ಕೊರೋನಾ ಅವಧಿಯಲ್ಲಿ 41 ಲಕ್ಷ ಸೈಕಲ್‌ ಸೇಲ್‌!

By Suvarna News  |  First Published Oct 15, 2020, 3:16 PM IST

ಕೊರೋನಾ ಅವಧಿಯಲ್ಲಿ 41 ಲಕ್ಷ ಸೈಕಲ್‌ ಸೇಲ್‌!| ಕೊರೋನಾದಿಂದ ಜನರಲ್ಲಿ ಹೆಚ್ಚಾದ ಆರೋಗ್ಯ ಕುರಿತ ಪ್ರಜ್ಞೆ| 10 ಸಾವಿರಕ್ಕಿಂತ ಹೆಚ್ಚು ಮೌಲ್ಯದ ಸೈಕಲ್‌ಗಳೇ ಹೆಚ್ಚು ಮಾರಾಟ


ಜೈಪು(ಅ.15): ಕೊರೋನಾ ವೈರಸ್‌ ಅಬ್ಬರಕ್ಕೆ ಪಾತಾಳಕ್ಕೆ ಕುಸಿದ ವಿಶ್ವದ ಬಲಿಷ್ಟರಾಷ್ಟ್ರಗಳ ಆರ್ಥಿಕತೆ, ಆರೋಗ್ಯ, ಉದ್ಯಮ ವಲಯಗಳು ಬೆಚ್ಚಿಬಿದ್ದಿವೆ. ಆದರೆ, ಭಾರತದ ಸೈಕಲ್‌ ಉದ್ಯಮಕ್ಕೆ ಮಾತ್ರ ಕೊರೋನಾ ವೈರಸ್‌ ಹೊಸ ಆಶಾಕಿರಣದಂತೆ ಗೋಚರವಾಗಿದೆ. ಹೌದು, ಕೊರೋನಾ ವಕ್ಕರಿಸಿದ ಕಳೆದ 5 ತಿಂಗಳ ಅವಧಿಯಲ್ಲೇ ಭಾರತದಲ್ಲಿ ಸೈಕಲ್‌ಗಳ ಮಾರಾಟ ದ್ವಿಗುಣಗೊಂಡಿದೆ.

ಕೊರೋನಾ ಪರಿಣಾಮ ಜನರಲ್ಲಿ ಆರೋಗ್ಯದ ಜಾಗರೂಕತೆ ಹೆಚ್ಚಾಗಿದೆ. ಇದರಿಂದಾಗಿ ಮೊದಲು ಸಣ್ಣ-ಪುಟ್ಟಪ್ರಯಾಣಕ್ಕೂ ಕಾರು, ಬೈಕ್‌, ಆಟೋ, ಟ್ಯಾಕ್ಸಿ ಮತ್ತು ಸರ್ಕಾರಿ ಬಸ್‌ಗಳನ್ನು ಅವಲಂಬಿಸಿದ್ದವರ ಪೈಕಿ ಬಹುತೇಕರು ಇದೀಗ ಸ್ವಂತ ಸೈಕಲ್‌ ಹೊಂದುವ ಬಯಕೆಗೆ ಒಳಗಾಗಿರುವುದೇ ಸೈಕಲ್‌ಗಳ ಬೇಡಿಕೆ ದ್ವಿಗುಣಗೊಳ್ಳಲು ಕಾರಣವಾಗಿದೆ. ಇದರಿಂದ ಮೇ ತಿಂಗಳಿನಿಂದ ಸೆಪ್ಟೆಂಬರ್‌ವರೆಗಿನ ಐದು ತಿಂಗಳ ಅವಧಿಯಲ್ಲಿ ದೇಶಾದ್ಯಂತ ಒಟ್ಟಾರೆ 41,80,945 ಸೈಕಲ್‌ಗಳನ್ನು ಮಾರಾಟ ಮಾಡಿದ್ದಾಗಿ ಭಾರತ ಸೈಕಲ್‌ ಉತ್ಪಾದಕರ ಸಂಘ(ಎಐಸಿಎಂಎ) ಹೇಳಿದೆ.

Tap to resize

Latest Videos

undefined

ಕನಿಷ್ಠ 10 ಸಾವಿರ ರು. ಮೌಲ್ಯದ ಅಥವಾ ಅದಕ್ಕಿಂತ ಹೆಚ್ಚು ಬೆಲೆಯ ಸೈಕಲ್‌ಗಳೇ ಹೆಚ್ಚಾಗಿ ಮಾರಾಟ ಕಂಡಿವೆ ಮತ್ತೊಂದು ಸೈಕಲ್‌ ಮಾರಾಟಗಾರರೊಬ್ಬರು ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಎಐಸಿಎಂಎ ಪ್ರಧಾನ ಕಾರ್ಯದರ್ಶಿ ಕೆ.ಬಿ ಠಾಕೂರ್‌, ‘ಕಳೆದ ಐದು ತಿಂಗಳಲ್ಲಿ ಸೈಕಲ್‌ ಮಾರಾಟದಲ್ಲಿ ಶೇ.100ರಷ್ಟುಬೆಳವಣಿಗೆ ದಾಖಲಿಸಿದೆ. ಬೇಡಿಕೆ ಹೆಚ್ಚಿದ ಹಿನ್ನೆಲೆ ನಾನಾ ಭಾಗಗಳಲ್ಲಿ ಜನರು ತಮ್ಮ ನೆಚ್ಚಿನ ಸೈಕಲ್‌ ಖರೀದಿಗಾಗಿ ಬುಕ್‌ ಮಾಡಿ ವಾರಗಟ್ಟಲೇ ಕಾಲ ಕಾಯುವ ಅನಿವಾರ್ಯತೆಗೆ ಒಳಗಾಗಿದ್ದಾರೆ’ ಎಂದಿದ್ದಾರೆ.

ಅಲ್ಲದೆ, ಮೇ ತಿಂಗಳಲ್ಲಿ ಒಟ್ಟಾರೆ 4,56,818 ಸೈಕಲ್‌ಗಳು ಮಾರಾಟವಾಗಿದ್ದು, ಇದು ಜೂನ್‌ನಲ್ಲಿ ದ್ವಿಗುಣಗೊಂಡು 8,51,060 ಸೈಕಲ್‌ಗಳು ಬಿಕರಿಯಾಗಿವೆ. ಅಲ್ಲದೆ, ಸೆಪ್ಟೆಂಬರ್‌ನಲ್ಲಿ 11 ಲಕ್ಷಕ್ಕೂ ಹೆಚ್ಚು ಸೈಕಲ್‌ಗಳು ಸೇರಿದಂತೆ ಒಟ್ಟಾರೆ 41 ಲಕ್ಷಕ್ಕೂ ಹೆಚ್ಚು ಸೈಕಲ್‌ಗಳು ಮಾರಾಟವಾಗಿವೆ ಎಂಬುದು ಎಐಸಿಎಂಎ ದಾಖಲೆಗಳಿಂದ ಗೊತ್ತಾಗಿದೆ.

ತಿಂಗಳು ಸೈಕಲ್‌ಗಳ ಸೇಲ್‌

ಮೇ 4,56,818

ಜೂನ್‌ 8,51,060

ಸೆಪ್ಟೆಂಬರ್‌ 11,21,544

ಒಟ್ಟು 41,80,945

click me!