
ನವದೆಹಲಿ(ಜೂ.17): ಚಿನ್ನದ ದರ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದ್ದು, 10 ಗ್ರಾಮ್‌ಗೆ 50 ಸಾವಿರ ಗಡಿಗೆ ಇನ್ನಷ್ಟು ಸಮೀಪವಾಗಿದೆ.
ದೆಹಲಿಯಲ್ಲಿ 10 ಗ್ರಾಮ್ ಚಿನ್ನದ ದರ ಮಂಗಳವಾರ 761 ರು. ಏರಿಕೆಯಾಗಿದ್ದು, 48,414 ರು. ಆಗಿದೆ. ಇನ್ನೊಂದೆಡೆ ಮುಂಬೈ ಚಿನ್ನದ ಮಾರುಕಟ್ಟೆಯಲ್ಲಿ 10 ಗ್ರಾಮ್ ಶುದ್ಧ ಚಿನ್ನದ ದರ 47540 ರು. ಹಾಗೂ ಆಭರಣ ಚಿನ್ನದ ದರ 47350 ರು. ಆಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬೇಡಿಕೆ ಮತ್ತು ರುಪಾಯಿ ಮೌಲ್ಯ ಕುಸಿತ ಚಿನ್ನದ ದರ ಏರಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಇದೇ ವೇಳೆ ಒಂದು ಕೆ.ಜಿ. ಬೆಳ್ಳಿಯ ದರ 1,308 ರು. ಏರಿಕೆ ಆಗಿದ್ದು, 49,204 ರು. ಆಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.