
ಚಿನ್ನಾಭರಣ ಖರೀದಿ ಮಾಡಬೇಕು ಎಂದು ಯೋಚನೆ ಮಾಡುತ್ತಿರುವ ಜನರಿಗೆ ಇಲ್ಲಿದೆ ಗುಡ್ ನ್ಯೂಸ್ ಸತತ ಮೂರನೇ ದಿನವೂ ಚಿನ್ನದ ಬೆಲೆಯಲ್ಲಿ ಕುಸಿತವಾಗಿದ್ದು, ಇದರೊಂದಿಗೆ ಖರೀದಿದಾರರಿಎ ಬಿಗ್ ರಿಲೀಫ್ ಸಿಕ್ಕಿದೆ.
ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡಬೇಕು ಎಂದು ಕಾಯುತ್ತಿರುವ ಜನರಿಗೆ ರಿಲೀಫ್ ಸಿಕ್ಕಿದೆ. ಸತತ ಮೂರನೇ ದಿನ ಚಿನ್ನದ ಬೆಲೆ ಕಡಿಮೆಯಾಗಿದೆ. ಶುಕ್ರವಾರ, ಅಂದರೆ ನವೆಂಬರ್ 13, 2026ರ ಬುಲಿಯನ್ ಮಾರ್ಕೆಟ್‌ನಲ್ಲಿ ದುಬಾರಿ ಲೋಹದ ಬೆಲೆಗಳು ಗಣನೀಯವಾಗಿ ಕಡಿಮೆಯಾಗಿದೆ. ಇಂಡಿಯಾ ಬುಲಿಯನ್ ಅಂಡ್ ಜ್ಯುವೆಲರ್ಸ್ ಅಸೋಶಿಯೇಷನ್ ಅಂಕಿಅಂಶಗಳ ಅನ್ವಯ, ಕಳೆದ ಮೂರು ದಿನಗಳಿಂದ 24 ಕ್ಯಾರಟ್ ಚಿನ್ನದ ದರ ಬರೋಬ್ಬರಿ ಮೂರು ಸಾವಿರ ರೂಪಾಯಿ ವರೆಗೂ ಕಡಿಮೆಯಾಗಿದೆ. ಚಿನ್ನದ ಹಾದಿಯಲ್ಲೇ ಬೆಳ್ಳಿ ದರ ಕೂಡ ಕಡಿಮೆಯಾಗಿದೆ. ಇದರೊಂದಿಗೆ ಗ್ರಾಹಕರ ಮುಖದಲ್ಲಿ ಸಂತಸ ಮೂಡಿದೆ.
ರಾಜ್ಯ ರಾಜಧಾನಿಯಲ್ಲಿ ಬೆಂಗಳೂರಿನಲ್ಲಿ ಇಂದು ಚಿನ್ನದ ದರ ಹೇಗಿದೆ ಅಂತ ನೋಡುವುದಾದರೆ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 1,39,800 ರೂಪಾಯಿ ಇದ್ದು, ಒಂದು ಗ್ರಾಂ ಚಿನ್ನದ ಬೆಲೆ 13,985 ರೂಪಾಯಿ ಇದೆ. 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,28,150 ರೂಪಾಯಿ ಇದ್ದು, ಪ್ರತಿ ಗ್ರಾಂಗೆ 12,815 ರೂಪಾಯಿ ಇದೆ. 18 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,04,850 ರೂಪಾಯಿ ಇದ್ದು, ಪ್ರತಿ ಗ್ರಾಂಗೆ 10,490 ರೂಪಾಯಿ ಇದೆ.
ಚಿನ್ನದ ಬೆಲೆಯೊಂದಿಗೆ ಬೆಳ್ಳಿ ದರವೂ ಭಾರೀ ಪ್ರಮಾಣದಲ್ಲಿ ಕುಸಿತವಾಗಿದ್ದು, ಕಳೆದ ಕೆಲವು ದಿನಗಳಿಂದ ಗಗನಕ್ಕೇರಿದ ಬೆಲೆಯೂ ಈಗ ಕಡಿಮೆಯಾಗಿದೆ. ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಒಂದು ಗ್ರಾಂ ಬೆಲೆ 200 ರೂಪಾಯಿ, 8 ಗ್ರಾಂ ಬೆಲೆ 1600 ರೂಪಾಯಿ, 10 ಗ್ರಾಂ ಬೆಲೆ 2 ಸಾವಿರ ರೂಪಾಯಿ, 100 ಗ್ರಾಂ ಬೆಲೆ 20 ಸಾವಿರ ರೂಪಾಯಿ ಇದೆ. ಒಂದು ಕೆಜಿಗೆ 2 ಲಕ್ಷ ರೂಪಾಯಿ ಇದೆ. ದೇಶಿಯ ಮಾರ್ಕೆಟ್ನಲ್ಲಿಡಿಮ್ಯಾಂಡ್ ಸ್ವಲ್ಪ ಕಡಿಮೆ ಆಗಿರೋದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೌಲ್ಯ ಕಡಿಮೆ ಆಗಿರೋದು ಬೆಳ್ಳಿಯ ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಿನ್ನ ಮತ್ತು ಬೆಳ್ಳಿ ದರದಲ್ಲಿ ತೀವ್ರ ಬೆಲೆ ಕುಸಿತವಾಗಲು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಆರ್ಥಿಕ ಪರಿಣಾಮಗಳು ಕಾರಣ ಎಂದು ತಿಳಿದು ಬರುತ್ತಿದೆ. ಅಕ್ಟೋಬರ್‌ನಲ್ಲಿ ಅಮೆರಿಕದಲ್ಲಿ ಹಣದುಬ್ಬರ ನಿರೀಕ್ಷೆಗಿಂತ ಹೆಚ್ಚಾಗಿದ್ದು, ಡಿಸೆಂಬರ್‌ನಲ್ಲಿ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಬಡ್ಡಿದರಗಳು ಏರಿಕೆಯಾಗುವ ಲಕ್ಷಣಗಳು ಕಂಡು ಬಂದರೆ ಹೂಡಿಕೆದಾರರು ಚಿನ್ನದಂತಹ ಲೋಹಗಳ ಮೇಲೆ ಮಾಡಿರುವ ಹೂಡಿಕೆಗಳನ್ನು ಹಿಂತೆಗೆದುಕೊಳ್ಳುತ್ತಾರೆ. ಇದರ ಪರಿಣಾಮವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಮಾರಾಟ ಮೇಲೆ ಪರಿಣಾಮವನ್ನು ಬೀರುತ್ತದೆ. ಅಲ್ಲದೇ, ಬೆಲೆಗಳಲ್ಲಿ ಕುಸಿತವಾಗುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.