ಚಿನ್ನದ ದರದಲ್ಲಿ ಮತ್ತೆ ಬದಲಾವಣೆ: ಇಲ್ಲಿದೆ ನೋಡಿ ಅ. 15ರ ಗೋಲ್ಡ್ ರೇಟ್!

By Suvarna News  |  First Published Oct 15, 2020, 5:02 PM IST

ಸತತ ಎರಡು ದಿನ ಇಳಿಕೆ ಕಂಡಿದ್ದ ಚಿನ್ನದ ದರ| ಹಾವು ಏಣಿ ಆಟವಾಡುತ್ತಿದ್ದ ಬಂಗಾರ ದರ ಮತ್ತೆ ಏರಿಕೆ| ಇಲ್ಲಿದೆ ನೋಡಿ ಅಕ್ಟೋಬರ್ 30ರ ದರ


ಬೆಂಗಳೂರು(ಅ.15): ಕೊರೋನಾತಂಕ ನಡುವೆ ಚಿನ್ನದ ಬೇಡಿಕೆ ಕಡಿಮೆ ಇದ್ದರೂ ಉದ್ಯಮಗಳು ನೆಲ ಕಚ್ಚಿದ ಪರಿಣಾಮ ಅನೇಕ ಮಂದಿ ಹಳದಿ ಲೋಹದಲ್ಲಿ ಹೂಡಿಕೆ ಮಾಡಿದ್ದರು. ಇದರ ಪರಿಣಾಮವೆಂಬಂತೆ ಬಂಗಾರ ದರ ಮಹಾಮಾರಿ ನಡುವೆಯೂ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಸದ್ಯ ಚಿನ್ನದ ಬೆಲೆಯಲ್ಲಿ ಏರಿಳಿತವಾಗತೊಡಗಿದ್ದು, ಗ್ರಾಹಕರೂ ಖರೀದಿಸಬೇಕಾ? ಬೇಡವಾ? ಎಂಬ ಗೊಂದಲದಲ್ಲಿದ್ದಾರೆ.

ಇಂದು ಗುರುವಾರ ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರದಲ್ಲಿ 70 ರೂಪಾಯಿ ಏರಿಕೆಯಾಗಿದೆ. ಈ ಮೂಲಕ ಬೆಲೆ 47,650 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ  70 ರೂಪಾಯಿ ಏರಿಕೆ ಕಂಡಿದ್ದು, 51,980 ರೂಪಾಯಿ ಆಗಿದೆ. 

Tap to resize

Latest Videos

ಇನ್ನು ಇತ್ತ ಬೆಳ್ಳಿ ದರದಲ್ಲಿ 1,000 ರೂ. ಕುಸಿತವಾಗಿಗಿ. ಒಂದು ಕೆ. ಜಿ ಬೆಳ್ಳಿಯ ಬೆಲೆ 61,000 ರೂ ಆಗಿದೆ.

ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ

ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದೀ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ

click me!