Gold Silver Price: ಚಿನ್ನದ ದರ ಏರಿಕೆ, ಬೆಳ್ಳಿ ಬೆಲೆ ಇಳಿಕೆ; ಮಾರುಕಟ್ಟೆಯಲ್ಲಿ ಇಂದಿನ ದರ ಎಷ್ಟಿದೆ?

Suvarna News   | Asianet News
Published : Dec 15, 2021, 12:21 PM IST
Gold Silver Price: ಚಿನ್ನದ  ದರ ಏರಿಕೆ, ಬೆಳ್ಳಿ ಬೆಲೆ ಇಳಿಕೆ; ಮಾರುಕಟ್ಟೆಯಲ್ಲಿ ಇಂದಿನ ದರ ಎಷ್ಟಿದೆ?

ಸಾರಾಂಶ

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿಇಂದು ಚಿನ್ನದ ದರದಲ್ಲಿ ಏರಿಕೆ ಕಂಡುಬಂದಿದ್ರೆ, ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ.

ಬೆಂಗಳೂರು (ಡಿ.15):  ಚಿನ್ನ (Gold)ಮತ್ತು ಬೆಳ್ಳಿ(Silver) ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಮಹಿಳೆಯರಿಗೆ ಮಾತ್ರವಲ್ಲ, ಹೂಡಿಕೆದಾರರಿಗೂ(Investors) ಇವೆರಡೂ ಅಚ್ಚುಮೆಚ್ಚು. ಚಿನ್ನ ಹಾಗೂ ಬೆಳ್ಳಿ ಮೇಲಿನ ಹೂಡಿಕೆ(Investment) ಅತ್ಯಂತ ಸುರಕ್ಷಿತ ಎಂಬ ಭಾವನೆ ಭಾರತೀಯ ಹೂಡಿಕೆದಾರರಲ್ಲಿದೆ. ಚಿನ್ನದ ಮೇಲಿನ ಹೂಡಿಕೆ(Investment) ಲಾಭದಾಯಕ ಎಂಬ ನಂಬಿಕೆಯೂ ಇದೆ. ಇದೇ ಕಾರಣಕ್ಕೆ ಅದೆಂಥದ್ದೇ ಪರಿಸ್ಥಿತಿ ಇರಲಿ, ಹೂಡಿಕೆದಾರರು ಮಾತ್ರ ಚಿನ್ನದ ಮೇಲೆ ಹೂಡಿಕೆ ಮಾಡೋದನ್ನು ಕಡಿಮೆ ಮಾಡಲ್ಲ. ಇನ್ನು ಚಿನ್ನ ಅಲಂಕಾರಿಕಾ ವಸ್ತು ಮಾತ್ರವಲ್ಲ, ಕಷ್ಟಕಾಲದಲ್ಲಿ ಕೈ ಹಿಡಿಯುತ್ತದೆ ಎಂಬ ವಿಶ್ವಾಸ ಮಹಿಳೆಯರಲ್ಲೂಇದೆ.  ಅದೆಷ್ಟೋ ಕುಟುಂಬಗಳು ಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ಬಳಿಯಿರೋ ಚಿನ್ನ ಹಾಗೂ ಬೆಳ್ಳಿಯನ್ನು ಅಡವಿಟ್ಟೋ, ಮಾರಿಯೋ ಆರ್ಥಿಕ ಸಂಕಷ್ಟದಿಂದ ಹೊರಬಂದಂತಹ ಅನೇಕ ನಿದರ್ಶನಗಳು ಸಿಗುತ್ತವೆ.  ಆದ್ರೆ ಕಳೆದ ವರ್ಷ ಮಾತ್ರ ಚಿನ್ನದ ದರ ಏರಿಕೆಯ ಹಾದಿ ಹಿಡಿದು ಬಂಗಾರಪ್ರಿಯರಿಗೆ ಶಾಕ್ ನೀಡಿತ್ತು. ಆದ್ರೆ ಈ ವರ್ಷದ ಪ್ರಾರಂಭದಲ್ಲಿ ಇಳಿಕೆ ಕಾಣೋ ಮೂಲಕ ಖುಷಿ ನೀಡಿತ್ತು. ಕಳೆದ ಕೆಲವು ದಿನಗಳಿಂದ ಮಾತ್ರ ಚಿನ್ನ ಪ್ರತಿದಿನ ಅಲ್ಪ ಏರಿಕೆ ದಾಖಲಿಸುತ್ತಿದೆ. ಆದ್ರೆ ನಿನ್ನೆ (ಡಿ.14)  ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಇಂದು (ಡಿ.15)  ಚಿನ್ನದ ದರ ಮತ್ತೆ ಏರಿಕೆ ಹಾದಿ ಹಿಡಿದಿದೆ. ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ ದಾಖಲಾಗಿದೆ. ಇನ್ನು ಬೆಳ್ಳಿ ಬೆಲೆಯಲ್ಲಿ ಹಾವು-ಏಣಿ ಆಟ ಮುಂದುವರಿದಿದೆ. ನಿನ್ನೆ ಏರಿಕೆ ಕಂಡಿದ್ದ ಬೆಳ್ಳಿ ಬೆಲೆ ಇಂದು ಇಳಿಕೆಯಾಗಿದೆ.  ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಇಂದು  (ಡಿ.15) ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ?

ಬೆಂಗಳೂರಿನಲ್ಲಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ(Bengaluru) ಇಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ. ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 45,250ರೂ. ಇದ್ದು,ಇಂದು 10ರೂ. ಏರಿಕೆ ಕಾಣೋ ಮೂಲಕ 45,260ರೂ. ತಲುಪಿದೆ.  24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 49,360ರೂ. ಇದ್ದು,ಇಂದು 10ರೂ. ಏರಿಕೆ ದಾಖಲಿಸೋ ಮೂಲಕ 49,370ರೂ. ತಲುಪಿದೆ.  ಒಂದು ಕೆ.ಜಿ. ಬೆಳ್ಳಿ ಬೆಲೆಯಲ್ಲಿ 600ರೂ. ಇಳಿಕೆಯಾಗಿದೆ. ಒಂದು ಕೆ.ಜಿ.ಬೆಳ್ಳಿಗೆ ನಿನ್ನೆ 61,500ರೂ. ಇತ್ತು. ಇಂದು 60,900ರೂ.ಇದೆ.  

Petrol Diesel Rate:ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?

ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ(Delhi) ಚಿನ್ನದ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ. ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ  47,400ರೂ. ಇತ್ತು. ಇಂದು 10ರೂ. ಏರಿಕೆ ಕಂಡು 47,410ರೂ. ಆಗಿದೆ.   24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ 10ರೂ. ಏರಿಕೆಯಾಗಿದೆ. ನಿನ್ನೆ 51,710ರೂ. ಇದ್ದ ಚಿನ್ನದ ದರ ಇಂದು 51,720ರೂ. ತಲುಪಿದೆ.  ಒಂದು ಕೆ.ಜಿ. ಬೆಳ್ಳಿ ದರದಲ್ಲಿ ನಿನ್ನೆಗಿಂತ ಇಂದು  600ರೂ. ಇಳಿಕೆಯಾಗಿದ್ದು, 60,900ರೂ. ಆಗಿದೆ. ನಿನ್ನೆ 61,500ರೂ. ಇತ್ತು.

ಮುಂಬೈನಲ್ಲಿ ಎಷ್ಟಿದೆ?
ಮುಂಬೈನಲ್ಲಿ (Mumbai) ಕೂಡ ಇಂದು ಚಿನ್ನದ ದರದಲ್ಲಿ 10ರೂ.  ಏರಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 47, 150ರೂ.ಇದ್ದು, ಇಂದು  47,160ರೂ. ಆಗಿದೆ.  24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ 48, 150ರೂ. ಇತ್ತು, ಇಂದು 10ರೂ. ಏರಿಕೆಯಾಗಿ 48,160ರೂ. ಆಗಿದೆ.  ಬೆಳ್ಳಿ ದರದಲ್ಲಿಇಂದು 600ರೂ. ಇಳಿಕೆಯಾಗಿದೆ.  ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 61,500ರೂ. ಇದ್ದು, ಇಂದು  60,900ರೂ. ಆಗಿದೆ.  

Nominee To PF:ನಾಮಿನಿ ಸೇರ್ಪಡೆಗೆ ಡಿ.31 ಕೊನೆಯ ದಿನಾಂಕ; ನಾಮಿನಿ ಸೇರಿಸೋದು ಹೇಗೆ? ಇಲ್ಲಿದೆ ಮಾಹಿತಿ

ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ(Chennai) ಕೂಡ ಇಂದು ಚಿನ್ನದ ದರದಲ್ಲಿ 10ರೂ. ಏರಿಕೆಯಾಗಿದೆ.  22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು  45,390ರೂ.ಇದೆ. ನಿನ್ನೆ 45,380ರೂ. ಇತ್ತು.  24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ 49,500ರೂ. ಇದ್ದು, ಇಂದು 10ರೂ.ಏರಿಕೆಯಾಗಿ   49,510ರೂ. ಆಗಿದೆ.  ಬೆಳ್ಳಿ ದರದಲ್ಲಿ ಇಳಿಕೆಯಾಗಿದ್ದು,  ಇಂದು ಒಂದು ಕೆ.ಜಿ. ಬೆಳ್ಳಿಗೆ 65,200ರೂ.ಇದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!