು ಹೇಳಿರುವ ನಿದರ್ಶನಗಳು ಸಾಕಷ್ಟಿವೆ. ಹೀಗಾಗಿ ಮಸ್ಕ್ ಗಂಭೀರವಾಗಿ ಇಂಥ ಟ್ವೀಟ್ ಮಾಡಿದ್ದಾರೋ ಅಥವಾ ತಮಾಷೆಯಾಗಿಯೋ ಎಂಬ ಅನುಮಾನವಿತ್ತು. ಆದರೆ, ಇದಕ್ಕೀಗ ಮಸ್ಕ್ ಅವರೇ ಸ್ಪಷ್ಟನೆ ನೀಡಿದ್ದು,ಇದೊಂದು ತಮಾಷೆಯ ಟ್ವೀಟ್ ಎಂದಿದ್ದಾರೆ. 'ನಾನು  ಮ್ಯಾಂಚೆಸ್ಟರ್ ಯುನೈಟೆಡ್ ಅನ್ನು ಖರೀದಿಸುತ್ತಿದ್ದೇನೆ. ನಿಮಗೆ ಸ್ವಾಗತ' ಎಂದು ಟ್ವೀಟ್ ಮಾಡಿದ್ದರು. ಇದಾದ ನಾಲ್ಕು ಗಂಟೆಗಳ ಬಳಿಕ ಇನ್ನೊಂದು ಟ್ವೀಟ್ ಮಾಡಿರುವ ಮಸ್ಕ್ 'ಇದು ಟ್ವಿಟರ್ ನಲ್ಲಿ ದೀರ್ಘಕಾಲ ಓಡಿದ ಜೋಕ್. ನಾನು ಯಾವುದೇ ಕ್ರೀಡಾ ತಂಡವನ್ನು ಖರೀದಿಸುತ್ತಿಲ್ಲ' ಎಂದಿದ್ದಾರೆ. 

ಮ್ಯಾಂಚೆಸ್ಟರ್ ಯುನೈಟೆಡ್ ನ ಕೆಲವು ಅಭಿಮಾನಿಗಳು ಕ್ಲಬ್ ಖರೀದಿಸುವಂತೆ ಟ್ವಿಟರ್ ನಲ್ಲಿ ಎಲಾನ್ ಮಸ್ಕ್ ಅವರನ್ನು ಕೋರಿದ್ದರು. ಇದಾದ ಬಳಿಕ ಮ್ಯಾಂಚೆಸ್ಟರ್ ಯುನೈಟೆಡ್ ಖರೀದಿಸೋದಾಗಿ ಮಸ್ಕ್ ಟ್ವೀಟ್ ಮಾಡಿದ್ದರು. ಮಸ್ಕ್ ಈ ರೀತಿ ಗಂಭೀರವಲ್ಲದ ಟ್ವೀಟ್ ಮಾಡೋದು ಹೊಸತೇನಲ್ಲ, ದೊಡ್ಡ ಇತಿಹಾಸವಿದೆ. ಎಲಾನ್ ಮಸ್ಕ್ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್ ಖರೀದಿಯಿಂದ ಈಗಾಗಲೇ ಹಿಂದೆ ಸರಿದಿದ್ದಾರೆ. 44 ಬಿಲಿಯನ್ ಡಾಲರ್ ಒಪ್ಪಂದದಿಂದ ಹಿಂದೆ ಸರಿದಿರುವ ಮಸ್ಕ್ ವಿರುದ್ಧ ಟ್ವಿಟರ್ ಕಾನೂನು ಹೋರಾಟಕ್ಕೆ ಕೂಡ ಇಳಿದಿದೆ.  

ವಾಹನ,ಅಡುಗೆ ಅನಿಲ ಬೆಲೆ ಇಳಿಕೆ; ಸಿಎನ್ ಜಿ, ಪಿಎನ್ ಜಿ ದರ ಕಡಿತಗೊಳಿಸಿದ ಮಹಾನಗರ್ ಗ್ಯಾಸ್

ಮ್ಯಾಂಚೆಸ್ಟರ್ ಯುನೈಟೆಡ್ ಜಗತ್ತಿನ ಅತ್ಯುತ್ತಮ ಫುಟ್ ಬಾಲ್  (Football) ಕ್ಲಬ್ ಗಳಲ್ಲಿ ಒಂದಾಗಿದೆ. ಈ ಕ್ಲಬ್ 20 ಬಾರಿ ಇಂಗ್ಲೆಂಡ್ ಚಾಂಪಿಯನ್ ಆಗಿ ದಾಖಲೆ ಕೂಡ ಬರೆದಿದೆ. ಜಾಗತಿಕ ಫುಟ್ಬಾಲ್ ಆಟದ ಪ್ರತಿಷ್ಟಿತ ಕ್ಲಬ್ ಸ್ಪರ್ಧೆಯಾದ ಯುರೋಪಿಯನ್ ಕಪ್ ಅನ್ನು ಮೂರು ಬಾರಿ ಜಯಿಸಿದ ಕೀರ್ತಿ ಕೂಡ ಇದೆ. ಇಂಗ್ಲಿಷ್ ಪ್ರೀಮಿಯರ್ ಲೀಗ್ ನ ಕೊನೆಯ ಸೀಸನ್ ನಲ್ಲಿ ಈ ಕ್ಲಬ್ ಆರನೇ ಸ್ಥಾನ ಗಳಿಸಿದ ಬಳಿಕ ಅಭಿಮಾನಿಗಳಲ್ಲಿ ಅಸಮಾಧಾನ ಮೂಡಿದೆ. ಮ್ಯಾಂಚೆಸ್ಟರ್ ಕ್ಲಬ್ ನಿಯಂತ್ರಿಸುತ್ತಿರುವ ಅಮೆರಿಕದ ಗ್ಲೇಜರ್ಸ್ ಕುಟುಂಬದ ವಿರುದ್ಧ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ. ಗ್ಲೇಜರ್ಸ್ 2005ರಲ್ಲಿ 955.51 ಮಿಲಿಯನ್ ಡಾಲರ್‌ ಗೆ ಮ್ಯಾಂಚೆಸ್ಟರ್ ಕ್ಲಬ್ ಅನ್ನು ಖರೀದಿಸಿದ್ದರು. ಈ ಫುಟ್ಬಾಲ್ ಕ್ಲಬ್ ಮಾರುಕಟ್ಟೆ ಬಂಡವಾಳ  ಮಂಗಳವಾರ ಷೇರು ಮಾರುಕಟ್ಟೆ ಮುಚ್ಚುವ ಸಮಯದಲ್ಲಿ 2.08 ಬಿಲಿಯನ್ ಡಾಲರ್ ಇತ್ತು. 

ಜಗತ್ತಿನ 6 ಕಾಸ್ಮೋಪಾಲಿಟನ್‌ ಹಾಟ್‌ಸ್ಪಾಟ್‌ಗಳಲ್ಲಿ ಬೆಂಗಳೂರಿಗೆ ಸ್ಥಾನ..!

ಏಪ್ರಿಲ್ 27ರಂದು  ಅಂದರೆ ಟ್ವಿಟರ್ (Twitter) ಸಂಸ್ಥೆ ಮಸ್ಕ್ (Musk) ಅವರ ಖರೀದಿ ಒಪ್ಪಂದ ಸ್ವೀಕರಿಸಿದ ಎರಡು ದಿನಗಳ ಬಳಿಕ 'ಕೊಕೇನ್ (Cocaine) ಅನ್ನು ಮತ್ತೆ ಹಾಕಲು ನಾನು ಕೋಕಾ ಕೋಲಾ  (Coca Cola) ಖರೀದಿಸುತ್ತೇನೆ' ಎಂದು ಮಸ್ಕ್ ಟ್ವೀಟ್ (Tweet) ಮಾಡಿದ್ದರು. ಈ ಟ್ವೀಟ್ ಕೂಡ ಸಂಚಲನ ಮೂಡಿಸಿತ್ತು. ಆದರೆ, ಸ್ವಲ್ಪ ಹೊತ್ತಿನ ಬಳಿಕ ಈ ಹಿಂದಿನ ತನ್ನ ಟ್ವೀಟ್ ವೊಂದರ ಸ್ಕ್ರೀನ್ ಶಾಟ್ ಅನ್ನು ಮಸ್ಕ್ ಟ್ವೀಟ್ ಮಾಡಿದ್ದಾರೆ. ಅದರಲ್ಲಿ 'ಈಗ ನಾನು ಮೆಕ್ ಡೊನಾಲ್ಡ್ಸ್ ಖರೀದಿಸಲು ಮುಂದಾಗಿದ್ದೇನೆ ಹಾಗೂ ಎಲ್ಲ ಐಸ್ ಕ್ರೀಂ ಮಷಿನ್ ಗಳನ್ನು ಸರಿಪಡಿಸುತ್ತೇನೆ' ಎಂದು ಬರೆದುಕೊಂಡಿದ್ದರು. ಅಷ್ಟೇ ಅಲ್ಲ,ಈ ಟ್ವೀಟ್ ಗೆ ತನ್ನ ಕಾಲನ್ನು ತಾನೇ ಎಳೆದುಕೊಳ್ಳುವಂತಹ  ಪ್ರತಿಕ್ರಿಯೆ ನೀಡಿರುವ ಮಸ್ಕ್ 'ಕೇಳಿ, ನಾನು ವಿಸ್ಮಯಗಳನ್ನು ಮಾಡಲಾರೆ' ಎಂದಿದ್ದಾರೆ. ಒಟ್ಟಾರೆ ಎಲಾನ್ ಮಸ್ಕ್ ಅಂದ್ರೇನೆ ಹಾಗೇ. ಟ್ವಿಟರ್ ನಲ್ಲಿ ಆಗಾಗ ಇಂಥ ಟ್ವೀಟ್ ಗಳನ್ನು ಮಾಡೋ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ.

click me!