ಚಿನ್ನ ಮುಟ್ಟಂಗಿಲ್ಲ, ಬೆಳ್ಳಿ ಕೇಳಂಗಿಲ್ಲ: ಬೆಲೆ ಮಾತಾಡಂಗಿಲ್ಲ!

By Web DeskFirst Published Jan 16, 2019, 12:36 PM IST
Highlights

ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿದರದಲ್ಲಿ ಏರಿಕೆ! ಸತತವಾಗಿ ಏರಿಕೆಯತ್ತ ಮುಖ ಮಾಡಿರುವ ಚಿನ್ನ, ಬೆಳ್ಳಿ ದರ! ಆಭರಣ ಪ್ರೀಯರಿಗೆ ನಿರಾಸೆ ಮೂಡಿಸಿದ ಚಿನ್ನ, ಬೆಳ್ಳಿ ದರ ಏರಿಕೆ! ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚು| ಸ್ಥಳೀಯ ವರ್ತಕರಿಂದಲೂ ಬೇಡಿಕೆ ಹೆಚ್ಚಾದ ಪರಿಣಾಮ| 

ನವದೆಹಲಿ(ಜ.16): ಜಾಗತಿಕ ಮಾರುಕಟ್ಟೆ ಹಾಗೂ ಸ್ಥಳೀಯ ವರ್ತಕರಿಂದ ಚಿನ್ನಕ್ಕೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (MCX) ನಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಕೈಗಾರಿಕಾ ಘಟಕಗಳು ಹಾಗೂ ನಾಣ್ಯ ತಯಾರಕರಿಂದ ಬೇಡಿಕೆ ಇರುವ ಕಾರಣ ಬೆಳ್ಳಿ ಬೆಲೆಯೂ ಏರಿಕೆ ಕಂಡಿದೆ. 

ಯುಎಸ್ ಫೆಡರಲ್ ರಿಸರ್ವ್ ಈ ವರ್ಷ ಬಡ್ಡಿ ದರ ಏರಿಕೆ ಮಾಡದ ಹಿನ್ನೆಲೆಯಲ್ಲಿ ಡಾಲರ್ ಮೌಲ್ಯ ಕುಸಿದಿದ್ದು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ 10 ಗ್ರಾಂ ಚಿನ್ನದ ಬೆಲೆ 25 ರೂ.ಏರಿಕೆಯಾಗಿ ಒಟ್ಟು 33,125 ರೂ. ಆಗಿದೆ. ಅದೇ ರೀತಿ ಎಂಸಿಎಕ್ಸ್‌ನಲ್ಲಿ 1 ಕೆಜಿ ಬೆಳ್ಳಿ ಬೆಲೆ 100 ರೂ. ಏರಿಕೆಯಾಗಿ 40,200 ರೂ. ಆಗಿದೆ. 

ಅದರಂತೆ ಬೆಂಗಳೂರಿನಲ್ಲಿ 10 ಗ್ರಾಂ 22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ಕ್ರಮವಾಗಿ 33,400 ರೂ. ಹಾಗೂ 33,400 ರೂ. ಆಗಿದೆ. ಅದರಂತೆ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 33,400 ರೂ. ಇದೆ. 1 ಕೆಜಿ ಬೆಳ್ಳಿ ಬೆಲೆ 41,400 ರೂ. ಇದೆ.

ಹೊಡಿ ಒಂಬತ್: ಚಿನ್ನದ ದರದಲ್ಲಿ ಭಾರೀ ಇಳಿಕೆ!

click me!