
ದೆಹಲಿ(ಆ.20): ಕಳೆದ ಕೆಲವು ದಿನಗಳಲ್ಲಿ ಏರಿಕೆಯನ್ನು ಕಂಡಿದ್ದ ಚಿನ್ನದ ದರ ಈಗ ಸ್ವಲ್ಪ ಚೇತರಿಸಿಕೊಂಡಿದೆ. ಹಬ್ಬದ ಸಮಯದಲ್ಲಿ ಆಭರಣ ಕೊಳ್ಳುವವರಿಗೆ ಬಂಪರ್ ಆಗಿದ್ದು ಚಿನ್ನದ ಬೆಲೆ 100 ಗ್ರಾಂಗೆ ಸುಮಾರು 3700 ರೂಪಾಯಿ ಇಳಿಕೆಯಾಗಿದೆ. ಇದರರ್ಥ ಚಿನ್ನದ ದರ 10 ಗ್ರಾಂಗೆ ರೂ 370 ಇಳಿಕೆಯಾಗಿದೆ.
"
ಗುಡ್ ರಿಟರ್ನ್ಸ್ ವೆಬ್‌ಸೈಟ್‌ನ ವಿವರಗಳ ಪ್ರಕಾರ, ಬೆಲೆಯಲ್ಲಿ ಸ್ಥಿರವಾದ ಏರಿಕೆಯ ನಂತರ ಚಿನ್ನದ ದರದಲ್ಲಿ ಭಾರೀ ಕುಸಿತವಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಚಿನ್ನದ ಬೆಲೆಗಳು ಸಮತೋಲನದಲ್ಲಿ ಉಳಿದಿವೆ. ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ 1,780.43 ಡಾಲರ್‌ಗಳಷ್ಟು ಇಳಿಕೆಯಾಗಿದೆ.
3-5 ವರ್ಷದಲ್ಲಿ ದುಪ್ಪಟ್ಟಾಗಲಿದೆ ಚಿನ್ನದ ದರ..!
| ನಗರ | ಚಿನ್ನದ ಬೆಲೆ(ರೂ.ಗಳಲ್ಲಿ) |
| ಮುಂಬೈ | 46,130 |
| ಚೆನ್ನೈ | 44,490 |
| ದೆಹಲಿ | 46,250 |
| ಕೊಲ್ಕತ್ತಾ | 46,600 |
| ಬೆಂಗಳೂರು | 44,100 |
| ಹೈದರಾಬಾದ್ | 44,100 |
| ಕೇರಳ | 44,100 |
| ಜೈಪುರ | 46,310 |
| ಪುಣೆ | 45,400 |
| ಉತ್ತರ ಪ್ರದೇಶ - ಲಕ್ನೋ | 46,250 |
| ಪಟ್ನಾ | 45,400 |
| ನಾಗ್ಪುರ | 46,130 |
ಸಾಮಾನ್ಯವಾಗಿ ಅಕ್ಷಯ ತೃತೀಯ, ವರಮಹಾಲಕ್ಷ್ಮೀ ಹಬ್ಬದಂತಹ ಪ್ರಮುಖ ಹಬ್ಬಗಳ ಸಂದರ್ಭ ಚಿನ್ನದ ಬೆಲೆ ಹೆಚ್ಚಾಗುತ್ತದೆ. ಆದರೆ ಈ ಬಾರಿ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಹಬ್ಬದ ಶುಭ ಸಂದರ್ಭದಲ್ಲಿ ಆಭರಣ ಕೊಳ್ಳುವವರಿಗೆ ಇದು ಸಹಾಯವಾಗಲಿದೆ.
ಕೊರೋನಾ ನಂತರ ಲಾಕ್‌ಡೌನ್ ಆಗಿ ಚಿನ್ನದ ಉದ್ಯಮಕ್ಕೆ ಬರೆ ಬಿದ್ದಿತ್ತು. ಆಭರಣ ಖರೀದಿಸುವವರಿದ್ದರೂ ಆಭರಣ ಮಳಿಗೆಗಳು ಮುಚ್ಚಲ್ಪಟ್ಟಿದ್ದವು. ಆದರೆ ಲಾಕ್‌ಡೌನ್ ನಂತರ ಜನರು ಆರ್ಥಿಕ ತೊಂದರೆಯಲ್ಲಿದ್ದರೂ ಆಭರಣ ಖರೀದಿಯಲ್ಲಿ ಅಂತಹ ಇಳಕೆ ಕಂಡುಬಂದಿರಲಿಲ್ಲ. ಈಗ ಅನ್‌ಲಾಕ್ ಪ್ರಕ್ರಿಯೆ ಆರಂಭವಾದ ನಂತರ ಮತ್ತೆ ಚಿನ್ನದ ವಹಿವಾಟು ಜೋರಾಗಿದೆ.
ರಕ್ಷಾ ಬಂಧನ ಹಬ್ಬವೂ ಸಮೀಪಿಸಿದ್ದು ರಾಖಿ ಕಟ್ಟುವ ಸಹೋದರಿಯರಿಗೆ ಚಂದದ ಆಭರಣ ಗಿಫ್ಟ್ ಕೊಡುವ ಸಾಧ್ಯತೆಯೂ ಈ ಬಾರಿ ಹೆಚ್ಚಾಗಿದೆ. ಹಬ್ಬಗಳು ಇನ್ನೇನು ಆರಂಭವಾಗಿದ್ದು, ಇದೇ ಸಂದರ್ಭ ಚಿನ್ನದ ದರ ಇಳಿಕೆಯಾಗಿದ್ದು, ಉಡುಗೊರೆ ನೀಡುವವರಿಗೆ ಚಿನ್ನದ ಆಯ್ಕೆ ಮಾಡಲು ಚಿಂತೆ ಇಲ್ಲ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.