₹74, 000 ತಲುಪಿದ ಚಿನ್ನದ ಬೆಲೆ! ದೀಪಾವಳಿಗೆ ಇನ್ನಷ್ಟು ಏರಿಕೆ!

Published : Apr 11, 2024, 08:09 AM ISTUpdated : Apr 11, 2024, 08:18 AM IST
₹74, 000 ತಲುಪಿದ ಚಿನ್ನದ ಬೆಲೆ! ದೀಪಾವಳಿಗೆ ಇನ್ನಷ್ಟು ಏರಿಕೆ!

ಸಾರಾಂಶ

 ಚಿನ್ನ ಮತ್ತು ಬೆಳ್ಳಿ ಬೆಲೆ ದರ ಏರಿಕೆ ಮುಂದುವರೆದಿದ್ದು, ಎರಡೂ ಲೋಹಗಳ ಬೆಲೆ ಬುಧವಾರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.

ಮುಂಬೈ/ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆ ದರ ಏರಿಕೆ ಮುಂದುವರೆದಿದ್ದು, ಎರಡೂ ಲೋಹಗಳ ಬೆಲೆ ಬುಧವಾರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.

ಬೆಂಗಳೂರು ಚಿನಿವಾರ ಪೇಟೆಯಲ್ಲಿ 99.5 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 74060 ರು.ಗೆ ತಲುಪಿದೆ. ಇನ್ನು ಬೆಳ್ಳಿ ಬೆಲೆ ಕೆಜಿಗೆ 84600 ರು. ತಲುಪಿದೆ. ಇನ್ನು ಮುಂಬೈನಲ್ಲಿ 99.5 ಕ್ಯಾರೆಟ್‌ ಶುದ್ಧತೆಯ ಚಿನ್ನದ ಬೆಲೆ 10 ಗ್ರಾಂಗೆ 71535 ರು. ತಲುಪಿದ್ದರೆ, 99.9 ಶುದ್ಧತೆಯ ಚಿನ್ನದ ಬೆಲೆ 71823 ರು.ಗೆ ತಲುಪಿದೆ.

ಹಬ್ಬದ ದಿನಗಳು ಆರಂಭವಾಗಿರುವುದು, ಮದುವೆ ಸೀಸನ್‌ ನಡೆಯುತ್ತಿರುವುದು ಮತ್ತು ಹೂಡಿಕೆದಾರರು ಚಿನ್ನದ ಗಟ್ಟಿ ಖರೀದಿಗೆ ಮುಂದಾಗಿರುವುದು ಈ ಬೆಲೆ ಏರಿಕೆಗೆ ಕಾರಣವೆನ್ನಲಾಗಿದೆ.

ಬಂಗಾರದ ದರದಲ್ಲಿ ಮತ್ತೆ ಏರಿಕೆ: ಹೇಗಿದೆ ನಿಮ್ಮ ನಗರದಲ್ಲಿ ಬೆಳ್ಳಿ ಬಂಗಾರದ ದರ

ದೀಪಾವಳಿ ವೇಳೆಗೆ ಇನ್ನಷ್ಟು ಏರಿಕೆ?

ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನದ ದರಗಳು ಬುಧವಾರದಂದು ಹೊಸ ಗರಿಷ್ಠ ರೂ.74,200/10 ಗ್ರಾಂಗೆ ಏರಿಕೆಯಾಗಿದ್ದು, ದೀಪಾವಳಿ ವೇಳೆಗೆ ರೂ.80,000 ಮೀರಿ ಏರಿಕೆಯಾಗಲಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಅದೇ ರೀತಿ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಲಿದೆ ಎಂದಿದ್ದಾರೆ.

Top 10 Gold Mans: ಭಾರತದಲ್ಲಿ ಅತಿಹೆಚ್ಚು ಬಂಗಾರದ ಆಭರಣ ಧರಿಸುವ ವ್ಯಕ್ತಿಗಳು

ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷಗಳಲ್ಲಿ ಇರಾನ್‌ನ ಒಳಗೊಳ್ಳುವಿಕೆಯಿಂದಾಗಿ ಚಿನ್ನದ ಬೆಲೆಯಲ್ಲಿ ಪ್ರಸ್ತುತ ಹೆಚ್ಚಳವಾಗಿದೆ. ಅಂತಹ ಸಂದರ್ಭಗಳಲ್ಲಿ, ವಿಶ್ವಾದ್ಯಂತ ಫೆಡರಲ್ ಬ್ಯಾಂಕುಗಳು ತಮ್ಮ ಚಿನ್ನದ ನಿಕ್ಷೇಪಗಳನ್ನು ಹೆಚ್ಚಿಸಲು ಒಲವು ತೋರುತ್ತವೆ. ಇತ್ತೀಚಿಗೆ ಚೀನಾ ಬೃಹತ್ ಚಿನ್ನದ ಸಂಗ್ರಹವನ್ನು ಸಂಗ್ರಹಿಸುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ. ಇದೇ ರೀತಿ ಮುಂದುವರಿದರೆ ದೀಪಾವಳಿಯ ಮೊದಲು ಚಿನ್ನದ ಬೆಲೆ 10 ಗ್ರಾಂಗೆ 80,000 ರೂ.ಗೆ ತಲುಪುವ ಸಾಧ್ಯತೆಯಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!