ಟ್ರಂಪ್ ಸುಂಕದ ಒತ್ತಡದ ನಡುವೆಯೂ 2% ಇಳಿಕೆಯಾದ ಚಿನ್ನ! ಜಾಗತೀಕಮಟ್ಟದಲ್ಲಾದ ಬೆಳವಣಿಗೆ ಏನು?

Published : May 08, 2025, 02:47 PM IST
ಟ್ರಂಪ್ ಸುಂಕದ ಒತ್ತಡದ ನಡುವೆಯೂ 2% ಇಳಿಕೆಯಾದ ಚಿನ್ನ! ಜಾಗತೀಕಮಟ್ಟದಲ್ಲಾದ ಬೆಳವಣಿಗೆ ಏನು?

ಸಾರಾಂಶ

Gold Price And International Issues: ಜಾಗತಿಕ ಬೆಳವಣಿಗೆಗಳು ಮತ್ತು ಚೀನಾ-ಅಮೆರಿಕ ತೆರಿಗೆ ಮಾತುಕತೆಗಳ ನಡುವೆ ಚಿನ್ನದ ಬೆಲೆಯಲ್ಲಿ ಶೇ.2ರಷ್ಟು ಇಳಿಕೆ ಕಂಡುಬಂದಿದೆ. ಫೆಡ್ ಬಡ್ಡಿದರಗಳನ್ನು ಸ್ಥಿರವಾಗಿರಿಸಿದ್ದು, ಭವಿಷ್ಯದ ಬದಲಾವಣೆಗಳಿಗೆ ಸಿದ್ಧವಾಗಿರುವುದಾಗಿ ಸೂಚಿಸಿದೆ.

ವಾಷಿಂಗ್ಟನ್: ಜಾಗತಿಕಮಟ್ಟದಲ್ಲಾದ ಮಹತ್ವದ ಬೆಳೆವಣಿಕೆಗೆಯಿಂದಾಗಿ ಬುಧವಾರ ಚಿನ್ನದ ಬೆಲೆ ಶೇ.2ರಷ್ಟು ಇಳಿಕೆಯಾಗಿತ್ತು. ಫೆಡೆರಲ್ ರಿಸರ್ವ್ ಬ್ಯಾಂಕ್ (Fed) ಸಹ ತನ್ನ ಬಡ್ಡಿದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಮತ್ತೊಂದೆಡೆ ಡೊನಾಲ್ಡ್ ಟ್ರಂಪ್ ಸುಂಕದಿಂದ ಚೀನಾ ಮತ್ತು ಅಮೆರಿಕ ನಡುವೆ ತೆರಿಗೆ ಸಮರ ಶುರುವಾಗಿತ್ತು. ಇದೀಗ ಚೀನಾ ಮತ್ತು ಅಮೆರಿಕ ನಡುವೆ ತೆರಿಗೆ ಸಂಬಂಧ ಮಹತ್ವದ ಮಾತಕತೆ  ನಡೆದಿರೋದರಿಂದ ಚಿನ್ನದ ಬೆಲೆ ಇಳಿಕೆಯಾಗಿತ್ತು. ಬುಧವಾರ XAU/USD ಟ್ರೇಡ್ 3,438 ರಿಂದ 3,371 ಡಾಲರ್‌ಗೆ ಇಳಿಕೆಯಾಗಿತ್ತು. ಇಂದು ಸಹ ಅಮೆರಿಕದಲ್ಲಿ ಮತ್ತೆ ಶೇ.1ರಷ್ಟು ಬೆಲೆ ಇಳಿಕೆಯಾಗಿದೆ. 

ಬುಧವಾರ ಫೆಡೆರಲ್ ರಿಸರ್ವ್ ಬ್ಯಾಂಕ್ ಈ ವರ್ಷದ ಮೂರನೇ ಸಭೆಯನ್ನು ನಡೆಸಿದ್ದು, 4.25%-4.50% ತನ್ನ ಬಡ್ಡಿದರಗಳನ್ನು ಸ್ಥಿರವಾಗಿ ಕಾಯ್ದುಕೊಂಡಿದೆ. ಆರ್ಥಿಕ ದೃಷ್ಟಿಕೋನದ ಸುತ್ತ ಬೆಳೆಯುತ್ತಿರುವ ಅನಿಶ್ಚಿತತೆ, ಗರಿಷ್ಠ ಉದ್ಯೋಗ ಮತ್ತು ಬೆಲೆ ಸ್ಥಿರತೆ ಎರಡಕ್ಕೂ ಹೆಚ್ಚಿನ ಅಪಾಯಗನ್ನು ಫೆಡ್ ಉಲ್ಲೇಖಿಸಿದೆ. ಫೆಡೆರಲ್ ರಿಸರ್ವ್ ಬ್ಯಾಂಕ್ ಅಧ್ಯಕ ಜೆರೋಮ್ ಪೊವೆಲ್ ಮಾತನಾಡಿ, ಬಡ್ಡಿದರಗಳು ತಟಸ್ಥವಾಗಿವೆ. ಸದ್ಯ ಬಡ್ಡಿದರಗಳನ್ನು ಸ್ಥಿರವಾಗಿ ಕಾಯ್ದುಕೊಳ್ಳುವುದು ಸೂಕ್ತವಾಗಿದೆ.  ಫೆಡ್ ದರಗಳನ್ನು ಬದಲಾವಣೆ ಮಾಡಲು ಯಾವುದೇ ಅವಸರ ಮಾಡಲ್ಲ ಎಂದು ಹೇಳಿದ್ದಾರೆ. 

ಭವಿಷ್ಯದಲ್ಲಿ ಪರಿಸ್ಥಿತಿಗಳು ಬದಲಾದ್ರೆ ಸೂಕ್ತವಾಗಿ ಕಾರ್ಯನಿರ್ವಹಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳುವ ಮೂಲಕ ಬದಲಾವಣೆಗೆ ಕೇಂದ್ರ ಬ್ಯಾಂಕ್ ಸಿದ್ಧಗೊಂಡಿದೆ ಎಂಬ ಸುಳಿವು ನೀಡಿದರು. ಒಂದು ಟ್ಯಾರಿಫ್‌ಗಳು ಸದ್ಯವಿರೋ ಸ್ಥಿತಿಯಲ್ಲಿದ್ರೆ ಫೆಡ್ ತನ್ನ ಗುರಿಗಳನ್ನು ಸಾಧಿಸಲು ಸಂಪೂರ್ಣವಾಗಿ ಸಾಧ್ಯವಾಗಲ್ಲ ಎಂಬ ಮಾತನ್ನು ಸಹ ಜೆರೋಮ್ ಪೊವೆಲ್ ಉಲ್ಲೇಖಿಸಿದರು. 

ಒಂದು ವೇಳೆ ಉಭಯ ದೇಶಗಳು ಟ್ಯಾರಿಫ್ ವಿಷಯಗಳಿಂದ ದೀರ್ಘವಾದ ಅಂತರವನ್ನು ಕಾಯ್ದುಕೊಂಡರೆ ಮರುಸಮತೋಲನಕ್ಕೆ ಯಾವೆಲ್ಲಾ ಕ್ರಮ ಮತ್ತು ನೀತಿಗಳನ್ನು ಸುಧಾರಿಸಿಕೊಳ್ಳಬೇಕು ಎಂಬುದರ ಬಗ್ಗೆ ಫೆಡ್ ಮೌಲ್ಯಮಾಪನ ಮಾಡುತ್ತದೆ ಎಂದರು. ಇದೇ ವೇಳೆ ಹಣದುಬ್ಬರ ಅಥವಾ ಉದ್ಯೋಗ ಸೃಷ್ಟಿ ಯಾವುದು ಮುಖ್ಯ ಪ್ರಶ್ನೆಗೆ ಈಗ ಉತ್ತರಿಸಿದ್ರೆ, ಬಹು ಮುಂಚಿತವಾಗಿ ಉತ್ತರಿಸದಂತೆ ಆಗುತ್ತೆ ಎಂದು ಪ್ರತಿಕ್ರಿಯಿಸಿದರು. 

ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಚಿನ್ನ-ಬೆಳ್ಳಿ ದರ ಏರಿಕೆನಾ? ಇಳಿಕೆನಾ? Ratio ನೀಡ್ತಿದೆ ಅಲರ್ಟ್ ಸಂದೇಶ

ಭೇಟಿ ಸುದ್ದಿ ಬೆನ್ನಲ್ಲೇ ಚೇತರಿಕೆ
ಯುಎಸ್ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಮತ್ತು ಚೀನಾದ ಉಪಾಧ್ಯಕ್ಷ ಹೆ ಲಿಫೆಂಗ್ ಇಬ್ಬರು  ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಭೇಟಿಯಾಗಲಿದ್ದಾರೆ ಎಂಬ ಸುದ್ದಿ ಮಂಗಳವಾರ ಪ್ರಕಟವಾಗಿತ್ತು. ಈ ಸುದ್ದಿಯ ಬೆನ್ನಲ್ಲೇ ಹೂಡಿಕೆದಾರರು ನಿಟ್ಟುಸಿರು ಬಿಟ್ಟಿದ್ದರು. ಈ ಪ್ರಕಟನೆ ಬಳಿಕೆ ಹೂಡಿಕೆದಾರರು ಡಾಲರ್‌ನತ್ತ ಮುಖ ಮಾಡಿದ್ದರಿಂದ ಗ್ರೀನ್ ಬ್ಯಾಂಕ್‌ ವಹಿವಾಟುಗಳಲ್ಲಿಯೂ ಚೇತರಿಕೆ ಕಂಡು ಬಂದಿತ್ತು. 

ಉಭಯ ನಾಯಕರ ಭೇಟಿ ನಡುವೆಯೂ  ರಷ್ಯಾ ಮತ್ತು ಉಕ್ರೇನ್, ಇಸ್ರೇಲ್ ಮತ್ತು ಹಮಾಸ್ ಮತ್ತು ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಸಂಘರ್ಷಗಳ ಮಧ್ಯೆ, ಬುಲಿಯನ್ ಬೆಲೆಗಳು ಏರಿಕೆಯಾಗುತ್ತಲೇ ಇರುತ್ತವೆ. ಭಾರತದಲ್ಲಿಯೂ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. 

ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ 
1 ಗ್ರಾಂ: 9,960 ರೂಪಾಯಿ
8 ಗ್ರಾಂ: 79,680 ರೂಪಾಯಿ
10 ಗ್ರಾಂ: 99,600 ರೂಪಾಯಿ
100 ಗ್ರಾಂ: 9,96,000 ರೂಪಾಯಿ

ಲಕ್ಷದ ಗಡಿ ದಾಟಿ, ಬಳಿಕ ಕೊಂಚ ಇಳಿಕೆ ಕಂಡಿದ್ದ ಚಿನ್ನದ ದರ ಇದೀಗ ಮತ್ತೆ ಲಕ್ಷದ ಗಡಿ ದಾಟಿ ದಾಖಲೆ ಬರೆದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 1,00,750 ರು.ಗೆ ತಲುಪಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ಉದ್ವಿಗ್ನತೆ ದರ ಹೆಚ್ಚಳಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ಲಾಟರಿಯಿಂದ ಖರೀದಿಸಿದ ಜಮೀನಲ್ಲಿ ನಿಧಿ ಪತ್ತೆ; 20kg ತೂಕದ ಮಡಿಕೆಯಲ್ಲೇ ಸಿಕ್ತು ನಿಧಿ!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ
Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?