ಕೊರೋನಾತಂಕ ನಡುವೆ ಚಿನ್ನದ ಬೆಲೆ ಎಷ್ಟೆಂದು ಗೊತ್ತೇನು? ಸೆ. 09ರ ಬಂಗಾರ ದರ!

By Suvarna NewsFirst Published Sep 9, 2020, 5:12 PM IST
Highlights

ದಿನೇ ದಿನೇ ಹಚ್ಚುತ್ತಿದೆ ಚಿನ್ನದ ದರ| ಖರೀದಿದಾರರಿಗೆ ತಲೆನೋವಾದ ಬೆಲೆ ಏರಿಕೆ| ಹೀಗಿದೆ ನೋಡಿ 2020 ಸೆಪ್ಟೆಂಬರ್ 09ರ ಚಿನ್ನದ ದರ

ಬೆಂಗಳೂರು(ಸೆ.09): ದಾಖಲೆಯ ಏರಿಕೆ ಕಂಡಿದ್ದ ಚಿನ್ನದ ದರ ಇಳಿಕೆಯಾಗುತ್ತಾ ಬಂದಿತ್ತು. ಇನ್ನಷ್ಟು ಇಳಿಕೆಯಾಗಬಹುದೆಂದು ಅನೇಕ ಮಂದಿ ಕಾದಿದ್ದರು. ಆದರೀಗ ಈ ಎಲ್ಲಾ ಲೆಕ್ಕಾಚಾರವನ್ನು ಬುಡಮೇಲು ಮಾಡಿರುವ ಹಳದಿ ತಾಮ್ರದ ಬೆಲೆ ಮತ್ತೆ ಏರಿಕೆಯಾಗಿದೆ. 

ಹೌದು ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರದಲ್ಲಿ 200 ರೂಪಾಯಿ ಏರಿಕೆಯಾಗಿದೆ. ಈ ಮೂಲಕ ಬೆಲೆ 48,500 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ  230 ರೂಪಾಯಿ ಏರಿಕೆ ಕಂಡಿದ್ದು, 52,900 ರೂಪಾಯಿ ಆಗಿದೆ. 

ಚಿನ್ನದ ಬೆಲೆ ಏರಿಕೆಯಾಗಿದ್ದರೂ ಬೆಳ್ಳಿ ದರ ಮಾತ್ರ ಇಳಿಕೆಯಾಗಿದೆ.  ಬೆಳ್ಳಿ ದರದಲ್ಲೂ 100 ರೂಪಾಯಿ ಏರಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿ ಬೆಲೆ 67,900 ರೂ ಆಗಿದೆ.

ಕೊರೋನಾತಂಕ ನಡುವೆ ಉದ್ಯಮಗಳು ನೆಲಕಚ್ಚಿದ್ದು, ಹಣ ಹೂಡಿಕೆ ಮಾಡಲು ಅನೇಕ ಮಂದಿಗೆ ಸಿಕ್ಕ ಒಂದೇ ದಾರಿ ಚಿನ್ನವಾಗಿದೆ. ಹೀಗಾಗಿ ಚಿನ್ನದ ಬೇಡಿಕೆ ಕಡಿಮ ಇದ್ದರೂ ಹೂಡಿಕೆ ಹೆಚ್ಚಾಗಿ ಬೆಲೆಯೂ ಬಾರ ಏರಿಕೆ ಕಂಡಿದೆ.

ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ

ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದೀ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.

click me!