ನಿಧಾನಗತಿಯಲ್ಲಿ ಎರುತ್ತಿದೆ ಚಿನ್ನದ ಬೆಲೆ| ತಜ್ಞರು ಹೇಳಿದಂತೆ ಮತ್ತೆ ಏರಿಕೆಯಾದ ಚಿನ್ನ| ಇನ್ನಷ್ಟು ದುಬಾರಿಯಾಗಲಿದೆ ಬಂಗಾರ| ಹೀಗಿದೆ ಸೆಪ್ಟೆಂಬರ್ 05, 2020ರ ಚಿನ್ನದ ದರ
ಬೆಂಗಳೂರು(ಸೆ.05): ಕೊರೋನಾತಂಕ ನಡುವೆ ಚಿನ್ನದ ದರ ಹಾವು ಏಣಿ ಆಟ ಆಡುತ್ತಿದೆ. ಕೊಂಚ ಏರಿಕೆಯಾಗಿದ್ದ ಚಿನ್ನದ ದರ ಸತತ ಎರಡನೇ ದಿನವೂ ಇಳಿಕೆ ಕಂಡಿದೆ. ಇದು ಚಿನ್ನ ಕೊಳ್ಳೋರಿಗೆ ಕೊಂಚ ಸಮಾಧಾನ ಕೊಟ್ಟಿದೆ. ಇನ್ನು ತಜ್ಞರು ಮತ್ತೆ ಚಿನ್ನದ ಬೆಲೆ ಏರಿಕೆಯಾಗುವ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ದರ ಇಳಿಕೆಯಾದಾಗಲೇ ಚಿನ್ನ ಖರೀದಿಸುವುದು ಉತ್ತಮ. ಇಲ್ಲಿದೆ ಇಂದಿನ ಚಿನ್ನದ ದರ.
ರೈಲು ನಿಲ್ದಾಣದಲ್ಲಿ 43 ಕೋಟಿ ರೂ. ಮೌಲ್ಯದ 504 ಚಿನ್ನದ ಬಿಸ್ಕತ್ ವಶ!
ಹೌದು ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರ 48,160 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 52,530 ರೂಪಾಯಿ ಆಗಿದೆ.
ಇನ್ನು ಬೆಳ್ಳಿ ದರದಲ್ಲೂ 10 ರೂಪಾಯಿ ಏರಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿ ಬೆಲೆ 67,060 ರೂ ಆಗಿದೆ.
ಚಿನ್ನದ ಬೆಲೆ ಮತ್ತೆ ಇಳಿಕೆ, ಖರೀದಿಸಿದ್ರೆ ಕೊಂಚ ಉಳಿಕೆ: ಹೀಗಿದೆ ಇಂದಿನ ದರ!
ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ
ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದೀ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.